ಹುಬ್ಬಳ್ಳಿ: ಉತ್ತಮ ಜೀವನ ಶೈಲಿಯಿಂದ ಖಾಯಿಲೆಗಳನ್ನು ದೂರ ಇಡಲು ಸಾಧ್ಯ ಪ್ರತಿಯೊಬ್ಬರೂ ಹೃದಯದ ಬಗ್ಗೆ ಬಹಳ ಕಾಳಜಿ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಹುಬ್ಬಳ್ಳಿಯ ಶಿರೂರ ಪಾರ್ಕ ರಸ್ತೆಯಲ್ಲಿರುವ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನೂತನ ಅತ್ಯಾಧುನಿಕ ಓ.ಸಿ.ಟಿ ಯಂತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ಹೃದಯದ ಬಗ್ಗೆ ಬಹಳ ನಿಷ್ಕಾಳಜಿ ಮಾಡುತ್ತೇವೆ. ಯಾವುದಾದರೂ ಒಂದು ಅಂಗಾಂಗ ನಿರಂತರ ಕೆಲಸ ಮಾಡುತ್ತಿದ್ದರೆ ಅದು ಹೃದಯ. ಹೃದಯಕ್ಕೆ ವಿಶ್ರಾಂತಿ ಇಲ್ಲ. ಭಾವನೆಗಳು ಹೃದಯಕ್ಕೆ ಸಂಬಂಧ ಅಂತ ಸಾಹಿತಿಗಳು ಹೇಳುತ್ತಾರೆ. ಜನರು ಭಾವನೆಗಳನ್ನು ಹೃದಯಕ್ಕೆ ಸಂಬಂಧಿಸುತ್ತಾರೆ. ನಿಮ್ಮ ಹೃದಯಕ್ಕೆ ಖಾಯಿಲೆ ಬಂದಿದೆ ಅಂದರೆ ನಿಮ್ಮ ಹೃದಯ ನಿಮ್ಮ ಮೇಲೆ ಸಿಟ್ಟಾಗಿದೆ ಅಂತ ಅರ್ಥ. ಪ್ರತಿಯೊಬ್ಬರಿಗೂ ಗೋಲ್ಡನ್ ಅವರ ಬಹಳ ಮುಖ್ಯ ವಯಸ್ಸಾದ ಮೇಲೆ ಹಾರ್ಟ್ ಅಟ್ಯಾಕ್ ಆದರೆ ಬಹಳ ಜನರು ಉಳಿಯುತ್ತಾರೆ. ಯಂಗ್ ವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್ ಆದರೆ ಬಹಳ ಕಷ್ಟ ರಕ್ಷದ ಅಗತ್ಯ ಹೆಚ್ಚಿರುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಹೃದಯದ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಉತ್ತಮ ಜೀವನ ಶೈಲಿಯಿಂದ ಖಾಯಿಲೆಗಳನ್ನು ದೂರ ಇಡಲು ಸಾಧ್ಯವಿದೆ. ವಿಹಾನ ಆಸ್ಪತ್ರೆ ಎರಡು ವರ್ಷದಲ್ಲಿ ಒಳ್ಳೆಯಹೆಸರು ಪಡೆದುಕೊಂಡಿದೆ. ಒಳ್ಳೆಯ ಸವಲತ್ತುಗಳು ಇದರಲ್ಲಿವೆ. ಬೆಂಗಳೂರಿನ ಯಾವುದೇ ಕಾರ್ಪೊರೇಟ್ ಆಸತ್ರೆಗಿಂತ ಕಡಿಮೆಯಿಲ್ಲ ಎಂದರು.
ಡಾ. ಮಂಜುನಾಥ್ ಅವರು ಮಾಡಿರುವ ಸೇವೆ ಅಪಾರವಾಗಿದೆ. ಹೃದಯದ ಬಡಿತ ಹೇಗೆ ಕೆಲಸ ಮಾಡುತ್ತದೆ ಹಾಗೆ ಅವರು ಕೆಲಸ ಮಾಡಿದ್ದಾರೆ. ಅವರಿಗೆ ಆಯಾಸ ಇಲ್ಲ. ಪ್ರತಿ ದಿನ ಸಾವಿರಾರು ಜನಕ್ಕೆ ಅವರು ಉತ್ತರ ಕೊಡಬೇಕು. ಆದರೂ ಅವರು ನಗು ಮುಖದಲ್ಲಿ ಉತ್ತರ ಕೊಡುತ್ತಾರೆ. ಜಯದೇವ ಹೃದೋಗ ಸಂಸ್ಥೆಯನ್ನು ಮೈಸೂರು, ಗುಲಬರ್ಗ, ಹುಬ್ಬಳ್ಳಿಯಲ್ಲಿ ಆರಂಭಿಸಿದ್ದಾರೆ. ಅಮೇರಿಕದಲ್ಲಿ ಹಾರ್ಟ್ ಆಪರೇಷನ್‌ಗೆ 60, 70 ಲಕ ವೆಚ್ಚವಾಗುತ್ತದೆ. ಇಲ್ಲಿ ಇವರು ಕೇವಲ 2 ಲಕದಲ್ಲಿ ಆಪರೇಷನ್ ಮಾಡುತ್ತಾರೆ. ಇವರ ಈ ಸಾಧನೆಯನ್ನು ನೋಡಲು ಜಯದೇವ ಆಸ್ಪತ್ರೆಗೆ ಅಮೇರಿಕಾ ವೈದ್ಯರು ಬಂದು ನೋಡಿಕೊಂಡು ಹೋಗಿದ್ದಾರೆ ಎಂದರೆ ಇವರು ಎಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದು ತಿಳಿಯುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ನಿರ್ದೇಶಕರು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ ಸಂಸದರಾದ ಡಾ. ಸಿ.ಎನ್ ಮಂಜುನಾಥ, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ವಿಜಯಕೃಷ್ಣ ಕೋಳೂರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು , ವೈದ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.



