ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ
ಒಟ್ಟು 10 ದಿನಗಳ ಕಾಲ ನಡೆಯಲಿರುವ ಅಧಿವೇಶನದ ಕಲಾಪ
ಉತ್ತರ ಕರ್ನಾಟಕ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರದ ಚರ್ಚೆಯತ್ತ ರಾಜ್ಯ ಜನತೆಯ ಗಮನ
ಜೊತೆಗೆ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹಣಿಯಲು ರಾಜ್ಯ ಸರ್ಕಾರದಿಂದಲೂ ತಯಾರಿ
ನಾಯಕತ್ವದ ಗೊಂದಲದಿಂದ ಕೈ ಪಡೆಯಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ
ಅಧಿವೇಶನದಲ್ಲಿ ಸರ್ಕಾರಕ್ಕೆ ಚಾಟಿ ಏಟು ಬೀಸಲು ವಿಪಕ್ಷಗಳ ರಣ ತಂತ್ರ
ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು
* ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಸಿಗದ ಬೆಂಬಲ
* ಮೆಕ್ಕೆ ಜೋಳ ವಿಚಾರದಲ್ಲಿ ಸರ್ಕಾರದ ನಡೆಗೆ ಅನ್ನದಾತರಲ್ಲಿ ಭುಗಿಲೇದ್ದ ಆಕ್ರೋಶ
* ಸರ್ಕಾರಕ್ಕೆ ತಲೆನೋವಾಗಿರೋ ಪಂಚಮಸಾಲಿ ಸಮುದಾಯದ ಹೋರಾಟ
* ಅಲೆಮಾರಿ ಸಮುದಾಯದಿಂದ 1% ಮೀಸಲಾತಿಗೆ ಒತ್ತಾಯ
* ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ವಿಳಂಬ ಧೋರಣೆ
* ಸರ್ಕಾರ ರೈತ ವಿರೋಧಿ ಎಂದು ಬಿಂಬಿಸಿ ಡಿ.9ರಂದು ಬಿಜೆಪಿ ಪ್ರತಿಭಟನೆ
* ಗೋ ಸರಂಕ್ಷಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರೋ ಸರ್ಕಾರದ ವಿರುದ್ದ ಹಿಂದೂ ಸಂಘಟನೆಗಳಿಂದ ಪ್ರೊಟೆಸ್ಟ್

ಇದರ ನಡುವೆ ಸದನದಲ್ಲಿ ಸರ್ಕಾರದ ಆಡಳಿತವನ್ನು ಟೀಕೆ ಮಾಡಲಿರೋ ವಿಪಕ್ಷಗಳು
ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲ, ಗ್ಯಾರಂಟಿ ಯೋಜನೆಗಳು ವಿಫಲ…
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಸಾಧನೆ ಶೂನ್ಯ ಎಂಬ ಆರೋಪ
ವಿವಿಧ ಇಲಾಖೆಯಲ್ಲಿ ಕಂಡುಬಂದಿರೋ ಭ್ರಷ್ಟಾಚಾರದ ವಾಸನೆ
ಕ್ಷೇತ್ರದ ಶಾಸಕರಿಗೆ ಅನುದಾನ ಕೊಡದೇ ರಾಜಕೀಯ ಮಾಡ್ತಿರೋ ಸರ್ಕಾರ ಎಂಬ ಆರೋಪ
ಅಧಿವೇಶನ ಮೊದಲ ದಿನವೇ ಸರ್ಕಾರಕ್ಕೆ ಸಾಲು ಸಾಲು ಸವಾಲುಗಳು ಎದುರಾಗೋ ಸಾಧ್ಯತೆ….



