Wednesday, August 12, 2026
20.7 C
Belagavi

ಬಿಜೆಪಿ ಆಯ್ಕೆಯಿಂದ ಭ್ರಷ್ಟ ಆಡಳಿತಕ್ಕೆ ಚಾಟಿ ಏಟು: ವಿ.ಸೋಮಣ್ಣ

advertisement

spot_img

ಬಿಜೆಪಿ ಆಯ್ಕೆಯಿಂದ ಭ್ರಷ್ಟ ಆಡಳಿತಕ್ಕೆ ಚಾಟಿ ಏಟು: ವಿ.ಸೋಮಣ್ಣ

ಬಿಜೆಪಿ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ

ಸೂಕ್ಷ್ಮ ಮತಗಟ್ಟೆಗಳನ್ನಾಗಿ ಘೋಷಿಸಿ ಪ್ಯಾರಾ ಮಿಲಿಟರಿ ನೇಮಿಸಲು ಬಿಜೆಪಿ ಅಭ್ಯರ್ಥಿ ಮನವಿ

ಬಾಗಲಕೋಟೆ: ಭ್ರಷ್ಟ ಆಡಳಿತಕ್ಕೆ ಚಾಟಿ ಏಟು ಕೊಡಲು ಸೂಕ್ತ ಅವಕಾಶ ಒದಗಿ ಬಂದಿದ್ದು ಐಹೊಳೆ ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ ತೊಲಗಿಸಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಉಪಚುನಾವಣೆ ಹಿನ್ನೆಲೆ ಐಹೊಳೆಯಲ್ಲಿ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐಹೊಳೆ ಸ್ಥಳಾಂತರಕ್ಕೆ ಸರಕಾರ ಆದೇಶ ಮಾಡಿದರೂ ಅದನ್ನು ನಿಲ್ಲಿಸಿ ಕಾಂಗ್ರೆಸ್ ಮೋಸ ಮಾಡಿದೆ. ಉಪಚುನಾವಣೆ ಮುಗದ ತಕ್ಷಣವೇ ಕೇಂದ್ರ ಸರಕಾರದಿಂದ ಅವಶ್ಯವಿರುವ ಕೆಲಸಗಳನ್ನು ಮಾಡಲಾಗುತ್ತದೆ. ವೀರಣ್ಣ ಚರಂತಿಮಠರು ಗೆದ್ದ ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಸರಕಾರಕ್ಕೆ ಗಂಡಾಂತರ ಬರುತ್ತದೆ. ಕುರ್ಚಿ ಮುಖ್ಯಮಂತ್ರಿಗಳು ರಾಜಿನಾಮೆ ನೀಡಿ ಮರು ಚುನಾವಣೆ ಬರುವ ಕಾಲ ಸಮೀಪವಿದೆ.
ಕಾಂಗ್ರೆಸ್ ದುರಾಡಳಿತದಿಂದ ಜನರಿಗೆ ರಾಜಕಾರಣಿಗಳ ಮೇಲಿನ ವಿಶ್ವಾಸ ಹೊರಟು ಹೋಗಿದೆ. ವೀರಣ್ಣ ಚರಂತಿಮಠರಂತಹ ಸಮಾಜದ ಹಿತೈಷಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಕೊನೆಗಾಲಕ್ಕೆ ಅಡಿಪಾಯ ಹಾಕಿ ಎಂದರು.ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ ಬಾಗಲಕೋಟೆ ನಗರದುದ್ದಕ್ಕೂ ರಸ್ತೆಗಳು, ಬೀದಿಗಳಲ್ಲಿ ಕಾಂಕ್ರೀಟ್ ರಸ್ತೆಗಳು, ಜಲ ಜೀವನ ನೀರು ಸರಬರಾಜು, ಕಾನ್ವೆಂಟ್ ಇಂದ ಮೆಡಿಕಲ್ ಕಾಲೇಜುಗಳವರೆಗೂ ಶಿಕ್ಷಣ, ವೈದ್ಯಕೀಯ ಸೌಲಭ್ಯ ಹೀಗೆ ಸಾಲು ಸಾಲು ಒಳ್ಳೆಯ ಕೆಲಸಗಳನ್ನು ಮಾಡಿದ ಚರಂತಿಮಠರು ಗೆದ್ದರೆ ಒಳ್ಳೆಯ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತೆ. ಜೊತೆಗೆ ಹಿಂದೂಗಳು ಧಾರ್ಮಿಕ ಮೆರವಣಿಗೆಗಳನ್ನು ನಿರ್ಭಯವಾಗಿ ಮಾಡಲು ಸಾಧ್ಯ. ಇದು ಕೇವಲ ಉಪಚುನಾವಣೆ ಅಲ್ಲ, ಸಿದ್ದರಾಮಯ್ಯ ಸರಕಾರದ ಹಿಂದೂ ಧೋರಣೆಗೆ ಬೇಸತ್ತ ಜನರ ಆಕ್ರೋಶದ ಸಂದೇಶ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆಯ ನಿರ್ಧಾರವಾಗಿದೆ. ಕಾಂಗ್ರೆಸ್ ಗೆದ್ದರೆ ಸ್ಥಾಪನೆ ಆಗುವುದು ಕನ್ನಡಿಗರ ಸರಕಾರ ಅಲ್ಲ ತಾಲಿಬಾನ್ ಸರಕಾರ. ಅದು ಆಡಳಿತಕ್ಕೆ ಬಂದ ನಂತರ ಕೆಜೆಹಳ್ಳಿ ಡಿಜೆಹಳ್ಳಿಯಲ್ಲಿ ದಲಿತ ಶಾಸಕರ ಮನೆ ಸುಟ್ಟ ಪ್ರಕರಣ ಹಿಡಿದೂ ಬಾಗಲಕೋಟೆಯ ಶಿವಾಜಿಯ ಜಂತಿಯವರೆಗೂ ಹಿಂದೂ ವಿರೋಧಿ ಆಡಳಿತವನ್ನೇ ಮಾಡಿಕೊಂಡು ಬಂದಿದೆ ಅದಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿಯನ್ನು ಗೆಲ್ಲಿಸಿ ಎಂದರು.

ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ ರಾಜಕೀಯ ಮರುಜನ್ಮ ಕೊಟ್ಟ ಬಾಗಲಕೋಟೆ ಜಿಲ್ಲೆಯ ಋಣ ತೀರಿಸುವ ಕೆಲಸವನ್ನೂ ಸಿದ್ದರಾಮಯ್ಯ ಅವರು ಮಾಡಿಲ್ಲ. ಒಂದು ಬಿಜೆಪಿ ಸಭೆಯನ್ನು ಸಹಿಸಲಾಗದ ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸುವ ಕೆಲಸ ಮಾಡಬೇಕು ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ
ವೀರಣ್ಣ ಚರಂತಿಮಠ ಅವರು ಕೇವಲ ಶಾಸಕರಾಗಿ ಮಾತ್ರ ಕೆಲಸ ಮಾಡದೇ ಬಾಗಲಕೋಟೆಯನ್ನು ಶೈಕ್ಷಣಿಕ ರಾಜಧಾನಿಯನ್ನಾಗಿ ಪರಿವರ್ತನೆ ಮಾಡಿ ಸಾವಿರಾರು ಉದ್ಯೋಗ ಸೃಷ್ಟಿಸಿದ್ದಾರೆ, ಬದುಕು ಕಳೆದುಕೊಂಡ ನಿರಾಶ್ರಿತರಿಗೆ ಮತ್ತೆ ಸೌಲಭ್ಯ ವದಗಿಸಿಕೊಟ್ಟಿದ್ದಾರೆ. ಗುಂಡಾಗಿರಿ ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸಿ ಎಂದು ಕರೆ ಕೊಟ್ಟರು.

ಸಕಲೇಶಪುರ ಶಾಸಕ ಮಂಜು ಮಾತನಾಡಿ
ಜನರು ಭಯಸುವುದು ಅಭಿವೃದ್ಧಿ ಮತ್ತು ಶಾಂತಿಯನ್ನು ಅದನ್ನು ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಒಮ್ಮೆ ಮತ ಹಾಕಿದರೆ ಮುಂದಿನ ಚುನಾವಣೆವರೆಗೂ ಮರು ಅವಕಾಶ ಸಿಗುವುದಿಲ್ಲ. ವಿಚಾರ ಮಾಡಿ ಅಭಿವೃದ್ಧಿಪರ ಬಿಜೆಪಿಗೆ ಮತದಾನ ಮಾಡಿ. ಕಾಂಗ್ರೆಸ್ ಆಡಳಿತದಲ್ಲಿ ಆಸ್ಪತ್ರೆಯಲ್ಲಿ ಔಷಧಿಗಳು ಸಿಗುತ್ತಿಲ್ಲ, ಸರಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಗಳಿಲ್ಲ. ಪರಿಶಿಷ್ಟ ಜನಾಂಗಕ್ಕೆ ಮೀಸಲಿಟ್ಟ ಹಣವನ್ನು ಸ್ವಾರ್ಥಕೆ ಬಳಸಿಕೊಂಡಿದ್ದಾರೆ. ಇದಕ್ಕೆಲ್ಲ ಉಪಚುನಾವಣೆಯಲ್ಲಿ ಬಿಜೆಪಿ ಆಯ್ಕೆಯೇ ಉತ್ತರ ಎಂದರು.

