ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಧರ್ಮದೇಟು
ಹೌದು ವೀಕ್ಷಕರೆ ಬೆಳಗಾವಿ ನಗರದ ರಾಮದೇವ್ ಹೋಟೆಲ್ ಪಕ್ಕದಲ್ಲಿರುವ ಶೆಲ್ ಪೆಟ್ರೋಲ್ ಬಂಕ್ ನಲ್ಲಿ ನಡೆದ ಘಟನೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಮಹಿಳಾ ಗ್ರಾಹಕೀಯೊಂದಿಗೆ ಸಿಬ್ಬಂದಿ ಯು ಅಸಭ್ಯವಾಗಿ ವರ್ತಿಸಿದ್ದಾನೆ. ಗಾಬರಿಯಾದ ಮಹಿಳೆ ಕೂಡಲೇ ತನ್ನ ಪತಿಗೆ ಫೋನ್ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ ಸ್ಥಳಕ್ಕೆ ಆಗಮಿಸಿದ ಪತಿ ಹಾಗೂ ಆತನ ಸ್ನೇಹಿತರು ಪೆಟ್ರೋಲ್ ಪಂಪ್ ಸಿಬ್ಬಂದಿಯೊಡನೆ ಮಾತಿನ ಚಕ್ಕಮಕಿ ನಡೆದು ಸಿಬ್ಬಂದಿಯ ಮೇಲೆ ಮಹಿಳಾ ಗ್ರಾಹಕೀಯ ಪತಿ ಹಾಗೂ ಸ್ನೇಹಿತರು ಸೇರಿ ಸಿಬ್ಬಂದಿಗೇ ಧರ್ಮದೇಟು ನೀಡಿದ್ದಾರೆ ಈ ಘಟನೆಯು ಬೆಳಗಾವಿಯ ನಗರದ ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.


