ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಾತನಾಡಲು ಎದ್ದಾಗಲೂ ತಮ್ಮನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ,
ಬೆಂಗಳೂರು: ಪ್ರತಿ ಸಲ ಮಾತನಾಡುವಾಗ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತೀರಿ ಎಂದು ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಅಸಮಾಧಾನ ಹೊರಹಾಕಿದ್ದಾರೆ. ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ವಿಧೇಯಕ ಬಗ್ಗೆ ಮಾತನಾಡಲು ಮುಂದಾದರು. ಈ ವೇಳೆ ಸ್ಪೀಕರ್ ತಡೆಯುವ ಕೆಲಸವನ್ನು ಮಾಡಿದರು. ಇದರಿಂದ ಅಸಮಾಧಾಗೊಂಡ ಶಾಸಕ ಕಂದಕೂರು, ಪ್ರತಿ ಸಲ ನಾನು ಮಾತನಾಡಲು ಎದ್ದಾಗ ಹೀಗೇ ಮಾಡ್ತೀರಿ. ನಾವೂ ಜನರಿಂದ ಆಯ್ಕೆ ಆಗಿ ಬಂದವರು. ಪ್ರತಿ ಸಲ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡ್ತೀರಿ. ಸದನದ ಸದಸ್ಯ ನಾನು, ಈ ರೀತಿಯ ಅಗೌರವ ತೋರಬೇಡಿ ಎಂದು ಜೋರು ಧ್ವನಿಯಲ್ಲಿಯೇ ಬೇಸರ ಹೊರಹಾಕಿದರು.