Friday, December 12, 2025
24.1 C
Belagavi

ಷಡಕ್ಷರಿ ಅವರ ಸಾಹಿತ್ಯ ಜೀವನಕ್ಕೆ ಬಹಳ ಹತ್ತಿರವಾಗಿದೆ: ಬಸವರಾಜ ಬೊಮ್ಮಾಯಿ

advertisement

spot_img

ಬೆಂಗಳೂರು: ಬಸವಣ್ಣ ಯುನಿವರ್ಸಲ್ ವ್ಯಕ್ತಿ, ಅದಕ್ಕೆ ಅವರನ್ನು ಜಗಜ್ಯೋತಿ ಬಸವೇಶ್ವರ ಎಂದು ಕರೆಯುತ್ತಾರೆ. ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ಜಂಟಿಯಾಗಿ ಏರ್ಪಡಿಸಿದ್ದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಷಡಕ್ಷರಿ ಅವರ ಕ್ಷಣ ಹೊತ್ತು ಅಣಿ ಮುತ್ತು ಭಾಗ 15 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಬಸವಣ್ಣ ಯುನಿವರ್ಸಲ್ ವ್ಯಕ್ತಿ, ಅದಕ್ಕೆ ಅವರನ್ನು ಜಗಜ್ಯೋತಿ ಬಸವೇಶ್ವರ ಎಂದು ಕರೆಯುತ್ತಾರೆ. ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ, ನಾವ್ಯಾರು ದೇವರಾಗಲು ಬಂದಿಲ್ಲ. ದೇವರಾಗಬಾರದು. ಬಸವಣ್ಣನ ಹಾಗೇ ಒಳ್ಳೆಯ ಮಾನವ ಆಗಬೇಕು. ಸಂಸಾರದಲ್ಲಿರುವ ಮಾನವ ಅತ್ಯಂತ ಸಾರ್ಥಕ ಬದುಕು ನಡೆಸಿದರೆ. ಅವನು ದೇವರ ಸರಿ ಸಮಾನ ಆಗುತ್ತಾನೆ. ನಾವು ಪರಿಪೂರ್ಣ ಆಗಲು ಇಡೀ ಜೀವನ ಬೇಕು. ನನ್ನ ಜಿವನದ ಹುಟ್ಟಿದ ಗುರಿ, ಕಾರಣ ಎನು, ಅಡಚಣೆ ಏನು ಅದನ್ನು ಹೇಗೆ ಸಾಧಿಸಬೇಕು ಎಂದು ತಿಳಿಯಬೇಕು ಅಂತಹ ಗುರಿಯನ್ನು ಷಡಕ್ಷರಿಯವರು ಸಾಧಿಸಿದ್ದಾರೆ ಎಂದು ಹೇಳಿದರು.
ಶರಣ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರೆ ಅದಕ್ಕೆ ಗೋ.ರು. ಚನ್ನಬಸಪ್ಪ ಅವರು ಕಾರಣ, ಅವರ ಕಾರ್ಯದ ಬಗ್ಗೆ ಅವರಿಗೆ ಕನ್ನಡ ನಾಡು, ಶರಣ ಭಕ್ತರು ಚಿರ ಋಣಿಯಾಗಿದ್ದಾರೆ ಎಂದರು.

