ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಕಬ್ಬಿನ ಬೆಳೆ ಹಾಳಾಗಿರುವ ಘಟನೆ ರಾಮದುರ್ಗ ಪಟ್ಟಣದಲ್ಲಿ ಜರುಗಿದೆ. ರಾಮದುರ್ಗ ಪಟ್ಟಣದ ಪಡಕೋಟಗಲ್ಲಿಯ ಸುರೇಶ ಕಾಳಪ್ಪ ಸಂಗಟಿ ಎಂಬುವರ ಜಮೀನು ಬೆಂಕಿ ತಗುಲಿ ಬೆಂಕಿ ಜ್ಬಾಲೆ ಆವರಿಸಿತ್ತು ಇದರಿಂದ ಕಬ್ಬಿನ ಬೆಳೆ ನಾಶವಾಗಿದೆ.
ಬೆಂಕಿ ತಗುಲಿದ ಹಿನ್ನಲೆ ಸಾರ್ವಜನಿಕರು ಅಗ್ನಿ ಶಾಮಕ ಇಲಾಖೆಗೆ ಕರೆ ಮಾಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಅಧಿಕಾರಿ ಬೆಂಕಿಯನ್ನ ನಂದಿಸಿದ್ದಾರೆ. ಠಾಣಾಧಿಕಾರಿಗಳಾದ ಮಲ್ಲಪ್ಪ ಕವಡಿ ಸಿಬ್ಬಂದಿಗಳಾದ ಶಿವನಗೌಡ ಪಾಟೀಲ್, ಕರಿಯಪ್ಪ ಕುರಿ ,ಮಹ್ಮದರಿಪ್ ಫಿರಜಾದೆ,ಕರಿಯಪ್ಪ ಮುಧೋಳ,ಮಂಜುನಾಥ ಅಂಗಡಿ, ಮೈಬುಸಾಬ ನೂರಪ್ಪನವರು ಸಂಪೂರ್ಣ ಬೆಂಕಿಯನ್ನು ನಂದಿಸಿದ್ದಾರೆ