ಕಣ್ಣ ಮುಂದೆಯೇ ಗೋವುಗಳ ಕಗ್ಗೊಲೆ ನಡೆಯುತ್ತಿದ್ದರೂ ಕಾನೂನು ಕೈ ಕಟ್ಟಿ ಕುಳಿತಿದೆ
ರಾಮದುರ್ಗ ನಗರದ ಮಿನಿ ವಿಧಾನಸೌಧದಲ್ಲಿ ಶ್ರೀರಾಮ ಸೇನೆ ಹಾಗೂ ವಿಶ್ವಹಿಂದೂ ಪರಿಷತ್ – ಬಜರಂಗದಳ ರಾಮದುರ್ಗ ಪ್ರಖಂಡ ವತಿಯಿಂದ ಪ್ರತಿಭಟನೆ ಜರುಗಿತು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ವಿಧೇಯಕ ಸಂಖ್ಯೆ 69 ರ ಪ್ರಕಾರ ಗೋಹತ್ಯೆ ಕಾನೂನು ಬಾಹಿರವಾಗಿದ್ದು ರಾಮದುರ್ಗ ತಾಲೂಕಿನಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ ಹಾಗೂ ಸಾಕಷ್ಟು ಅಕ್ರಮ ಕಸಾಯಿ ಖಾನೆಗಳು ತಲೆ ಎತ್ತಿವೆ ಪ್ರಸ್ತುತ ಕಸಾಯಿಖಾನೆಗಳ ಮೇಲೆ ದಾಳಿ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಗೋವುಗಳನ್ನು ಗೋಶಾಲೆಗಳಿಗೆ ರವಾನಿಸಬೇಕು
ಎಂದು ತಾಲೂಕ ದಂಡಾಧಿಕಾರಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಮೂಲಕ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ರಾಮದುರ್ಗ ಪ್ರಖಂಡ ಅಧ್ಯಕ್ಷರಾದ ಪ್ರಕಾಶ ಸೂಳಿಬಾವಿ, ಕಾರ್ಯದರ್ಶಿ ಸಂಗಮೇಶ ಉದಪುಡಿ, ಗೋರಕ್ಷಾ ಪ್ರಮುಖ ಮನೋಜ ಕಂಕಾನಿ, ಬಜರಂಗದಳ ಸಂಯೋಜಕ ಮಂಜುನಾಥ ಹಣಸಿ, ಚಿದಾನಂದ ತಾಂಬೆ, , ಬಸವರಾಜಆರಿಬೆಂಚಿ, ಮುತ್ತಣ್ಣ ತಳವಾರ, ಸಾಗರ ಕೊರವರ, ರಾಮದುರ್ಗ ನಗರ ಸಮಿತಿ ಅಧ್ಯಕ್ಷರಾದ ಸೋಮಶೇಖರ ಸೊಗಲದ, ಈಶ್ವರ ವಜ್ಜರಮಟ್ಟಿ, ಡಾ ಬಸವರಾಜ ಮಾದಣ್ಣವರ, ಮಲ್ಲಿಕಾರ್ಜುನ ಭಾವಿಕಟ್ಟಿ, ಅಪ್ಪನಗೌಡ ಪಾಟೀಲ, ಪ್ರದೀಪ ಮುಕಾರಿ, ಅಜಯ ಹೂಲಿ, ವಕೀಲರಾದ ಶ್ರೀಮತಿ ಮಂಜುಳಾ ದೊಡಮನಿ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು



