Saturday, April 11, 2026
23.8 C
Belagavi

ಬಜೆಟ್‌ʼನಲ್ಲಿ ಬೃಹತ್‌ ಕೈಗಾರಿಕೆ ಕ್ಷೇತ್ರಕ್ಕೆ ಭಾರೀ ಒತ್ತು ಹೆಚ್.ಡಿ. ಕುಮಾರಸ್ವಾಮಿ

advertisement

spot_img

ಬಜೆಟ್‌ʼನಲ್ಲಿ ಬೃಹತ್‌ ಕೈಗಾರಿಕೆ ಕ್ಷೇತ್ರಕ್ಕೆ ಭಾರೀ ಒತ್ತು

4 ರಾಜ್ಯಗಳಲ್ಲಿ ರೇರ್‌ ಅರ್ಥ್‌ ಕಾರಿಡಾರ್‌ & ಇವಿ ಬ್ಯಾಟರಿ ತಯಾರಕರಿಗೆ ಸುಂಕ ವಿನಾಯಿ ಮುಂದುವರಿಕೆ

ಇವಿ ಪೂರೈಕೆ ಸರಪಳಿ ಬಲಪಡಿಸಲು ಸುಂಕ ವಿನಾಯಿತಿ

ಉಕ್ಕು ವಲಯ ಸ್ಥಿರತೆಗೆ ಒತ್ತು; ಇಂಗಾಲ ಹೊರಸೂವಿಕೆ ತಗ್ಗಿಲು ಭಾರೀ ಯೋಜನೆ

ನವದೆಹಲಿ: ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಭೂಮಿಯಲ್ಲಿನ ಅಪರೂಪದ ಅಯಸ್ಕಾಂತಗಳ (ರೇರ್‌ ಅರ್ಥ್‌ ಮೆಟಲ್ಸ್)‌ ಉತ್ಪಾದನೆ-ಬಳಕೆ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಉತ್ತೇಜನಕ್ಕೆ ದೊಡ್ಡ ಪ್ರಮಾಣದ ಘೋಷಣೆಗಳನ್ನು ಮಾಡಲಾಗಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಇವಿ ಬ್ಯಾಟರಿಗಳು ಮತ್ತು ಇವಿ ವಾಹನಗಳ ಚಲನಶೀಲತೆಯನ್ನು ಉತ್ತೇಜಿಸಲು ಬಜೆಟ್‌ ನಲ್ಲಿ ಒತ್ತು ನೀಡಲಾಗಿದ್ದು; ಬ್ಯಾಟರಿ ತಯಾರಿಕೆಗೆ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಮುಂದುವರಿಸಲಾಗಿದೆ. ಅಲ್ಲದೆ; ಬ್ಯಾಟರಿ ಉತ್ಪಾದನೆ ಮತ್ತು ಇವಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಕೆ ಮಾಡಲಾಗುವ ಬಂಡವಾಳ ಸರಕುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕ (ಬಿಸಿಡಿ) ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಸೌರ ಗಾಜಿನ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೋನೇಟ್ ಆಮದಿನ ಮೇಲೆ ಮೂಲ ಅಬಕಾರಿ ಸುಂಕ (BCD) ವಿನಾಯಿತಿ ನೀಡಲಾಗಿದೆ. ದೇಶೀಯ ಸೌರ ಉತ್ಪಾದನೆಯನ್ನು ಬಲಪಡಿಸಲು ಮತ್ತು ಇವಿ, ನವೀಕರಿಸಬಹುದಾದ ಪೂರೈಕೆ ಸರಪಳಿಗಳನ್ನು ಬೆಂಬಲಿಸಲು ಉತ್ತೇಜನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭೂಮಿಯಲ್ಲಿನ ಅಪರೂಪದ ಖನಿಜಗಳನ್ನು ಹೊರತೆಗೆದು ಬಳಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗಿದೆ. ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ರೇರ್‌ ಅರ್ಥ್‌ ಕಾರಿಡಾರ್‌ ಗಳನ್ನು ಸ್ಥಾಪಿಸುವ ಬಗ್ಗೆ ಬಜೆಟ್‌ ನಲ್ಲಿ ಘೋಷಣೆ ಮಾಡಲಾಗಿದೆ. ಅಪರೂಪದ ಭೂಮಿಯ ಶಾಶ್ವತ ಮ್ಯಾಗ್ನೆಟ್ (REPM) ಯೋಜನೆ ಅಡಿಯಲ್ಲಿ ಸಚಿವ ಸಂಪುಟವು ಅನುಮೋದಿಷಸಿರುವ ₹7,280 ಕೋಟಿ ವೆಚ್ಚದ ಯೋಜನೆ ಮುಂದುವರಿದ ಭಾಗವಾಗಿ ರೇರ್‌ ಅರ್ಥ್‌ ಕಾರಿಡಾರ್‌ʼಗಳು ತಲೆ ಎತ್ತಲಿವೆ ಎಂದು ಸಚಿವರು ಹೇಳಿದ್ದಾರೆ.

ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ಒತ್ತು

ಉಕ್ಕು ಸಚಿವಾಲಯಕ್ಕೆ ಸಂಬಂಧಿಸಿ ಉಕ್ಕು ವಲಯದ ಸುಸ್ಥಿರತೆಯನ್ನು ಉತ್ತೇಜಿಸುವುದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಬಜೆಟ್‌ ಒತ್ತು ನೀಡಿದೆ. ಉಕ್ಕು, ಸಿಮೆಂಟ್ ಮತ್ತು ಸಂಸ್ಕರಣಾಗಾರಗಳಿಂದ ಇಂಗಾಲದ ಹೊರಸೂಸುವಿಕೆ ವಲಯಗಳಿಗೆ ₹20,000 ಕೋಟಿಗಳ ಪ್ರಸ್ತಾವಿತ ಹೂಡಿಕೆಯೊಂದಿಗೆ ಇಂಗಾಲದ ನಿವಾರಣೆಗೆ ಒತ್ತು ಕೊಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈ ಉಪಕ್ರಮವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸುತ್ತದೆ, ಅದೇ ಸಮಯದಲ್ಲಿ ಭಾರತದ ಪ್ರಮುಖ ಕೈಗಾರಿಕೆಗಳು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಪರಿಸರ ಜವಾಬ್ದಾರಿಯುತವಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

Hot this week

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

Topics

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...
spot_img

Related Articles

Popular Categories

spot_img