Friday, December 12, 2025
17.1 C
Belagavi

ಜೆ ಟಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಮುರುಗೇಶ ನಿರಾಣಿ

advertisement

spot_img

ಬಾಗಲಕೋಟೆ: ನಾನು, ನಮ್ಮ ಸಹೋದರರು, ಮಕ್ಕಳು ಎಲ್ಲರೂ ಸೇರಿ ಒಂದು ದಿನಕ್ಕೆ 18 ತಾಸು ಕೆಲಸ ಮಾಡಿ ಕೆಲಸ ಮಾಡಿ ನಾವು ಇಂದು ಈ ಸ್ಟೇಜಿಗೆ ಬಂದಿದ್ದೇವೆ. ಮುರುಗೇಶ ನಿರಾಣಿ ಎಂಎಲ್ಎ ಆಗುವ ಪೂರ್ವದಲ್ಲೇ ಸಕ್ಕರೆ ಕಾರ್ಖಾನೆ, ಸಿಮೆಂಟ್ ಫ್ಯಾಕ್ಟರಿ ಆರಂಭಗೊಂಡಿವೆ. ಎಂಎಲ್ಎ ಆದ ಮೇಲೆ ಆಗಿಲ್ಲ. ನಿರಾಣಿ ಅವರು ಹಗಲು ರಾತ್ರಿ ಕೆಲಸ ಮಾಡಿ‌ ದೊಡ್ಡವರಾಗಿದ್ದಾರೆ.‌ ನಿಮ್ಮ ಹಾಗೆ
ಮಸಾಜ್ ಮಾಡಿಕೊಳ್ಳುವುದರಲ್ಲಿ ಕಾಲ ಕಳೆದಿಲ್ಲ ಎಂದು‌ ಮಾಜಿ‌ ಸಚಿವ ಮುರುಗೇಶ‌ ನಿರಾಣಿ ಅವರು ಮಾಜಿ ಶಾಸಕ ಜೆ.ಟಿ. ಪಾಟೀಲರ ವಿರುದ್ಧ ಗಂಭೀರ ಆರೋಪ‌ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು‌ ಮಾತನಾಡಿದರು.
ಕಳೆದ 29 ವರ್ಷಗಳಲ್ಲಿ ನಾವು ಕಳೆದ ಕಾಲವೆ ಬೇರೆ, ನೀವು ಕಳೆದ ಕಾಲವೇ ಬೇರೆ. ಹೋಲಿಕೆ ಮಾಡಿಕೊಳ್ಳುವ ಪ್ರಮೆಯವೇ ಬರುವುದಿಲ್ಲ ಎಂದರು.ಎರಡು ಹೊತ್ತು ಊಟ‌ ಮಾಡಿಲ್ಲ :
ಒಂದು ಹೊತ್ತು ಬ್ರೆಕ್ ಫಾಸ್ಟ್, ಎರಡು ಹೊತ್ತು ಊಟ‌ ಮಾಡಿದ‌ ಉದಾಹರಣೆಯೇ ಇಲ್ಲ.‌ ದಿನದ 24 ತಾಸು‌
ಕೆಲಸ ಮಾಡಿ ನಾವು ಏನು ಮಾಡಿದ್ದೇವೆ ಎನ್ನುವುದು ಕಣ್ಮುಂದೆ ಇದೆ. ನೀವು ಏನು ಮಾಡಿದಿರಿ, ಮನಾಲಿ ಸಕ್ಕರೆ ಕಾರ್ಖಾನೆಗೆ ಕೀಲಿ ಹಾಕಿದಿರಿ, ನಾವು ರೋಗಗ್ರಸ್ತ ಕಾರ್ಖಾನೆ ತೆಗೆದುಕೊಂಡು ಆರಂಭಿಸಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ಹೋಲಿಕೆಗೆ ಹತ್ತಿರವಿಲ್ಲ:
ನೀವು ನನ್ನನ್ನು ಕಂಪೇರ ಮಾಡಲು ಹತ್ತಿರವೇ ಇಲ್ಲ. ರಾಜಕಾರಣದಲ್ಲಾಗಲಿ, ಉದ್ಯೋಗದಲ್ಲಿನ‌ ಸಾಧನೆಯಲ್ಲಾಗಲಿ ನಮ್ಮ ಸಮೀಪವೇ ಇಲ್ಲ ಎಂದ ಅವರು ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಜೆ.ಟಿ.ಪಾಟೀಲರ ಕುಟುಂಬದವರ ಎಷ್ಟು ಶೇರು ಇವೆಯೋ ಅಷ್ಟು‌ಶೇರು ನಮ್ಮ ಕುಟುಂಬದ್ದೂ ಇವೆ ಎಂದರು.

ಇನ್ನೊಮ್ಮೆ ನಿಲ್ಲುವಾಸೆ:
ಇದುವರೆಗೂ ನಾನು ಅವರ ಬಗ್ಗೆ ಅನಗತ್ಯ ಆರೋಪ ಮಾಡಿಲ್ಲ. ಅವರು ಪ್ರತಿ ಚುನಾವಣೆಯಲ್ಲಿ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳುತ್ತಾ ಬಂದಿದ್ದಾರೆ. ಇದೀಗ ೨೦೨೮ ಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಇದುವರೆಗೂ ಅವರು ಕೆಲವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬೇರೆಯವರಿಗೆ ಕ್ಷೇತ್ರ ಬಿಟ್ಟು ಕೊಡಲಿ ಎಂದು ಹೇಳಿದರು.
ಇನ್ನೊಂದು ಸಲ ಚುನಾವಣೆಗೆ ನಿಲ್ಲಬೇಕೆಂಬ ಆಶಯ ಹೊಂದಿರುವ ಅವರು ತಮ್ಮ ಹೆಸರು ಮುಂದು ಮಾಡಿ, ಮುಂದೆಯೂ ನಾನೇ ನಿರಾಣಿ ವಿರುದ್ದ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೊಂದು ರಾಜಕೀಯ ತಂತ್ರಗಾರಿಕೆ ಹೊರತು ಮತ್ತೆನಲ್ಲ ಎಂದರು.ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿ:
ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಏನು ಮಾಡಿದ್ದಾರೆ ಎನ್ನುವ ದಾಖಲೆ ಅವರು ಬಿಡುಗಡೆ ಮಾಡಲಿ.‌ ನಾನು ಏನು‌ ಮಾಡಿದ್ದೇನೆ ಎನ್ನುವ ದಾಖಲೆ ಬಿಡುಗಡೆ ಮಾಡಿದ್ದೇನೆ.‌ ಜಿಲ್ಲೆಯ ಒಂದೇ ಒಂದು ಕೈಗಾರಿಕೆ ಬರಲು ಇವರು ಬಿಡಲಿಲ್ಲ. ನರೆನೂರಲ್ಲಿ ಭೂಸ್ವಾಧೀನಕ್ಕೆ ವಿರೋಧ ಮಾಡಿದರು.‌ ಹಲಕುರ್ಕಿ ಬಳಿ ವಿಮಾನ‌ ನಿಲ್ದಾಣ ಆರಂಭಕ್ಕೆ ಅಡ್ಡಿ ಪಡಿಸಿದರು.‌ ಬಾಗಲಕೋಟೆ ಬಳಿ ಸೂರ್ಯ ಸ್ಟೀಲ್ ಕಾರ್ಖಾನೆಗೆ ವಿರೋಧ‌ ಮಾಡಿದರು. ತಮ್ಮ ಕಾಲದಲ್ಲೂ ಜಿಲ್ಲೆಗೆ ಒಂದೆ ಒಂದು ಕೈಗಾರಿಕೆ ತರಲಿಲ್ಲ ಎಂದು ಅವರು ದೂರಿದರು.
ಅನಗತ್ಯ ಟೀಕೆ ಆರೋಪಗಳಲ್ಲಿ ಕಾಲ ಕಳೆಯುವುದು ಬಿಡಲಿ. ಅಭಿವೃದ್ದಿ ಕೆಲಸಕ್ಕೆ ಮುಂದಾಗಲಿ ಅದನ್ನು ತಾವೂ ಬೆಂಬಲಿಸುವುದಾಗಿ ಹೇಳಿದ ಅವರು. ಟೀಕೆಗಳನ್ನು ಮುಂದುವರೆಸಿದರೆ ತಾವು ಅದಕ್ಕೆ ಸರಿಯಾದ ತಿರುಗೇಟು ನೀಡುವುದಾಗಿ ಹೇಳಿದರು.ಅನಗತ್ಯ ನಿರ್ಬಂಧ ಬೇಡ:
ವರ್ಷಕ್ಕೆ ಒಂದು ಬಾರಿ ಬರುವ ಗಣೇಶ ಉತ್ಸವದಲ್ಲಿ ಅದ್ದೂರಿಯಾಗಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಬೇಕು.ಅದು ಬಿಟ್ಟು ಅನಗತ್ಯ ನಿರ್ಬಂಧ ಹಾಕಿ ಗೊಂದಲ ಉಂಟು ಮಾಡುವುದು ಸರಿಯಲ್ಲ. ಉತ್ಸವ ತನ್ನ ಪಾಡಿಗೆ ತಾನು ನಡೆದರೆ ಯಾವುದೇ ಗೊಂದಲ ಗಲಾಟೆಗಳು ಇರುವುದಿಲ್ಲ ಎಂದರು.ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ
ಜಿಲ್ಲೆಯಲ್ಲಿ ಎಂಆರ್‌ಎನ್ ಸಂಸ್ಥೆಯಡಿ ೫೦೦ಎಕರೆ ಜಮೀನಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದು, ಈ ಸಂಬಂಧ ಪ್ರಯತ್ನಗಳು ನಡೆದಿವೆ. ಸರ್ಕಾರದಿಂದ ಅನುಮತಿ ಸಿಕ್ಕಲ್ಲಿ ಸಂಶೋಧನಾ ಕೇಂದ್ರ ಶೀಘ್ರ ಸ್ಥಾಪನೆಗೊಳ್ಳಲಿ ಇಲ್ಲಿ ರೈತರ ಆದಾಯ ದ್ವಿಗುಣ ಗೊಳಿಸುವ ಬೀಜಗಳ ಉತ್ಪಾದನೆ ಕುರಿತು ಅಧ್ಯಯನ ಸಂಸ್ಥೆ ನಡೆಯಲಿದೆ ಎಂದರು.
ಹೂವಪ್ಪ ರಾಠೋಡ, ರಮೇಶ ಮೋರಗಿ ಇದ್ದರು.

Hot this week

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

Topics

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು

ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಒಟ್ಟು 10 ದಿನಗಳ ಕಾಲ ನಡೆಯಲಿರುವ...

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ|ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ ಹನುಮಂತಯ್ಯ ಒಬ್ಬ ದಕ್ಷ...

ಪಂಚಭೂತಗಳಲ್ಲಿ ಲೀನವಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ.

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು. ಒಂದೇ ಕಡೆ ನಾಲ್ಕು ಜನರ...
spot_img

Related Articles

Popular Categories

spot_img