Sunday, October 12, 2025
22.2 C
Belagavi

3ನೇ ಹಂತದ ಕೃಷ್ಣ ಮೇಲ್ದಂಡೆ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ -D. K. ಶಿವಕುಮಾರ

advertisement

spot_img

ಬೆಂಗಳೂರು:ನಮ್ಮ ಬಳಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ ಎಂದು ಅಲವತ್ತುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಚರ್ಚಿಸಲು ಸೆ.3 ಅಥವಾ 4ರಂದು ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯ ಭೂ ಸಂತ್ರಸ್ತರಿಗೆ ನ್ಯಾಯಾಲಯಗಳ ಆದೇಶಾನುಸಾರ ಪರಿಹಾರ ನೀಡಿದರೆ 2 ಲಕ್ಷ ಕೋಟಿ ರು. ಬೇಕು. ಇದು ಸಾಧ್ಯವಿಲ್ಲ. ರೈತರಿಗೂ ನಷ್ಟವಾಗದಂತೆ, ಸರ್ಕಾರಕ್ಕೂ ಹೊರೆಯಾಗದಂತಹ ಪರಿಹಾರ ಮೊತ್ತ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ರೈತರು ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳದೆ ಸರ್ಕಾರ ನಿಗದಿಪಡಿಸಿರುವ ಪರಿಹಾರಕ್ಕೆ ಒಪ್ಪದಿದ್ದರೆ ಯೋಜನೆ ಅನುಷ್ಠಾನ ಅಸಾಧ್ಯ. ನಮ್ಮ ಕೈಯಲ್ಲಿ ಏನೂ ಇಲ್ಲ. ಏಕೆಂದರೆ ಪರಿಹಾರಕ್ಕೇ 2 ಲಕ್ಷ‌ ಕೋಟಿ ರು. ಬೇಕಾಗುತ್ತದೆ. ನಮ್ಮ ಬಳಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಗಳನ್ನು ನೀಡುವುದಕ್ಕೇ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಯೋಜನೆ ಕುರಿತು ಇಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಸೇರಿದಂತೆ ಬಾಗಲಕೋಟೆ, ವಿಜಯಪುರ ಜಿಲ್ಲಾ ಸಚಿವರು ಹಾಗೂ ಇತರೆ ನಾಯಕರೊಂದಿಗೆ ಚರ್ಚಿಸಿ, ಭೂ ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ ನೀಡುವ ಕುರಿತು ಚರ್ಚಿಸಲು ಸರ್ವಪಕ್ಷಗಳ ಮುಖಂಡರು ವಿಜಯಪುರ, ಬಾಗಲಕೋಟೆ ಭಾಗದ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ಕರೆಯಲು ನಿರ್ಧರಿಸಿದ್ದೇವೆ ಎಂದರು.

ಈ ಯೋಜನೆಯ ಭೂ ಸಂತ್ರಸ್ತರಲ್ಲಿ ಸುಮಾರು 28,972 ಜನ ಸೂಚಿತ ಪರಿಹಾರ ಧನ ಒಪ್ಪಿಕೊಳ್ಳದೆ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಇವುಗಳ ಇತ್ಯರ್ಥವಾಗದೆ ಯೋಜನೆ ಜಾರಿ ಅಸಾಧ್ಯ. ನ್ಯಾಯಾಲಯ ಸೂಚಿಸಿರುವ ಪರಿಹಾರ ಮೊತ್ತದ ಉದಾಹರಣೆ ನೀಡಿದ ಉಪಮುಖ್ಯಮಂತ್ರಿ ಅವರು ಒಂದಷ್ಟು ಪ್ರಕರಣಗಳ ವಿವರಣೆ ನೀಡಿದರು. ಬಾಗಲಕೋಟೆಯಲ್ಲಿ ಒಂದು ಎಕರೆ ಭೂಮಿಗೆ ಬಡ್ಡಿ ಮೊತ್ತ ‌ಸೇರಿ 23 ಕೋಟಿ ಪರಿಹಾರ ಸೂಚಿಸಲಾಗಿದೆ. ಕಸಬಾ ಬಿಜಾಪುರದಲ್ಲಿ ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡ ಒಂದು ಎಕರೆ ಭೂಮಿಗೆ 11.92 ಕೋಟಿ ಪರಿಹಾರ ನೀಡಿ ಎಂದು ಹೇಳಲಾಗಿದೆ. ಜುಂಜರಕುಪ್ಪ ಆರ್ ಸಿಗೆ 10.22 ಕೋಟಿ ಪರಿಹಾರ, ವೀರಾಪುರದಲ್ಲಿನ ಸಬ್ ಮರ್ಜ್ ಜಮೀನಿಗೆ 15.49 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯಗಳು ಆದೇಶಿಸಿವೆ. ಹೀಗೆ ಪರಿಹಾರ ಕೊಟ್ಟರೆ 2 ಲಕ್ಷ ಕೋಟಿ ರು. ಬೇಕು. ಇದು ಸಾಧ್ಯವಾ? ಎಂದರು.

