ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯ ಶ್ರೀಮತಿ ಐ ಎಸ್ ಯಾದವಾಡ ಕಾಲೇಜಿನ ಎನ್ ಎಸ್ ಎಸ್ ಘಟಕ್ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ರಾಮದುರ್ಗ ಇವರ ವತಿಯಿಂದ ಇಂದು ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ರೈತರ ಜಾನುವಾರುಗಳಿಗೆ ಉಚಿತ ಚಿಕ್ಸಿತಾ ಕಾರ್ಯಕ್ರಮ ನಡೆಸಲಾಯಿತು.
ಜಾನುವಾರು ಆರೋಗ್ಯದ ಶಿಬಿರದಲ್ಲಿ ಜಾನುವಾರುಗಳ ಗರ್ಭ ತಪಾಸಣೆ ಮತ್ತು ಪಶು ಆರೋಗ್ಯದ ಬಗ್ಗೆ ಹಾಗೂ ಸಾಕು ಪ್ರಾಣಿಗಳಲ್ಲಿ ಕಂಡು ಬರುವ ರೋಗಗಳು ಹಾಗೂ ಅವುಗಳ ಚಿಕ್ಸಿತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಹಾಗೂ ರೈತರಿಗೆ ತಿಳುವಳಿಕೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎಂ.ಡಿ ಕಮತಗಿ,ಎನ್ ಎಸ್ ಎಸ್ ಘಟಕದ ಮುಖ್ಯಸ್ಥರಾದ ಸಿದ್ದಾರೂಢ ಬಸಗುಂದಿ, ವಿನಾಯಕ ಹೊಸಮನಿ ಎಂ, ಪಶು ಇಲಾಖೆ ತಾಲೂಕು ಅಧಿಕಾರಿಗಳಾದ ಡಾ. ಗಿರೀಶ ಪಾಟೀಲ, ಡಾ. ಪ್ರಶಾಂತ ಕುಮಾರ, ಡಾ.ವಿನಾಯಕ ಈಟಿ,ಪಶು ಕಿರಿಯ ಸಹಾಯಕ ನಾಮದೇವ ಲಮಾಣಿ,ಮೈತ್ರಿ ಕಾರ್ಯಕರ್ತರಾದ ನವೀನ ಕುಮಾರ ಯಲಗಾರ,ರಾಜು ಬನ್ನಿಗಿಡದ ಸೇರಿದಂತೆ ರೈತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Trending Now



