ನಾವು ಚಿಕ್ಕಂದಿನಿಂದಲೂ ಕೇಳುತ್ತಾ ಬಂದಿದ್ದೇವೆ ರೈತರಿಗೆ ಬೆಂಬಲ ಬೆಲೆ ಸಿಗಬೇಕು ಎನ್ನುವ ಮಾತನ್ನ ಇನ್ನೂ ಸಹ ರೈತರಿಗೆ ನ್ಯಾಯಯುತವಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಪ್ರತಿಕ್ರಿಸಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಜಯ್ ಮುದುಕವಿ.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಇಂದು ರಾಮದುರ್ಗದ ನ್ಯಾಯವಾದಿ ಸಂಘಗದ ವತಿಯಿಂದ ಪ್ರತಿಭಟನೆ ನಿರತರಾಗಿರುವ ಕಬ್ಬು ಬೆಳೆಗಾರರಿಗೆ ಬೆಂಬಲ ಸೂಚಿಸಿದರು ಪಟ್ಟಣದ ಹೃದಯ ಭಾಗವಾದ ಹುತಾತ್ಮ ಚೌಕ್ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು ತದನಂತರ ಬೈಕ್ ರ್ಯಾಲಿ ಮುಖಾಂತರ ಪಟ್ಟಣದ ಶಕ್ತಿ ಕೇಂದ್ರ ವಾದ ಮಿನಿವಿಧಾನಸೌಧಕ್ಕೆ ಬಂದು ತಾಲೂಕ ದಂಡಾಧಿಕಾರಿ ಪ್ರಕಾಶ್ ಹೊಳೆಪಗೋಳ್ ಅವರಿಗೆ ಮನವಿಯನ್ನ ಸಲ್ಲಿಸಿದರು ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘದ ಎಲ್ಲಾ ಪದಾಧಿಕಾರಿಗಳು ಮಹಿಳಾ ನ್ಯಾಯವಾದಿಗಳು ಹಾಗೂ ಎಲ್ಲಾ ನ್ಯಾಯವಾದಿಗಳು ಉಪಸ್ಥಿತರಿದ್ದರು.



