ಶಾಸಕ ಲಕ್ಷ್ಮಣ ಸವದಿಯವರ ನನ್ನ ಮೇಲೆ ವಿನಾಕಾರಣ ಚುನಾವಣೆಯಲ್ಲಿ ಹಣ ಕೇಳಿದೆ ಎಂದು ಗುರತರವಾದ ಆರೋಪ ಮಾಡಿದ್ದು ಈ ಹೇಳಿಕೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಜೊತೆಗೆ ಮನಸ್ಸಿ ನೋವು ತಂದಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನನ್ನ ರಾಜಕೀಯ ಜೀವನದಲ್ಲಿ ಕಳೆದ ೩೧ ವರ್ಷಗಳಿಂದ ಕಾಂಗ್ರೇಸ್ ಪಕ್ಷದ ನಿಷ್ಠಾವಂತನಾಗಿ ಪ್ರಮಾಣಿಕವಾದ ತನು,ಮನ,ಧನದಿಂದ ಕಾಂಗ್ರೇಸ್ ಕಟ್ಟಿಬೇಳಿಸುವ ಕಾರ್ಯಮಾಡಿಕೊಂಡು ಬಂದಿರುವೇ ಸವದಿ ಹತ್ತಿರ ದುಡ್ಡು ಕೇಳುವ ದರ್ದು ನನಗಿಲ್ಲ ದೇವರು ನನಗೆ ನನ್ನ ಜೀವನಕ್ಕೆ ಬೇಕಾದಷ್ಟು ಕೊಟ್ಟಿದ್ದಾನೆ.
ನಿಮ್ಮ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಿನ ಜೊತೆ ಕಾಂಗ್ರೆಸ್ ಕಾರ್ಯಕರ್ತರರಿಗೂ ಅಪಾರವಾದ ನೋವು ತಂದಿದೆ ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ನನ್ನ ನಿಮ್ಮ ನಡುವೆ ನಡೆದ ಮಾತುಕತೆ ವೇಳೆ ನನಗಾದ ಅನ್ಯಾಯ ಬಗ್ಗೆ ಮಾತನಾಡಿ ಮುಂಬರುವ ದಿನಗಳಲ್ಲಿ ಅನ್ಯಾಯ ಸರಿಮಾಡುವ ಪ್ರಮಾಣ ಮಾಡಿದ್ದಿರಿ, “ನೀವು ಕೊಟ್ಟ ಭರವಸೆ ಸುಳ್ಳು ನಾನು ಹಣ ಕೇಳಿದ್ದು ನಿಜವೇ ಆಗಿದ್ದರೆ ಶಿವಯೋಗಿಗಳ, ಸಿದ್ದೇಶ್ವರ ಸಾಕ್ಷಿಯಾಗಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಸವಾಲ ಎಸೆದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರಖಾನೆ ಚುನಾವಣೆಯಲ್ಲಿ ವಿರೋಧಿಸಿದಕ್ಕೆ ಈ ರೀತಿಯಾದ ಆರೋಪ ಮಾಡುತ್ತಿರುವದು,ತೇಜೋವಧೆ ಮಾಡುತ್ತಿರುವದು ತಮ್ಮ ಘನತೆಗೆ ತಕ್ಕುದಲ್ಲ, ತಾವು ನನ್ನ ನಂಬಿರುವ ನಮ್ಮ ಕಾರ್ಯಕರ್ತರನ್ನು ದೂರ ಇಟ್ಟು ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿಗೆ ತಪ್ಪಿದ್ದಿರಿ, ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಯಾವರೀತಿ ನಡೆದುಕೊಂಡಿರಿ ಎಂಬುದನ್ನು ಜನ ನೋಡಿದ್ದಾರೆ. ಇನ್ನಾದರೂ ಜನರ ಭಾವನೆಗಳಿಗೆ, ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ಹೇಳಿಕೆಗಳಿಗೆ ತಿಲಾಂಜಲಿ ಹಾಡಿ ಎಂದು ಕಿವಿಮಾತು ಹೇಳಿದರು.



