ಇಂದು ಕೆಆರ್‌ಎಸ್ ಅಣೆಕಟ್ಟು ಸಮೀಪದ ಬೃಂದಾವನದಲ್ಲಿ ಮೊದಲನೇ ಕಾವೇರಿ ಆರತಿಯನ್ನು ಉದ್ಘಾಟಿಸಲಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸೋಮನಾಥ ಸ್ವಾಮೀಜಿಯವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವರಾದ ಚಲುವರಾಯಸ್ವಾಮಿ, ಶಿವರಾಜ್ ತಂಗಡಗಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಅವರು ಸಹ ಉಪಸ್ಥಿತರಿದ್ದರು.
ತಾಯಿ ಕಾವೇರಿಯ ಆಶೀರ್ವಾದ ಸದಾ ನಮ್ಮ ನಾಡಿನ ರೈತರ ಮೇಲೆ ಇರಲಿ, ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದೆ.