ಮುದೇನೂರು ಗ್ರಾಮದ ಬಬಲಾದಿ ನಗರ ಕೆಸರು ಗದ್ದೆಯಾದ ರಸ್ತೆ: ಜನ ಸಂಚಾರ ಅಸ್ತವ್ಯಸ್ತ….
ಬೆಳಗಾವಿ : ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಬಬಲಾದಿ ನಗರದಲ್ಲಿ ಸುಮಾರು 15 ವರ್ಷ ಕಳೆದರೂ ಇದುವರೆಗೂ ರಸ್ತೆ ಸುಧಾರಣೆಯಾಗಿಲ್ಲ. ಮಳೆಯಾದರೆ ಸಾಕು ರಸ್ತೆಯಲ್ಲ ಹದಗೆಟ್ಟು ಹೋಗಿರುತ್ತದೆ ಇದರ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆ ಮಾಡದೆ ಹಾಗೆ ಬಿಟ್ಟಿರುವ ಅಧಿಕಾರಿಗಳು ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರಿಗಳ ಆಟಾಟೋಪಕ್ಕೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ದಿನಂಪ್ರತಿ ತೊಂದರೆ ಅನುಭವಿಸುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದ ಜನರು ಪರಿತಪಿಸುವಂತಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.