ರಾಜ್ಯ ರೈಲ್ವೆ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಕುತುಬುದ್ದೀನ್ ಖಾಜಿ ಅವರ ಸೊಸೆಯಾದ ಸಾಲಿಹ ತೌಶಿಫ್ ಅಹಮದ್ ಖಾಜಿ ಅವರು ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಡಾ ಜಿ ಪಿ ದಿನೇಶ್ ಅವರ ಮಾರ್ಗದರ್ಶನದಲ್ಲಿ ಟ್ಯಾಪಿಂಗ್ ದ ಸ್ಪಂಡಿಂಗ್ ಪವರ್ ಆಫ್ ಯಂಗ್ ಕನೆಕ್ಟಡ್ ಅರ್ಬನ್ ಮಾಸ್ ವಿದ್ ರೆಫೆರೆನ್ಸ್ ಟು ಕಲ್ಯಾಣ ಕರ್ನಾಟಕ ರೀಜನ್ ಎಂಬ ವಿಷಯದ ಮೇಲೆ ಮಂಡಿಸಿರುವ ಮಹಾಪ್ರಂಬಂಧಕ್ಕೆ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪಿ. ಹೆಚ್. ಡಿ ಪದವಿ ನೀಡಿದೆ.ಜುಲೈ 4ರಂದು ನಡೆದ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಟಕೋತ್ಸವದಲ್ಲಿ ಸಾಲಿಹ ತೌಸಿಫ್ ಅಹಮದ್ ಕಾಜಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.
ಪಿ. ಹೆಚ್. ಡಿ ಪದವಿ ಪಡೆದ ಸಾಲಿಹ ತೌಸೀಪ್ ಅಹಮದ್ ಖಾಜಿ ಅವರಿಗೆ ರಾಜ್ಯ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಬಂಧು ಬಳಗದವರು ಇವರ ಸಾಧನೆಗೆ ಅಭಿನಂದಿಸಿದ್ದಾರೆ.