ಕಾಲುವೆಗಳ ನಿರ್ಮಾಣದ ಜಮೀನಿಗೆ ನಮ್ಮ ಅಧಿಕಾರಿಗಳು 10 ರಿಂದ 8 ಲಕ್ಷ ಪರಿಹಾರ ಸೂಚಿಸಿದ್ದಾರೆ.‌ ಇಂತಹ ‌ಕಡೆ ನ್ಯಾಯಾಲಯದವರು 74 ಲಕ್ಷ‌ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ. ಸಬ್ ಮರ್ಜ್ ಭೂಮಿಗಳಿಗೆ ಅಧಿಕಾರಿಗಳು ಎಕರೆಗೆ 16.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯ 1.20 ಕೋಟಿ ಪರಿಹಾರಕ್ಕೆ ತೀರ್ಪು ನೀಡಿದೆ. ಮುಳುಗಡೆ ಸ್ಥಳಾಂತರ ಪ್ರದೇಶಗಳಿಗೆ 15.50 ಲಕ್ಷ ಪರಿಹಾರ ಸೂಚಿಸಿದ್ದರೆ ನ್ಯಾಯಾಲಯವು 5 ಕೋಟಿ ಸೂಚಿಸಿದೆ ಎಂದರು. ಈ ಯೋಜನೆಗೆ ಸುಮಾರು 20 ಗ್ರಾಮಗಳು ಮುಳುಗಡೆ ಆಗಲಿವೆ. ಆರ್‌.ಸಿ ಗ್ರಾಮಗಳಿಗೆ ಎಂದು 1,33,867 ಎಕರೆ ಜಮೀನು ಅಗತ್ಯವಿದೆ. 29,568 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಹಂತಗಳಲ್ಲಿ 44,947 ಎಕರೆ ಭೂಮಿಯಿದೆ. 59,354 ಎಕರೆ ಜಮೀನು ಸ್ವಾಧೀನಕ್ಕೆ ಕೆಲಸ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗಿದೆ ಎಂದು ವಿವರಿಸಿದರು.

ಈ ಭೂಮಿಯೇ ಬೇಡ ಎನ್ನುವ ಸಲಹೆ ಬರುತ್ತಿದೆ: ಈ ಮಧ್ಯೆ, ಈ ಭೂಮಿಯನ್ನು ಕಂದಾಯ ಇಲಾಖೆ ವ್ಯಾಪ್ತಿಯಿಂದ ನಮ್ಮ ಇಲಾಖಾ ವ್ಯಾಪ್ತಿಗೆ ತೆಗೆದುಕೊಳ್ಳುವ ಪ್ರಸ್ತಾವನೆಯೂ ಸಚಿವ ಸಂಪುಟದ ಮುಂದಿದೆ. ಕೆಲವರು ನ್ಯಾಯಾಲಯಗಳ ಆದೇಶಗಳನ್ನು ನೋಡಿದಾಗ ಆ ಜಮೀನು ಬೇಡ ಅಂತ ಬಿಟ್ಟುಬಿಡಲೂ ಸಲಹೆ ಬರುತ್ತಿದೆ. ಕೆಲವರು ಖಾಸಗಿ ಆಪರೇಟರ್‌ಗಳಿಂದ ಭೂಮಿ ಖರೀದಿಗೆ ಹೇಳುತ್ತಿದ್ದಾರೆ. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ಪ್ರತೀ ವರ್ಷ ವ್ಯರ್ಥವಾಗಿ ಹರಿದುಹೋಗುತ್ತಿರುವ ಕೃಷ್ಣಾ ನದಿ ನೀರನ್ನು ಸಂಗ್ರಹಿಸಲು ಆಲಮಟ್ಟಿ ಜಲಾಶಯವನ್ನು 524 ಅಡಿಗಳಿಗೆ ಎತ್ತರಿಸಬೇಕಿದೆ ಎಂದರು.

ರೈತರು ಸುಮಾರು 46 ವಕೀಲರನ್ನು ಇಟ್ಟುಕೊಂಡು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಅವರಾಗೇ ಇಷ್ಟು ಮುಂದುವರೆಯಲು ಸಾಧ್ಯವಾ? ಎಂಬುದನ್ನು ಪರಿಶೀಲಿಸಿ ವರಿದ ನೀಡಲು ಕಾನೂನು ಸಚಿವರು ಹಾಗೂ ಅಡ್ವೊಕೇಟ್‌ ಜನರಲ್‌ ಅವರಿಗೆ ಹೇಳಿದ್ದೇನೆ. ಜೊತೆಗೆ ನಮ್ಮ ಕಾನೂನು ವಿಭಾಗ ಬಲಗೊಳಿಸಲು ಏನೇನು ಮಾಡಬೇಕು. ಕೋರ್ಟ್‌ನಲ್ಲಿ ಈ ಯೋಜನೆಯ ಭೂ ಪರಿಹಾರ ಸಂಬಂಧ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಯಾವೆಲ್ಲಾ ಪ್ರಯತ್ನಗಳನ್ನು ಮಾಡಬಹುದೆಂದು ವರದಿ ನೀಡಲು ಸೂಚಿಸಿದ್ದೇನೆ ಎಂದರು

Hot this week

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ವಾರ್ಷಿಕ ಸರ್ವಸಾಮಾನ್ಯ ಸಭೆ

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ 2024 ಹಾಗೂ 25...

