ಮತ್ತೆ ಮುಂಚೂಣಿಯಲ್ಲಿ ಕರ್ನಾಟಕ!: ಇನ್ವೆಸ್ಟ್ ಕರ್ನಾಟಕ ಕಾನ್’ಕ್ಲೇವ್-2026 ಅಪ್ರತಿಮ ಸಾಧನೆ
₹51,469 ಕೋಟಿ ಹೂಡಿಕೆ | 48 ಪ್ರಮುಖ ಕಂಪನಿಗಳು| 70,000+ ಉದ್ಯೋಗ ಸೃಷ್ಟಿ!
ಕರ್ನಾಟಕವು ಹೂಡಿಕೆಗಳನ್ನು ಆಕರ್ಷಿಸಿ ನಮ್ಮ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ದಿಶೆಯಲ್ಲಿ ನಿರಂತರವಾಗಿ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶ 2026ರಲ್ಲಿ 48 ಕಂಪನಿಗಳಿಂದ ₹51,469 ಕೋಟಿಗಳ ಹೂಡಿಕೆ ಭರವಸೆಗಳನ್ನು ಪಡೆದುಕೊಂಡಿದ್ದು, ಇದರಿಂದ ಸುಮಾರು70,000 ಉದ್ಯೋಗಗಳು ಸೃಷ್ಟಿಯಾಗಲಿದೆ.
Mahindra Aerospace, Ultraviolette, Aequs, SFO Technologies ಸೇರಿದಂತೆ ಜಾಗತಿಕ ಮತ್ತು ದೇಶೀಯ ಹೂಡಿಕೆದಾರರ ಭರವಸೆ-ನಮ್ಮ ನೀತಿ, ಪ್ರತಿಭೆ ಮತ್ತು ಕಾರ್ಯಕ್ಷಮತೆಗೆ ದೊರೆತ ಮುದ್ರೆ!
Aerospace, EV, ESDM, Data Centers, Pharma, Manufacturing-ಪ್ರತಿ ಕ್ಷೇತ್ರದಲ್ಲೂ ಭರ್ಜರಿ ಹೂಡಿಕೆ, ಸಮಗ್ರ ಬೆಳವಣಿಗೆಗೆ ದೃಢ ಅಡಿಗಲ್ಲು.
ಸರಳೀಕೃತ ನಿಯಮಗಳು, Single Window System, Special Investment Regions, ಸುಧಾರಿತ ಮೂಲಸೌಕರ್ಯ- ಇವೆಲ್ಲವೂ ಕರ್ನಾಟಕವನ್ನು ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿ ಮತ್ತಷ್ಟು ಬಲಪಡಿಸುತ್ತಿವೆ.
ಆವಿಷ್ಕಾರಗಳ ನೆಲೆವೀಡಾದ ಕರ್ನಾಟಕವು ಜಾಗತಿಕ ಉದ್ಯಮ ಭೂಪಟದಲ್ಲಿ ಅಪ್ರತಿಮ ಶಕ್ತಿಯಾಗಿ ಉದಯಿಸಿದೆ. ಇದು ನವ ಕರ್ನಾಟಕದ ಸುಸಜ್ಜಿತ ಉದ್ಯಮ ಪಥದ ಹೊಸ ಮೈಲಿಗಲ್ಲು.



