*ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಸರ್ಕಾರ ಸೌಲಭ್ಯ ಒದಗಿಸಲಿ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಹೇಳಿದರು.*
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಮಹಿಳೆರಿಗೂ ಶಕ್ತಿ ಯೋಜನೆಯಡಿ ಉಚಿತ ಬಸ್ ಪಾಸ್ ನೀಡಿರುವ ಮುಖ್ಯಮಂತ್ರಿಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಕಷ್ಟಕರ ಮಾನದಂಡಗಳನ್ನು ವಿಧಿಸಿದ್ದಾರೆ. ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಮೇಷ ತೋರುತ್ತಿದ್ದಾರೆ ಎಂದರು.
ಎಲ್ಲ ನಿಯಮ ರದ್ದು ಪಡಿಸಿ ಮಹಿಳೆಯರಿಗೆ ಆಧಾರ್ ಕಾರ್ಡ್ ಬಳಸಿಕೊಂಡು ರಾಜ್ಯ ತುಂಬೆಲ್ಲಾ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದಂತೆ ಗುರುತಿನ ಪತ್ರವಿರುವ ಎಲ್ಲ ಪತ್ರಕರ್ತರಿಗೆ ಅವಕಾಶ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಪಿಐ ವಿನಾಯಕ ಬಡಿಗೇರ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಬಹಿರಂಗ ಪಡಿಸುವ ವರದಿಗಾರರು ವಸ್ತುನಿಷ್ಠ ವರದಿಗೆ ಆದ್ಯತೆ ನೀಡಬೇಕು. ಯಾರನ್ನೋ ಖುಷಿ ಪಡಿಸಲು ಪತ್ರಿಕಾ ಧರ್ಮಕ್ಕೆ ಅಪಚಾರವಾಗದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಿಗೆ, ದಿನಪತ್ರಿಕೆ ವಿತರಕರಿಗೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ ಮಾಡಲಾಯಿತು.
ಅವರಾದಿಯ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು. ಮಂಜುನಾಥ ಮಾಡ್ಯಾಳ ಹಿರಿಯ ನ್ಯಾಯವಾದಿಗಳು ಸುಪ್ರೀಂಕೋರ್ಟ್ ನವದೆಹಲಿ,
ಎಸ್ ಎಸ್ ಪಾಟೀಲ್ ಸಂಪಾದಕರು ಸುದರ್ಶನ ಪತ್ರಿಕೆ
ಪುರಸಭೆ ಅಧ್ಯಕ್ಷ ಲಕ್ಷ್ಮಿ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ್, ಡಾ. ನವೀನ ನಿಜಗುಲಿ, ಕಾನಿಪ ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಶಿರಸಂಗಿ, citu ಜಿಲ್ಲಾ ಮುಖಂಡ ಗೈಬುಸಾಬ ಜೈನೆಖಾನ್, ಅಶೋಕ್ ಸೂಳಿಬಾವಿ, ಶಫಿ ಬೆನ್ನಿ , ಗಣೇಶ್ ದೊಡಮನಿ, ಉಪಸ್ಥಿತರಿದ್ದರು
ಶಿಕ್ಷಕರುಗಳಾದ ಜಿ ಟಿ ಕರದಿನ್ನ ಹಾಗೂ ಪಿ ಎಸ್ ಕರ್ಕಿ ಕಾರ್ಯಕ್ರಮ ನಿರೂಪಿಸಿದರು ವೀರೇಶ ಬಳಿಗೇರ ಸ್ವಾಗತಿಸಿದರು ಕೃಷ್ಣ ಬಟಕುರ್ಕಿ ವಂದಿಸಿದರು.