ನಮ್ಮ ಹೆಣ್ಣು ಮಕ್ಕಳು ಕೇವಲ ದಾಂಡಿಯಾ ಆಡಲ್ಲಾ ಪ್ರಸಂಗ ಬಂದರೆ ತಲವಾರ ಹಿಡಿದು ಯುದ್ಧವನ್ನೂ ಮಾಡುತ್ತಾರೆ, ಶ್ರಿಶೈಲ ಗುರೂಜಿ.

ನವರಾತ್ರಿ ಅಂಗವಾಗಿ ಎಕ್ಷಂಬಾ ಪಟ್ಟಣದಲ್ಲಿ ನಡೆದ ದುರ್ಗಾ ದೌಡ್ ಕಾರ್ಯಕ್ರಮದ ಸಮಾರೋಪ...

ದಿ. ಮಹಾಂತೇಶ ಅರ್ಬನ್ ಕೋ – ಆಫ್ ಕ್ರೆಡಿಟ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ.

ದಿ. ಮಹಾಂತೇಶ ಅರ್ಬನ್ ಕೋ - ಆಫ್ ಕ್ರೆಡಿಟ್ ಸೊಸೈಟಿ ವತಿಯಿಂದ...

ದಿ. ಮರಾಠ ಅರ್ಬನ್ ಸೊಸೈಟಿಯ ಬೆಳ್ಳಿ ಹಬ್ಬದ ಸಂಭ್ರಮ.

ಶೇರುದಾರರು ಠೇವಣಿದಾರರು ಮತ್ತು ಸಾಲ ತೆಗೆದುಕೊಂಡಂತ ಗ್ರಾಹಕರ ಸಹಾಯಕರದಿಂದ ನಮ್ಮ ಮರಾಠಾ...

ಸಂಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಅಭಯಹಸ್ತ.

ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಬಾಣಂತಿ ಹಸುಗುಸು ಇರುವ ವರದಿಯನ್ನು RMD Digtel Media...

Topics

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ವಾರ್ಷಿಕ ಸರ್ವಸಾಮಾನ್ಯ ಸಭೆ

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ 2024 ಹಾಗೂ 25...

ನಮ್ಮ ಹೆಣ್ಣು ಮಕ್ಕಳು ಕೇವಲ ದಾಂಡಿಯಾ ಆಡಲ್ಲಾ ಪ್ರಸಂಗ ಬಂದರೆ ತಲವಾರ ಹಿಡಿದು ಯುದ್ಧವನ್ನೂ ಮಾಡುತ್ತಾರೆ, ಶ್ರಿಶೈಲ ಗುರೂಜಿ.

ನವರಾತ್ರಿ ಅಂಗವಾಗಿ ಎಕ್ಷಂಬಾ ಪಟ್ಟಣದಲ್ಲಿ ನಡೆದ ದುರ್ಗಾ ದೌಡ್ ಕಾರ್ಯಕ್ರಮದ ಸಮಾರೋಪ...

ದಿ. ಮರಾಠ ಅರ್ಬನ್ ಸೊಸೈಟಿಯ ಬೆಳ್ಳಿ ಹಬ್ಬದ ಸಂಭ್ರಮ.

ಶೇರುದಾರರು ಠೇವಣಿದಾರರು ಮತ್ತು ಸಾಲ ತೆಗೆದುಕೊಂಡಂತ ಗ್ರಾಹಕರ ಸಹಾಯಕರದಿಂದ ನಮ್ಮ ಮರಾಠಾ...

ಸಂಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಅಭಯಹಸ್ತ.

ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಬಾಣಂತಿ ಹಸುಗುಸು ಇರುವ ವರದಿಯನ್ನು RMD Digtel Media...

ರೈತರ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 25 ಸಾವಿರ ರೂ. ಮಧ್ಯಂತರ ಪರಿಹಾರ ನೀಡಿ: ಶಿವಕುಮಾರ್ ಆರ್ ಮೇಟಿ( ಅಗ್ನಿ )

ಉತ್ತರ ಕರ್ನಾಟಕ ಪ್ರವಾಹ, ರೈತರಿಗೆ ತಕ್ಷಣ ಮಧ್ಯಂತರ ಪರಿಹಾರ ನೀಡಿ: ಉತ್ತರ...

ಕುನ್ನಾಳ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ

ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಕೇಸರಿ...

ಸೂಚಣಿಯ ಸ್ಥಿತಿಯಲ್ಲಿ ಬಾಣಂತಿ ಮತ್ತು ಹಸುಗುಸು.

ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದಲ್ಲಿ ಹೆರಿಗೆ ಆಗಿ ೧೧...
spot_img

Related Articles

Popular Categories

spot_img