ಸಿಂಧನೂರು ರೈಲ್ವೇ ನಿಲ್ದಾಣದ ಬಳಿ ಯುವತಿಯ ಶವ ಪತ್ತೆ!
ಸಿಂಧನೂರು ರೈಲ್ವೇ ನಿಲ್ದಾಣದ ಬಳಿ 21 ವರ್ಷದ ಅಪರಿಚಿತ ಯುವತಿಯ ಶವ ಪತ್ತೆಯಾಗಿದ್ದು, ಚಲಿಸುವ ರೈಲಿನಿಂದ ಬಿದ್ದು ಮೃತಪಟ್ಟಿರುವ ಶಂಕೆಯಿದೆ.
ರೈಲ್ವೇ ಹಳಿ ಬಳಿ ಶವ ಪತ್ತೆಯಾದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಿಂಧನೂರು ನಗರ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಇದು ಅಪಘಾತವೇ ಅಥವಾ ಹತ್ಯೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು, ಮೃತಳ ವಿಳಾಸ ಮತ್ತು ಪ್ರಯಾಣದ ವಿವರಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.



