Tuesday, February 10, 2026
31.1 C
Belagavi

ಶೇಡಬಾಳದಲ್ಲಿ ಬೃಹತ್ ರಕ್ತದಾನ ಶಿಬಿರ : ಅಷ್ಠವಿನಾಯಕ ಗಣೇಶ್ ಉತ್ಸವ ಮಂಡಳದ ಹೊಸ ಹೆಜ್ಜೆ

advertisement

spot_img

ಬೆಂಗಳೂರು: ಯುವಕರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತರ ಗುಂಪು ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸಲು ಸಾಧ್ಯವಾಗುತ್ತದೆ. ಈ ಮಹತ್ವಾಕಾಂಕ್ಷೆಯಿಂದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ ಅಷ್ಠವಿನಾಯಕ ಗಣೇಶ್ ಉತ್ಸವ ಮಂಡಳ ಕುಂಬಾರ ಗಲ್ಲಿಯಲ್ಲಿ ಶ್ರೀ ಸಾಯಿ ಲ್ಯಾಬೊರೇಟರೀಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 30ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ.

ದಾನಗಳಲ್ಲಿ ರಕ್ತದಾನ ಮಹಾದಾನ. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರೂ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಮಂಡಳದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಮಾನವನಿಗೆ ಆಕಸ್ಮಿಕ ಸಂದರ್ಭಗಳಲ್ಲಿ ತುರ್ತಾಗಿ ಅಗತ್ಯ ವೇಳೆಯಲ್ಲಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ. ಇದನ್ನರಿತು ಸಮಾಜದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಮಂಡಳದ ಪದಾಧಿಕಾರಿಗಳು ತಿಳಿಸಿದ್ದಾರೆ.

ರಕ್ತದಾನ ಮಾಡಿದರೆ ತಮ್ಮ ದೇಹದ ಕೊಬ್ಬಿನಾಂಶ ಕಡಿಮೆಯಾಗಿ ಹೊಸ ರಕ್ತ ಉತ್ಪತ್ತಿಯಾಗಲಿದೆ. ಅಲ್ಲದೆ ವ್ಯಕ್ತಿಯು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡಲು ಮುಂದಾಗಬೇಕೆಂದು ಸೌರಭ್ ತಳವಾರ, ಉನ್ಮೇಶ್ ಜಾಧವ್, ಓಂಕಾರ್, ಮಹೇಶ್, ಅವಿನಾಶ್, ಅಮಿತ್ ಘೋರ್ಪಡೆ ಹಾಗೂ ಜಗದೀಶ್ ಮರಾಠೆ ಸೇರಿದಂತೆ ಮಂಡಳದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Hot this week

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

Topics

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ.

ಬೆಳಗಾವಿಯ ಗೃಹ ಕಚೇರಿಯಲ್ಲಿ ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ...
spot_img

Related Articles

Popular Categories

spot_img