Sunday, May 31, 2026
28.1 C
Belagavi

ಬಯಲುಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ತರಲು ಹೋರಾಟ ರೂಪಿಸಬೇಕು: ಬಸವರಾಜ ಬೊಮ್ಮಾಯಿ

advertisement

spot_img

ಬಯಲುಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ತರಲು ಹೋರಾಟ ರೂಪಿಸಬೇಕು: ಬಸವರಾಜ ಬೊಮ್ಮಾಯಿ

ಪ್ರಶಿಕ್ಷಣದಲ್ಲಿ ಸಕಾರಾತ್ಮಕ ರಾಜಕಾರಣ ಮಾಡುವುದನ್ನು ಕಲಿಯಬೇಕು: ಬಸವರಾಜ ಬೊಮ್ಮಾಯಿ

ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ಬರಬೇಕೆಂದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಸಕಾರಾತ್ಮಕ ರಾಜಕಾರಣದ ಮೂಲಕ ಹೋರಾಟ ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ರ ಅಂಗವಾಗಿ ನಡೆದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಡಿತ್ ದೀನದಯಾಳ ಉಪಾಧ್ಯಾಯರು ಜನಸಂಘವನ್ನು ಕಟ್ಟಿದರು. ಅದರ ಮೊದಲನೇ ಅಧ್ಯಕ್ಷರಾಗಿದ್ದರು. ಅವರಿಗೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಒಂದು. ಚುನಾವಣೆಗೆ ಅಥವಾ ಒಂದು ರಾಜಕೀಯ ಪಕ್ಷ ಕಟ್ಟಿದರೆ ಸಾಲದು ರಾಷ್ಟ್ರೀವಾದಿ ರಾಜಕೀಯ ಪಕ್ಷ ಕಟ್ಟಬೇಕು. ರಾಜಕಾರಣ ಮಾಡುವುದೇ ರಾಷ್ಟ್ರಕ್ಕಾಗಿ, ಭಾರತ ಮಾತೆಗೋಸ್ಕರ ರಾಜಕಾರಣ ಮಾಡಬೇಕು. ಆದರೆ, ಈ ವಿಚಾರವನ್ನು ಸ್ವಾತಂತ್ರ ಬಂದಾಗ ಹೇಳುವುದು ಕಷ್ಟವಾಗಿತ್ತು. ಆಗ ಬಿಜೆಪಿ ನಾಯಕರಿಗೆ ಪ್ರಶಿಕ್ಷಣ ವರ್ಗದ ಮೂಲಕ ಪಕ್ಷವನ್ನು ಕಟ್ಟುವ ದೀನದಯಾಳ ಉಪಾಧ್ಯಾಯ ಅವರ ಯುಕ್ತಿಯಿಂದ ಬಂದಿದೆ. ಹೇಗೆ ಒಬ್ಬ ವ್ಯಕ್ತಿ ಜೀವನದ ಉದ್ದಕ್ಕೂ ವಿದ್ಯಾರ್ಥಿ ಆಗಿರುತ್ತಾನೆ. ಅವರು ಯಶಸ್ವಿಯಾಗುತ್ತಾರೆ. ನಾನು ಡಿಗ್ರಿ ಮುಗಿಸಿದ್ದೇನೆ ಎಂದು ಬಿಟ್ಟರೆ ಅವರು ಯಶಸಿಯಾಗುವುದಿಲ್ಲ. ರಾಜಕೀಯ ಪಕ್ಷದಲ್ಲಿ ಕೂಡ ಕಾರ್ಯಕರ್ತರು ರಾಜಕಾರಣ ತಿಳಿದುಕೊಂಡು ಅದನ್ನು ಜನಪರವಾಗಿ ಇರುವಂತ ರಾಜಕಾರಣ ಮಾಡುವ ಮೂಲಕ ಅನುಭವ ಪಡೆದುಕೊಂಡಾಗ ನಾಯಕತ್ವ ಬರುತ್ತದೆ ಎಂದು ಹೇಳಿದರು..ಜನಪರ ರಾಜಕಾರಣ