ವೀರಣ್ಣ ಚರಂತಿಮಠ ಅವರು ಮಾತಮಾಡಿ
ಐಹೊಳೆಗೆ ಕುಡಿಯುವ ನೀರಿನ ಯೋಜನೆ ಮಾಡಿ, ಊರಿನ ಸಂಪೂರ್ಣ ಸ್ಥಳಾಂತರಕ್ಕೆ ಸರಕಾರದ ಆದೇಶ ತರುವ ಕೆಲಸ ಬಿಜೆಪಿ ಮಾಡಿತ್ತು. ಕಾಂಗ್ರೆಸ್ ಅದನ್ನು ರದ್ದು ಮಾಡಿ ವಿದೇಶದಿಂದ ಬರುವ ಪ್ರವಾಸಿಗರು ಕೊಳಚೆ ಪ್ರದೇಶ ನೋಡಿ ಹೋಗುವಂತ ಪರಿಸ್ಥಿತಿಯನ್ನು ಇಲ್ಲಿ ನಿರ್ಮಾಣ ಮಾಡಿದೆ. ಐಹೊಳೆಯ ವಿಜೃಂಭಣೆಯ ಸಾಮ್ರಾಜ್ಯದ ಮರುಸ್ಥಾಪನೆಗಾಗಿ ಬಿಜೆಪಿಗೆ ಮತ ನೀಡಿ ಎಂದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಸಭೆಗೆ ಅಡ್ಡಿ: ಶಾಂತರೀತಿಯಲ್ಲಿ ಬಿಜೆಪಿ ಸಭೆ ನಡೆದ ಸ್ಥಳಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಸಭೆಗೆ ತೊಂದರೆ ಕೊಡಲು ಯತ್ನಿಸಿತು, ಕಾಂಗ್ರೆಸ್ ಧ್ವಜ ಹಿಡಿದು ಬೈಕ್ ಮೇಲೆ ಬಂದ ಕೈ ಕಾರ್ಯಕರ್ತರು ದೊಡ್ಡ ಧ್ವನಿಯಲ್ಲಿ ಕೂಗಾಡಿ, ಕೇಕೆ ಹಾಕಿ ಬೈಕ್ ಶಬ್ದ ಮಾಡುತ್ತ ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸುವ ಯತ್ನ ಮಾಡಿದರು. ತಕ್ಷಣವೇ ಬಿಜೆಪಿ ನಾಯಕರು ಕಾರ್ಯಕರ್ತರಿಗೆ ಶಾಂತ ರೀತಿಯಿಂದ ಇರಲು ಮನವಿ ಮಾಡಿದರು. ನಿಯಂತ್ರಣಕ್ಕೆ ಬಾರದ ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ನೋಡಿ ಕೇಂದ್ರ ಸಚೀವ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಕರೆ ಮಾಡಿ ಬಿಜೆಪಿ ಸಭೆಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮಾತನಾಡಿ ಬಾಗಲಕೋಟೆ ಮತಕ್ಷೇತ್ರದಲ್ಲಿ‌ ಮತದಾರರು ನಿರ್ಭೀತವಾಗಿ ಮತಯಾಚನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಸಭೆಯನ್ನು ಸಹಿಸದ ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಮತದಾರರಿಗೆ ಮಾಡುವ ತೊಂದರೆಯನ್ನು ಅರ್ಥೈಸಿಕೊಳ್ಳಿ. ಎಲ್ಲ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳನ್ನಾಗಿ ಘೋಷಿಸಿ. ರಕ್ಷಣೆಗಾಗಿ ಪ್ಯಾರಾ ಮಿಲಿಟರಿ ನೇಮಿಸಿ ಎಂದು ಮನವಿ‌ ಮಾಡಿದರು. ಕಾಂಗ್ರೆಸ್ ಗಲಾಟೆಯ ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಗುಂಡಾಗಿರಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಈ ವೇಳೆ ದೇವರಾಜ ಪಾಟೀಲ್, ಮಹಾಂತೇಶ ಕಡಪಟ್ಟಿ, ದೊಡ್ಡಪ್ಪಗೌಡ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

Hot this week

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ - ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್...

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ...

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

Topics

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ - ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್...

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ

ರಾಮದುರ್ಗದಲ್ಲಿ ಎಬಿವಿಪಿಯಿಂದ ಅದ್ಧೂರಿ ತಿರಂಗ ಯಾತ್ರೆ ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ...

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...
spot_img

Related Articles

Popular Categories

spot_img