Monday, August 10, 2026
20.5 C
Belagavi

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಲಾಡ್ ಗಂಭೀರ ಆರೋಪ

advertisement

spot_img

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಲಾಡ್ ಗಂಭೀರ ಆರೋಪ

ಬಿಜೆಪಿ ವಿರುದ್ಧ ಸಂತೋಷ ಲಾಡ್ ವಾಗ್ದಾಳಿ: ಅಭಿವೃದ್ಧಿ, ಆರ್ಥಿಕತೆ ಕುರಿತ ಪ್ರಶ್ನೆಗಳು

ಬಾಗಲಕೋಟೆ: ಕೇಂದ್ರ ಸರ್ಕಾರದ ನೀತಿಗಳು, ಅಭಿವೃದ್ಧಿ ಕಾರ್ಯಗಳು ಹಾಗೂ ಆರ್ಥಿಕ ನಿರ್ವಹಣೆ ಕುರಿತು ಸಚಿವ ಸಂತೋಷ ಲಾಡ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಧನ ಸಂಗ್ರಹಣೆಯಿಂದ ಹಿಡಿದು beef export ವರೆಗೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಿಲುವುಗಳನ್ನು ಪ್ರಶ್ನಿಸಿದರು.
ದೆಶದಲ್ಲಿ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ವೃದ್ಧಿಪಡಿಸುವ ಕೆಲಸವನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮಾಡಲಾಗಿದೆ ಎಂದು ಹೇಳಿದರು. ವಿಶಾಖಪಟ್ಟಣಂ, ಮಂಗಳೂರು, ಪಡುರ್ ಪ್ರದೇಶಗಳಲ್ಲಿ ನಿರ್ಮಿಸಿದ ಸಂಗ್ರಹಣಾ ವ್ಯವಸ್ಥೆಯಿಂದ ಇಂದಿಗೂ ಜನರಿಗೆ ಅನುಕೂಲವಾಗುತ್ತಿದೆ ಎಂದರು.
ಬಿಜೆಪಿ ಗೋಮಾತೆ ವಿಚಾರವನ್ನು ಚುನಾವಣಾ ಸಂದರ್ಭದಲ್ಲಿ ಮಾತ್ರ ಪ್ರಸ್ತಾಪಿಸುತ್ತದೆ ಎಂದು ಆರೋಪಿಸಿದ ಲಾಡ್, ಭಾರತವು ವಿಶ್ವದಲ್ಲಿ beef export ನಲ್ಲಿ ಎರಡನೇ ಸ್ಥಾನದಲ್ಲಿರುವುದನ್ನು ಪ್ರಶ್ನಿಸಿದರು. “ಗೋರಕ್ಷಣೆಯ ಮಾತು ಮಾಡುವವರು ಈ ವೈಷಮ್ಯಕ್ಕೆ ಉತ್ತರ ನೀಡಬೇಕು” ಎಂದು ಹೇಳಿದರು.ಮುಂದುವರಿದು, ಕೇಂದ್ರ ಸರ್ಕಾರದ ಮೇಲೆ ಆರ್ಥಿಕ ಅಸಮಾನತೆ ಹೆಚ್ಚಿಸುವ ಆರೋಪ ಮಾಡಿದರು. ದೊಡ್ಡ ಉದ್ಯಮಿಗಳಿಗೆ ಮಾತ್ರ ಲಾಭವಾಗುವಂತೆ ನೀತಿಗಳು ರೂಪಿಸಲಾಗುತ್ತಿವೆ ಎಂದು ಟೀಕಿಸಿದರು. ವಿಶೇಷವಾಗಿ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರಿಗೆ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ ಎಂದು ದೂರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳ ಸ್ಥಾಪನೆ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರಗಳು ಹಲವು ಪಿಎಸ್‌ಯು ಸಂಸ್ಥೆಗಳನ್ನು ಸ್ಥಾಪಿಸಿದ್ದರೆ, ಪ್ರಸ್ತುತ ಸರ್ಕಾರ ಅದರಲ್ಲಿ ಹಿಂದೆಬಿದ್ದಿದೆ ಎಂದು ಅಭಿಪ್ರಾಯಪಟ್ಟರು.
“Make in India” ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡಿಲ್ಲ. ಚೀನಾದೊಂದಿಗೆ ವ್ಯಾಪಾರ ಅಂತರ ಹೆಚ್ಚಾಗಿದೆ. ದೇಶೀಯ ಉತ್ಪಾದನೆ ಹೆಚ್ಚಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಅದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು. ಸರ್ಕಾರದ ವಿರುದ್ಧ ಮಾತನಾಡಿದರೆ ವಿಷಯಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಅಭಿವೃದ್ಧಿ, ಆರ್ಥಿಕ ಸಮತೋಲನ ಹಾಗೂ ಜನರ ಜೀವನಮಟ್ಟವನ್ನು ಸುಧಾರಿಸುವ ವಿಷಯದಲ್ಲಿ ಗಂಭೀರ ಚರ್ಚೆ ಅಗತ್ಯವಿದೆ ಎಂದು ಸಂತೋಷ ಲಾಡ್ ಅಭಿಪ್ರಾಯಪಟ್ಟರು.

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img