ಒಂದು ಜನಪರ ರಾಜಕಾರಣ ಇನ್ನೊಂದು ಅಧಿಕಾರದ ರಾಜಕಾರಣ ಬಹಳಷ್ಟು ಜನರು ಅಧಿಕಾರದ ರಾಜಕಾರಣ ಮಾಡುತ್ತಾರೆ. ಆದರೆ, ಜನರ ರಾಜಕಾರಣ ಮಾಡಿದರೆ ಅಧಿಕಾರ ಇಲ್ಲದಿದ್ದರೂ, ರಾಜಕಾರಣ ನಡೆಯುತ್ತದೆ. ನಾನು ಎರಡು ಉದಾಹರಣೆ ನಿಮ್ಮ ಮುಂದೆ ಕೊಡುತ್ತೇನೆ. ಜನರ ರಾಜಕಾರಣವನ್ನು ಶಿಸ್ತಿನಿಂದ ಮಾಡಿರುವ ಇಬ್ಬರು ನಾಯಕರು ಒಬ್ಬರು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಅಮೆರಿಕಾಕ್ಕೆ ಹೋದಾಗ ನೀವು ಹಿಂದು ಪ್ರಧಾನಿನಾ ಅಂತ ಕೇಳಿದರು. ನೀವು ಆರ್ ಎಸ್ಎಸ್ ಸದಸ್ಯರು ಅಂತ ಕೇಳಿದರು. ಅವರು ನಾನು ಆರ್ ಎಸ್ಸೆಸ್ ಸ್ವಯಂ ಸೇವಕ‌ ಆ ಮೇಲೆ ನಾನು ಪ್ರಧಾನ ಮಂತ್ರಿ ಎಂದು ಸ್ಪಷ್ಟವಾಗಿ ಹೇಳಿದರು. ನಾನು ಎಷ್ಟೇ ಎತ್ತರಕ್ಕೂ ಹೋದರೂ ನನ್ನ ಮೂಲ ವಿಚಾರ ಬದಲಾಗಬಾರದು. ಒಮ್ಮೆ ಸ್ವಯಂ ಸೇವಕ ಆದ ಮೇಲೆ ಕೊನೆವರೆಗೂ ಸ್ವಯಂ ಸೇವಕ ಅದೇ ರೀತಿ ಈಗಿನ ಪ್ರಧಾನ ಮಂತ್ರಿಯವರನ್ನು ಕೇಳಿದಾಗ ಅವರು ನಾನು ಸ್ವಯಂ ಸೇವಕ ಈಗ ಪ್ರಧಾನ ಸೇವಕ ಸೇವೆ ಮಾಡುವುದನ್ನು ಮನಸಿನಲ್ಲಿ ಇಟ್ಟು ಕೊಂಡು ಕೆಲಸ ಮಾಡಬೇಕು. ಪ್ರಶಿಕ್ಷಣ ಅಂದರೆ ನಮ್ಮ ಬೇರುಗಳ ಬಳಿ, ನಾವುಹೋಗಬೇಕು. ನಾವು ಮೊದಲು ಏನಾಗಿದೆವು ರಾಜಕೀಯ ಕಾರ್ಯಕರ್ತರರು ಆಗುವ ಮೊದಲು ಏನಾಗಿದ್ದೆವು. ಬಿಜೆಪಿ ಕಾರ್ಯಕರ್ತರು ಯಾಕೆ ಆಗಿದ್ದೇವೆ. ಹೇಗೆ ಬೆಳೆಯಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ನಾವು ಜನರ ಪರ, ರಾಷ್ಟ್ರದ ರಾಜಕಾರಣ ಮತ್ತು ನಮ್ಮ ಧರ್ಮದ ರಕ್ಷಣೆ ಮಾಡುವ ರಾಜಕಾರಣ ಮಾಡುತ್ತೇವೆ ಎನ್ನುವ ಸ್ಪಷ್ಟತೆಯಿಂದ ಹೋದಾಗ ನಮ್ಮ ಭವ್ಯ ಭಾರತದ ಕನಸು ನನಸಾಗುತ್ತೆ, ಅದಕ್ಕೆ ಈ ರೀತಿಯ ಪ್ರಶಿಕ್ಷಣ ಅವಶ್ಯಕತೆ ಇದೆ. ಮನುಷ್ಯನಿಗೆ ಅನುಕೂಲ ಇದ್ದಲ್ಲಿ ಹೋಗುವ ಸ್ವಭಾವ, ಆರಂಭದ ದಿನಗಗಳಲ್ಲಿ ಇರುವ ಆದರ್ಶ ಅಧಿಕಾರ ಬಂದಾಗ ಹೋಗಿ ಬಿಡುತ್ತದೆ. ಪ್ರಶಿಕ್ಷಣದಲ್ಲಿ ನೀವು ಕಲಿತಿದ್ದನ್ನು ಅಧಿಕಾರಕ್ಕೆ ಬಂದಾಗ ಅದು ಗೌರವಿಸುತ್ತದೆ. ಕೆಲವೇ ಕೆಲವು ಜನರು ಆದರ್ಶವನ್ನು ಅಧೀಕಾರಕ್ಕೆ ಬಳಕೆ ಮಾಡುತ್ತಾರೆ ಅವರು ನಾಯಕರಾಗಿ ಹೊರ ಹೊಮ್ಮುತ್ತಾರೆ ಎಂದರು.ಪಕ್ಷ ಸಂಘಟನೆ ಮುಖ್ಯ
ಚಿಕ್ಕಬಳ್ಳಾಪುರ ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಬೆಳೆಸಬೇಕಿದೆ. ಬಿಜೆಪಿ ಕಟ್ಟುತ್ತೇವೆ ಎಂದು ಬಂದಿದ್ದೀರಿ ನಿಮ್ಮನ್ನು ನೋಡಿ ಖುಷಿಯಾಗುತ್ತದೆ. ಬೆಂಗಳೂರು ನಗರದಲ್ಲಿ ಪಕ್ಷ ಕಟ್ಟುವುದು ಶಾಸಕರಾಗುವುದು ಬಹಳ ಸುಲಭ, ಅನೇಕರು ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ ಜನರ ಸಂಪರ್ಕ ಇಲ್ಲ. ಆದರೂ, ಜನರು ಅವರಿಗೆ ಮತ ಹಾಕುತ್ತಾರೆ. ಕೋಲಾರ ಭಾಗದಲ್ಲಿ ಕಮ್ಯುನಿಷ್ಟರು ಮತ್ತು ಕಾಂಗ್ರೆಸ್ ಪ್ರಭಾವ ಇದೆ. ಇವತ್ತು ಪಶ್ಚಿಮ ಬಂಗಾಲದ ಫಲಿತಾಂಶ ಬಂದಿದೆ, ಅಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಹೋರಾಟ ಜೋರಾಗಿದೆ. ಅಲ್ಲಿ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರ ಪ್ರಯತ್ನದ ಫಲ ಈಗ ಸಿಕ್ಕಿದೆ. ಯಾಕೆಂದರೆ ಪಶ್ಚಿಮ ಬಂಗಾಲಕ್ಕೆ ನಾಯಕತ್ವದ ಅವಶ್ಯಕತೆ ಇತ್ತು. ಸುವೇಂದು ಅಧಿಕಾರಿ ಅವರು ಟಿಎಂಸಿ ಬಿಟ್ಟು ಬಿಜೆಪಿಗೆ ಬಂದರು. ಸಂಘಟನೆಯ ಬಲ ಮತ್ತು ನಾಯಕತ್ವದ ಫಲವಾಗಿ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಅದೇ ರೀತಿ ಕೋಲಾರ ಚಿಕ್ಕಬಳ್ಳಾಪುರ ಭಾಗದಲ್ಲಿ ಅವಕಾಶ ಇದೆ. ಇಲ್ಲಿ ಜನಸಂಘದ ಕಾಲದಿಂದಲೂ ಅನೇಕ ಮುಖಂಡರು ಇದ್ದಾರೆ. ಅವರೆಲ್ಲ ಅಧಿಕಾರ ಇಲ್ಲದೇ ಹೋಗಿದ್ದಾರೆ. ಇಲ್ಲಿಯೂ ರಾಜಕೀಯ ಮುಖಂಡರ ಅವಶ್ಯಕತೆ ಇದೆ. ಹಿಂದೆಯೂ ಎರಡು ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದೆವು. ಆದರೆ, ನಾಯಕತ್ವ ಇರಲಿಲ್ಲ ಈಗ ಸುಧಾಕರ ಅವರು ಬಿಜೆಪಿಗೆ ಬಂದ ಮೇಲೆ ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತ ಆಗದೇ ಬೇರೆ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದರು. ವಿಧಾನಸಭೆಯ ಚುನಾವಣೆಯಲ್ಲಿ ಅನೇಕ ಕಾರಣಗಳಿಂದ ಸೋತಿರಬಹುದು. ಜನ ಸೋಲಿಸಲಿಲ್ಲ, ಕುತಂತ್ರದಿಂದ ಸೋತಿದ್ದಾರೆ. ಯಾಕೆಂದರೆ ಒಂದೇ ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿ ಅವರಿಗೆ ಬಂದಿರುವ ಲೀಡ್ ಕಾರಣ, ಕೋಲಾರದಲ್ಲಿ ನಮ್ಮ ಮೈತ್ರಿ ಪಕ್ಷ ಗೆದ್ದರೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ ಗೆಲ್ಲುವಾಯಿತು. ಸುಧಾಕರ ಬಿಜೆಪಿಗೆ ಬರುವಾಗ ಕೆಲವು ಕಂಡಿಷನ್ ಹಾಕಿದ್ದರು. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು, ಮೆಗಾ ಡೈರಿ ಮಾಡಬೇಕೆಂದು ಕೇಳಿದ್ದರು. ಭೂಮಿ ಇಲ್ಲದವರಿಗೆ ಸೈಟ್ ಕೊಡುವ ಕೆಲಸ ಮಾಡಬೇಕು. ಎತ್ತಿನ ಹೊಳೆ ನೀರು ಹರಿಸಬೇಕು, ಕಾಂಗ್ರೆಸ್ ಡ್ರೈನೇಜ್ ನೀರು ಹರಿಸುವ ಕೆಲಸ ಮಾಡುತ್ತಿದೆ ಅದನ್ನು ಶುದ್ದೀಕರಣ ಮಾಡಬೇಕು ಎಂದು ಕೇಳಿದ್ದರು. ಅವರ ಮೇಲೆ ಬಹಳ ಒತ್ತಡ ಇತ್ತು, ಈ ಪ್ರದೇಶದಲ್ಲಿ ಬದಲಾವಣೆ ತರಲು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಬಂದರು. ಅವರಿಗೆ ಅಲ್ಲಿ ಒಳ್ಳೆಯ ಭವಿಷ್ಯ ಇತ್ತು. ಆದರೆ, ಅಧಿಕಾರ ಇದ್ದರೆ ಸಾಲದು. ಅವರು ಬಂದ ಮೇಲೆ ನಾವು ಅವರನ್ನು ವೈದ್ಯಕೀಯ ಶಿಕ್ಷಣ ಸಚಿವರನ್ನಾಗಿ ಮಾಡಿ ಅವರ ಕಡೆಯಿಂದಲೇ ಮೆಡಿಕಲ್ ಕಾಲೇಜ್ ಮಾಡಿದೆವು. ಅವರ ಜೊತೆಗೆ ನಮ್ಮ ಜಿಲ್ಲೆ ಹಾವೇರಿಗೂ ಬಂತು, ಚಿಕ್ಕಮಗಳೂರಿ ಯಾದಗಿರಿಗೂ ಮೆಡಿಕಲ್ ಕಾಲೇಜು ಬಂತು. ಹಾಲು ಒಕ್ಕೂಟದ ವಿಚಾರದಲ್ಲಿ ಬಹಳ ಸಮಸ್ಯೆಯಾಯಿತು, ಕಾಂಗ್ರೆನ್‌ನವರು ವಿರೋಧ ಮಾಡಿದರು. ಆದರೆ, ನಾವು ವಚನ ಕೊಟ್ಟಿದ್ದೇವೆ. ನಾವು ಮಾಡೇ ಮಾಡುತ್ತೇವೆ ಎಂದು ಮಾಡಿದೆವು. ಸುಧಾಕರ ಒತ್ತಡದ ಕಾರಣದಿಂದ ಹಾವೇರಿ ಜಿಲ್ಲೆಗೂ ಪ್ರತ್ಯೇಕ ಹಾಲು ಒಕ್ಕೂಟ ಬಂತು. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿರೋಧಿಸಿ ಕೋರ್ಟ್ ಗೆ ಹೋಗಿದ್ದರು. ನಿಮಗೆ ನ್ಯಾಯ ಸಿಕ್ಕಿದೆ. ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರುಸಂಸದ ಸುಧಾಕರ ಹಿಡಿದ ಕೆಲಸ ಬಿಡುವುದಿಲ್ಲ. ಚಿಕ್ಕಬಳ್ಳಾಪುರ ಮಂಡಳದ ಸುಮಾರು 20 ಸಾವಿರ ಜನರಿಗೆ ಒಂದೇ ಬಾರಿಗೆ ಹಕ್ಕುಪತ್ರ ವಿತರಿಸುವ ಕೆಲಸ ಬೇರೆ ಯಾವುದೇ ಕ್ಷೇತ್ರದಲ್ಲಿ ಆಗಿಲ್ಲ. ಯಾರು ಕೆಲಸ ಮಾಡಿಸಿಕೊಂಡಿರುತ್ತಾರೆ ಅವರು ಮೌನವಾಗಿರುತ್ತಾರೆ. ಯಾರು ಕೆಲಸ ಮಾಡಿಸಿಕೊಂಡಿರುವುದಿಲ್ಲ ಅವರ ಧ್ವನಿ ದೊಡ್ಡದಾಗಿರುತ್ತದೆ. 20 ಸಾವಿರ ಜನರು ಪ್ರಾಮಾಣಿಕವಾಗಿ ಮತ ಹಾಕಿದ್ದರೆ ಸುಧಾಕರ ಸೋಲುತ್ತಿರಲಿಲ್ಲ. ಇವತ್ತು ಈ ರೀತಿಯ ರಾಜಕಾರಣ ನಡೆಯುತ್ತಿದೆ. ನಾನು ನಮ್ಮ ಕ್ಷೇತ್ರದಲ್ಲಿ 5 ಲಕ್ಷದ 15 ಸಾವಿರ ಮನೆ ನೀಡಿದ್ದೆ, 5 ಸಾವಿರ ಹಕ್ಕು ಪತ್ರ ನಿಡಿದ್ದೇವೆ. ಆದರೂ, ನನ್ನ ಮಗ ಚುನಾವಣೆಯಲ್ಲಿ ಸೋಲುವಂತಾಯಿತು. ಹೀಗಾಗಿ ಪ್ರಶಿಕ್ಷಣದಲ್ಲಿ ಸಕಾರಾತ್ಮಕ ರಾಜಕಾರಣ ಮಾಡುವುದನ್ನು ಹೇಗೆ ಮಾಡಬೇಕೆಂದು ಕಲಿಯಬೇಕು. ಸಕಾರಾತ್ಮಕ ರಾಜಕಾರಣದ ಫಲವನ್ನು ಪಕ್ಷದ ಅನುಕೂಲಲಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಕಲಿಯಬೇಕು ಎಂದು ಹೇಳಿದರು.

