Monday, April 13, 2026
23.1 C
Belagavi

ಕೆಯುಡಬ್ಲೂಜೆ ಮನವಿಗೆ ಸ್ಪಂದನೆ, ಆಯಾ ವರ್ಷವೇ ಪ್ರಶಸ್ತಿ ಪ್ರದಾನಕ್ಕೆ ಕ್ರಮ: ಕೆ.ವಿ.ಪ್ರಭಾಕರ್

advertisement

spot_img

ಬೆಂಗಳೂರು: ಪರಿಸರ ಅಭಿವೃದ್ಧಿ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ತಿಳಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಿಧಾನಸೌಧದಲ್ಲಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ವಾರ್ತಾ ಇಲಾಖೆಯಿಂದ ಪ್ರತಿ ವರ್ಷ ಕೊಡ ಮಾಡುವ ಈ ಪ್ರಶಸ್ತಿಗಳು ಕಳೆದ 7 ವರ್ಷಗಳಿಂದ ಬಾಕಿ ಉಳಿದಿವೆ ಎನ್ನುವುದನ್ನು ಗಮನಕ್ಕೆ ತಂದರು.

ಪ್ರಶಸ್ತಿ ಪುರಸ್ಕೃತರ ಆಯ್ಕೆ ಪ್ರಕ್ರಿಯೆ ಮುಗಿದು ಈಗಾಗಲೇ 8 ತಿಂಗಳಾಗಿದ್ದರೂ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗಧಿಯಾಗಿಲ್ಲ. ಮುಂದೆ ಈ ರೀತಿ ಆಗದಂತೆ ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ಪ್ರದಾನ ಮಾಡಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಈ ತಿಂಗಳ 19ರಂದು ಪ್ರಶಸ್ತಿ ಪ್ರದಾನ ಮಾಡಲು ಮುಖ್ಯಮಂತ್ರಿಗಳ ದಿನಾಂಕ ನಿಗದಿಗೊಳಿಸಲು ತಿಳಿಸಲಾಗಿದೆ. ಮುಂದೆ ಆಯಾ ವರ್ಷವೇ ಪ್ರಶಸ್ತಿ ಪ್ರದಾನ ಮಾಡಲು ಕ್ರಮ ವಹಿಸಲಾಗುವುದು ಎಂದು ಪ್ರಭಾಕರ್ ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಿ ಆದಷ್ಟು ಬೇಗ ಜಾರಿಗೊಳಿಸಬೇಕು. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತು ಸಡಿಲಿಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಇದೇ ಸಂದರ್ಭದಲ್ಲಿ ಸಲ್ಲಿಸಲಾಯಿತು.

ಈ ವೇಳೆ ಹಿರಿಯ ಪತ್ರಕರ್ತರುಗಳಾದ ರಮೇಶ ಹಿರೇಜಂಬೂರ, ಸುಂದರೇಶ್ ಉಪಸ್ಥಿತರಿದ್ದರು.

Hot this week

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

Topics

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...
spot_img

Related Articles

Popular Categories

spot_img