ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕಿಗೆ ನಾಮನಿರ್ದೇಶಕ ಸದಸ್ಯರಾಗಿ ಶಾಸಕ ಅಶೋಕ್ ಪಟ್ಟಣ ಆಯ್ಕೆ.
ಕರ್ನಾಟಕ ರಾಜ್ಯಪಾಲರ ಆದೇಶ ಅನುಸಾರವಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ರಂಗನಾಥ ಜಿ ಅವರು
ರಾಮದುರ್ಗದ ಶಾಸಕ ಸರ್ಕಾರದ ಮುಖ್ಯ ಸುಚೇತಕ ಅಶೋಕ್ ಪಟ್ಟಣ ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ನಾಮ ನಿರ್ದೇಶಕ ಸದಸ್ಯ ಸ್ಥಾನಕ್ಕೆ ಆಯ್ಕೆ
ಮಾಡಿ ಆದೇಶ ಹೊರಡಿಸಿದ್ದಾರೆ ರಾಮದುರ್ಗ ಪಟ್ಟಣದ ಹೃದಯ ಭಾಗವಾದ ಹುತಾತ್ಮ ಚೌಕನಲ್ಲಿ ಅಶೋಕ್ ಪಟ್ಟಣ ಅಭಿಮಾನಿಗಳು ಹಾಗೂ ಕಾಂಗ್ರೆಸನ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.