ಹೋರಾಟ ಅಗತ್ಯ
ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಎತ್ತಿನ ಹೊಳೆ ನೀರು ಬಂದಿಲ್ಲ, ಕೊರಟಗೆರೆಯಲ್ಲಿ ಕಾಂಗ್ರೆಸ್ ನವರು ವಿರೋಧ ಮಾಡಿದ್ದರಿಂದ ನೀರಿನ ಸಂಗ್ರಹಕ್ಕೆ ಅವಕಾಶ ಇಲ್ಲ. ಇನ್ನೂ ಹೀಗೆ ಮುಂದುವರೆಸುತ್ತಾರೆ, ಡಿಸಿಎಂ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾಗಿರುವುದರಿಂದ ಸಿದ್ದರಾಮಯ್ಯ ಹಣ ಕೊಡುವುದಿಲ್ಲ. ಎತ್ತಿನ ಹೊಳೆ ಯೋಜನೆ ಮತ್ತೆ ಪ್ರಾರಂಭ ಆಗಬೇಕೆಂದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆದ್ದರಿಂದ ಹೋರಾಟ ರೂಪಿಸಬೇಕಿದೆ. ಯಡಿಯೂರಪ್ಪ ಅವರು ಹೇಗೆ ಹೋರಾಟ ಮಾಡಿದ್ದರೂ ಅದೇ ರೀತಿ ಈ ಮೂರು ಜಿಲ್ಲೆಗಳಲ್ಲಿ ಜನಪರ ಹೋರಾಟ ಕಟ್ಟ ಬೇಕು. ಯಾವಾಗ ರಾಜಶಕ್ತಿ ಮತ್ತು ಜನಶಕ್ತಿ ನಡುವೆ ಸಂಘರ್ಷ ನಡೆಯುತ್ತದೆ. ಆಗ ಜನಶಕ್ತಿಗೆ ಜಯ ಸಿಕ್ಕಿದೆ. ನೀರಿನ ಶುದ್ದೀಕರಣಕ್ಕೆ ನಾವು ಹಣ ಇಟ್ಟಿದ್ದೇವು ಕಾಂಗ್ರೆಸ್ ರವರು ಅದನ್ನು ಖಾಲಿ ಮಾಡಿದ್ದಾರೆ. ಇದರ ವಿರುದ್ಧ ಹೋರಾಟ ರೂಪಿಸಬೇಕಿದೆ. ಪಕ್ಷವನ್ನು ಬದ್ಧತೆಯಿಂದ ಆದರ್ಶದಿಂದ ಕಟ್ಟಿ ಈ ಭಾಗದಲ್ಲಿ ಈ ಪಕ್ಷ ಹೆಮ್ಮರವಾಗಿ ಬೆಳೆದು ಸಾಕಷ್ಟು ಜನರಿಗೆ ಬದುಕು ಕೊಡಲಿ, ರೈತರ ಬದುಕು ಹಸನಾಗಲಿ, ಕೈಗಾರಿಕೆಗಳು ಬೆಳೆಯಲ್ಲಿ ಅದರಲ್ಲಿ ಬಿಜೆಪಿಯ ಪಾತ್ರ ಇರಬೇಕು. ಎಲ್ಲಿ ಗುರಿ ಇದೆ. ಎಲ್ಲಿ ಛಲ ಇದೆ. ಎಲ್ಲಿ ಶ್ರಮ ಇದೆ ಅಲ್ಲಿ ಜಯ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಡಾ. ಸುಧಾಕರ ಹಾಗೂ ಮತ್ತಿತರರು ಹಾಜರಿದ್ದರು.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img