Monday, April 13, 2026
37.1 C
Belagavi

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

advertisement

spot_img

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ*

ಕೆಎಲ್ ಇ ಸಂಸ್ಥೆಯಿಂದ ಅರಟಾಳ ರುದ್ರಗೌಡರ ಹೆಸರು ಶಾಸ್ವತವಾಗಿ ಉಳಿಯುವಂತಹ ಕೆಲಸ ಮಾಡಬೇಕು: ಬಸವರಾಜ ಬೊಮ್ಮಾಯಿ

ಹಾವೇರಿ ( ಶಿಗ್ಗಾವಿ) ಕೆಎಲ್ ಇ ಸಂಸ್ಥೆಯನ್ನು ಕಟ್ಟಿರುವ ಸಪ್ತರ್ಷಿಗಳಲ್ಲಿ ಅರಟಾಳ ರುದ್ರಗೌಡರು ಒಬ್ಬರು ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಕೆಎಲ್ ಇ ಸಂಸ್ಥೆ ವತಿಯಿಂದ ಅವರ ಹೆಸರು ಶಾಸ್ವತ ಆಗುವಂತ ಕೆಲಸವನ್ನು ಬೆಳಗಾವಿ ಮತ್ತು ಅರಟಾಳದಲ್ಲಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಅರಟಾಳ ಗ್ರಾಮದಲ್ಲಿ ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಶ್ರೀ ವರವೀರಭದ್ರಸ್ವಾಮಿಯ 32 ನೇಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅರಟಾಳ ನಮ್ಮ ಪ್ರದೇಶದ ಒಂದು ಭಾಗ ಆಗಿರುವುದು ನಮ್ಮೆಲ್ಲರ ಪುಣ್ಯ. ಯಾಕೆಂದರೆ ಈ ಮಣ್ಣು ಅತ್ಯಂತ ಶ್ರೇಷ್ಠ ಪುರುಷನಿಗೆ ಜನ್ಕ ಕೊಟ್ಟಿದೆ. ಪರಕೀಯರ ಆಡಳಿತದಲ್ಲಿ ಭಾರತ ದೇಶ ಇದ್ದಾಗ ಯಾರಿಗೂ ಕೂಡ ಕಲ್ಪನೆ ಇಲ್ಲ. ಶಿಕ್ಷಣ ಅದರ ಮಹತ್ವ ಅದನ್ನು ನಮ್ಮ‌ಜನಕ್ಕೆ ಕೊಡಬೇಕು. ಪರಕೀಯರು ಬ್ರಿಟಿಷರು ನಮಗೆ ಶಿಕ್ಚಣ ಕೊಡುವುದಿಲ್ಲ. ನಮ್ಮನ್ನು ಎಲ್ಲಿ ಇಟ್ಟಿದ್ದರು ಅಲ್ಲಿಯೆ ಇಡುತ್ತಾರೆ. ಶಿಕ್ಷಣ ಮಾತ್ರ ನಮ್ಮನ್ನು ಉದ್ದಾರ ಮಾಡುತ್ತದೆ ಎಂದು ಸರ್ಕಾರದ ಬೆಂಬಲ ಇಲ್ಲದಾಗ ಅವತ್ತಿನ ದೇಶಗತ್ತಿ ಮನೆತನ, ದೇಸಾಯರು ನಾಡಗೌಡರ ಮನೆತನಗಳು ಬೆಳಗಾವಿ ವಿಭಾಗದಲ್ಲಿದ್ದವು. ಆಗ ಕಲ್ಪಿಸಿಕೊಂಡು ಹಿರಿಯರನ್ಮು ದಾನ ಮಾಡುವಂತೆ ಮನವೊಲಿಸಿ ತಾವೆ ಮುಂದೆ ನಿಂತು ದಾನಮಾಡುವಂತೆ ಮಾಡಿ ಕೆಎಲ್ ಇ ಸಂಸ್ಥೆಯನ್ನು ತಾವೆ ಮುಂದೆ ನಿಂತು ಸಹಿ ಮಾಡಿಸಿದ ಸಪ್ತ ಋಷಿಗಳಲ್ಲಿ ಅರಟಾಳ ರುದ್ರಗೌಡರು ಒಬ್ಬರು. ಅರಟಾಳ ರುದ್ರಗೌಡ ಅವರಿಗೆ ಎಷ್ಟು ಗೌರವ ಸಿಗಬೇಕಿತ್ತೊ ಅಷ್ಟು ಸಿಕ್ಕಿಲ್ಲ. ಇದನ್ನು ಬೆಳಗಾವಿ ನಾಯಕರು ಒಪ್ಪಿಕೊಂಡು ಗುರುತು ಮಾಡಬೇಕು. ಇಲ್ಲದಿದ್ದರೆ ಕಾಲವೇ ಗುರುತು ಮಾಡುವ ಕಾಲ ಬರುತ್ತದೆ. ಆಗ ನಿಮ್ಮ ಪಾತ್ರ ಏನೂ ಇರುವುದಿಲ್ಲ. ಬಹಳ ಕಷ್ಟಪಟ್ಟು ಬೈದು ಇವರನ್ನು ಹುಬ್ಬಳ್ಳಿವರೆಗೂ ತಂದಿದ್ದೇವೆ‌ ಎಂದು ಹೇಳಿದರು.

