ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಹಿನ್ನಲೆ ಇಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಭರ್ಜರಿ ಪ್ರಚಾರ ಮಾಡಿದರು
ಇಂದು ಹಣಮಾಪುರ ಗ್ರಾಮಕ್ಕೆ ತೆರಳಿ ಮತಯಾಚನೆಯನ್ನ ಮಾಡಿದ್ರು.. ಇದೇ ವೇಳೆ ಮಾತನಾಡಿದ ಬಿ.ಎಸ್ ಬೆಳವಣಿಕಿ ಮಹಾದೇವಪ್ಪ ಯಾದವಾಡ ಅವರು ಕಾರ್ಖಾನೆಯಾಗಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಅಲ್ಲದೇ ಸರ್ಕಾರ ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿ ಕಾರ್ಖಾನೆಯನ್ನ ಲೀಸ್ ನೀಡಿದ್ರು ಅಲ್ಲದೇ ಶೇರುದಾರರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಅವರಿಗೆ ಸಕ್ಕರೆಯನ್ನ ನೀಡಿದ್ದಾರೆ ಜೊತೆಗೆ ಕಾರ್ಖಾನೆ ಲಾಭದಾಯಕವಾಗಿ ನಡೆಯಲು ಸಹಕಾರಿಯಾಗಿದ್ದಾರೆ ಎಂದು ತಿಳಿಸಿದ್ರು ಈ ವೇಳೆ ಹಣಮಾಪುರ ಗ್ರಾಮದ ಹಿರಿಯರಾದಶಿವನಗೌಡ ಪಾಟೀಲ, ಶಿವಪ್ಪ ಹೊಸಕೋಟಿ,ಕೃಷ್ಣಪ್ಪ ಹೊಸಕೋಟಿ,ಶಿವಪ್ಪ ಹೊಸಕೋಟಿ,ಶಿವನಗೌಡ ಪಾಟೀಲ,ಶ್ರೀಕಾಂತ ಬೆನಪ್ಪನ್ನವರ, ಸುಭಾಷ ರಾಮದುರ್ಗ,ಅಶೋಕ ಪೂಜಾರ ಉಪಸ್ಥಿತರಿದ್ದರು