ಕೆಎಲ್ ಇ ಸಂಸ್ಥೆಯ ಹಿಂದಿನ ಮುಖ್ಯಸ್ಥರಾಗಿದ್ದ ಸಿ.ಬಿ ಕೋರೆಯವರು ಅವರ ಹಿಂದಿನವರೊಂದಿಗೆ ಪ್ರಭಾಕರ ಕೋರೆ ಬಂದರು ಅವರೊಂದಿಗೆ ಉತ್ತಮ ಸಂಬಂದ ಇಟ್ಟುಕೊಂಡಿದ್ದೇವೆ‌.‌ ಈಗ ಅವರ ಮಗನೊಂದಿಗೂ ಉತ್ತಮ ಸಂಬಂಧ ಇಟ್ಟು ಕೊಂಡಿದ್ದೆವೆ. ಸಂಸ್ಥೆ ನಮಗೆ ಬಹಳ ಮುಖ್ಯ. ನಾವೆಲ್ಲ ಇಲ್ಲಿ ನಿಂತು ಮಾತನಾಡುವ ಶಕ್ತಿ ನೀಡಿದ್ದು ಕೆ ಎಲ್ ಇ ಸಂಸ್ಥೆ. ಈ ಸಂಸ್ಥೆಯ ಮೂಲಕ ಜ್ಞಾನ ಹಂಚುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಹಲವಾರು ಊರುಗಳಲ್ಲಿ ಬಡವರಿಗೆ ಅನುಕೂಲವಾಗಿದೆ. ಇದರ ಮೂಲ ಅಂಕುರ ಹಾಕಿದವರು ಏಳು ಜನ ಸಪ್ತರ್ಷಿಗಳು. ರುದ್ರಗೌಡರ ಪಾತ್ರವನ್ನು ನೆನಪು ಮಾಡಿಕೊಂಡು ಅವರ ಹೆಸರು ಶಾಸ್ವತ ಆಗುವಂತ ಕೆಲಸವನ್ನು ಬೆಳಗಾವಿ ಮತ್ತು ಅರಟಾಳನಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.

*ಕ್ರಾಂತಿ ಮಾಡಿದ್ದಾರೆ*

1847 ರಲ್ಲಿ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಗಿದ್ದು ಅರಟಾಳ ರುದ್ರಗೌಡರು ಅವರು ಕ್ರಾಂತಿಯ ಕಾಲದಲ್ಲಿ ಹುಟ್ಟಿದ್ದರು ಅದಕ್ಕೆ ಕ್ರಾಂತಿ ಮಾಡಿದ್ದಾರೆ. ಅವರ ಸವಿ ನೆನಪಿಗಾಗಿ ಇಲ್ಲಿ ಸಂಸ್ಥೆ ಮಾಡಬೇಕು. ಈ ಭಾಗದಲ್ಲಿ ಶಿಕ್ಷಣ ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು. ಇಲ್ಲಿ ಒಂದು ತಂಡ ಮಾಡಿ ಕೆ ಎಲ್ ಇ ಸಂಸ್ಥೆಯಿಂದ ಮಾಡುವ ಶಕ್ತಿ ಇದೆ‌ ಎಂದು ಹೇಳಿದರು.

ರಂಭಾಪುರಿ ಶ್ರೀಗಳ ಆಶಿರ್ವಾದ ಅರಟಾಳ ರುದ್ರಗೌಡರ ಕುಟುಂಬಕ್ಕೆ ಇದೆ, ಅರಟಾಳ ರುದ್ರಗೌಡರ ಹೆಸರು ಅವರ ಕಾರ್ಯ, ತ್ಯಾಗ ಸೂರ್ಯ ಚಂದ್ರ ಇರುವವರೆಗೂ ಇರುತ್ತದೆ. ಆ ಗೌರವ ಉಳಿಸಿಕೊಂಡು ಹೋಗಬೇಕು. ನಾವು ಸದಾಕಾಲ ನಿಮ್ಮ ಜೊತೆಗೆ ಇರುತ್ತೇವೆ. ಎಲ್ಲರೂ ಸೇರಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀಕೆಂದ್ರ ಶಿವಾಚಾರ್ಯ ಭಗವತ್ಪಾದರು, ಬಾಳೆಹೊನ್ನೂರು ಶ್ರೀಗಳು ಸೇರಿದಂತೆ ಹಲವಾರು ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಹಾಗೂ ಮಾಜಿ ಸಂಸದರಾದ ಮಂಜುನಾಥ ಕುನ್ನೂರ, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಮುಖಂಡರಾದ ಶಶಿಧರ ಯಲಿಗಾರ, ಸಿದ್ಧಾರ್ಥಗೌಡ ಪಾಟೀಲ್ ಸೇರಿದಂತೆ ಶ್ರೀಮತಿ ಶೀಲಾ ಚನ್ನವೀರಗೌಡ ಪಾಟೀಲ್ ದಂಪತಿಗಳು ಹಾಗೂ ಶ್ರೀಮತಿ ಮಂಜುಳಾ ವಿರೇಶ ಪಾಟೀಲ್ ದಂಪತಿಗಳು ಉಪಸ್ಥಿತರಿದ್ದರು

Hot this week

ಅಭಿವೃದ್ಧಿಯ ಪಥದಲ್ಲಿ ದೆಹಲಿ ಬಿಜೆಪಿ: ಹಿನ್ನಡೆಯ ಹಾದಿಯಲ್ಲಿ ಕರ್ನಾಟಕ ಕಾಂಗ್ರೆಸ್:ಭರತ್ ಬೊಮ್ಮಾಯಿ

*ಅಭಿವೃದ್ಧಿಯ ಪಥದಲ್ಲಿ ದೆಹಲಿ ಬಿಜೆಪಿ: ಹಿನ್ನಡೆಯ ಹಾದಿಯಲ್ಲಿ ಕರ್ನಾಟಕ ಕಾಂಗ್ರೆಸ್:ಭರತ್ ಬೊಮ್ಮಾಯಿ* ಬೆಂಗಳೂರು:...

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

Topics

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...
spot_img

Related Articles

Popular Categories

spot_img