ಮೂಲಭುತ ಬದಲಾವಣೆ ಅದು ಕಾಲಾತೀತವಾಗಿರುತ್ತದೆ ಸಮಯ ಮತ್ತು ಗಡಿ ಮೀರಿರುವುದು. ಇವತ್ತು ಶರಣ ಸಾಹಿತ್ಯ ಇಲ್ಲದಿದ್ದರೆ ಇಷ್ಡು ದೊಡ್ಡ ವೈಚಾರಿಕತೆ, ಸಮಾನತೆ ವಿಚಾರ ಚರ್ಚೆಯಾಗುತ್ತಿರಲಿಲ್ಲ. ಬಸವಣ್ಣ, ಬುದ್ದ, ಮಹಾವೀರ ಮಹಮೊದ ಪೈಗಂಬರ ಇವರೆಲ್ಲ ಒಂದು ಗುಂಪು, ಸಂಸ್ಥೆಯಲ್ಲ. ಫ. ಗು ಹಳಕಟ್ಟಿಯವರು ಬಿಎಲ್ ಡಿ ಸಂಸ್ಥೆಯನ್ನು ಹುಟ್ಡು ಹಾಕಿದ್ದರು. ಕೇವಲ ಆದ್ಯಾತ್ಮಿಕ ಅಲ್ಲ, ಥಾಮಸ್ ಅಲ್ವಾ ಎಡಿಸನ್ಸ್ ಎಲೆಕ್ಟ್ರಿಕ್ಸ ನ್ನು ಕಂಡು ಹಿಡಿದಾಗ ದೊಡ್ಡ ಲ್ಯಾಬೋರೇಟರಿ ಇರಲಿಲ್ಲ. ಕ್ರಾಂತಿಯಾಗಬೇಕಾದರೆ ಬಹಳ ಜನ ಬೇಕು. ಕ್ರಾಂತಿಯಾಗುವವರೆಗೂ ಎಲ್ಲರೂ ಒಟ್ಟಾಗಿ ಇರುತ್ತಾರೆ. ಕ್ರಾಂತಿ ನಂತರ ಒಕ್ಕಟ್ಡು ಉಳಿಸುವುದು ಕಷ್ಟ. ಫ್ರೆಂಚ್ ಕ್ರಾಂತಿ, ರಷ್ಯನ ಕ್ರಾಂತಿ, ನಮ್ಮ ಸ್ವಾತಂತ್ರ್ಯ ಹೋರಾಟವಾಗಲಿ ಎಲ್ಲವನ್ನೂ ಒಟ್ಟಾಗಿ ಹೋರಾಡಿದ್ದೇವೆ. ಅದನ್ನು ನಿಭಾಯಿಸುವ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದೇವೆ ಎಂದರು.

ಷಡಕ್ಷರಿ ಹೆಸರಿನಲ್ಲಿ ಅಕ್ಷರ ಇದೆ
ಇದುವರೆಗೂ ಸಾಮಾನ್ಯ ಜನರು ಶೇ 6% ರಷ್ಟು ಬುದ್ದಿವಂತರು 9% ವಿಜ್ಞಾನಿಗಳು ಶೇ 20% ಮಿದುಳು ಬಳಕೆ ಮಾಡುತ್ತಾರೆ‌ ಇನ್ನೂ ಶೇ 80% ರಷ್ಟು ಮೆದಳು ಬಳಕೆ ಮಾಡುವುದಿಲ್ಲ. ಷಡಕ್ಷರಿ ಅವರ ಜೀವನವನ್ನು ಸೂಕ್ಷ್ಮವಾಗಿ ನೋಡಿದಾಗ ಸಾಮಾನ್ಯ ಕುಟುಂಬದಿಂದ ಬಂದವರು ಕಷ್ಟಪಟ್ಟು ಮೇಲೆ ಬಂದವರು ಅವರು ಎಲ್ಲರ ಪ್ರೀತಿಯನ್ನು ಗಳಿಸಿದರು. ನಂತರ ಹಣ ಗಳಿಸಿದರು. ಷಡಕ್ಷರಿ ಅವರು ಬಹಳ ಆತ್ಮೀಯರು ನನಗೆ ಅವರ ಹೃದಯದಲ್ಲಿ ನನಗೆ ಸ್ಥಾನ ಇದಿಯಾ ಅಂತ ನೋಡಲಿಕ್ಕೆ ಅದನ್ನು ಪರೀಕ್ಷೆ ಮಾಡಿಸಿದೆ. ನನಗೆ ಕುತೂಹಲ ಡಾ. ವಿವೇಕ ಜವಳಿ ಅವರು ಅವರ ಹೃದಯಲ್ಲಿ ಬೇರೆ ಯಾರೂ ಇಲ್ಲ. ಅವರ ಮನೆಯವರು ಮಾತ್ರ ಇದ್ದಾರೆ ಎಂದರು. ಅವರ ಬದುಕು ಬಹಳ ಸರಳವಿದೆ‌. ಸೆನ್ಸ್ ಆಪ್ ಹ್ಯೂಮರ್ ಅವರಿಗೆ ಅದ್ಬುತವಾಗಿದೆ. ಹ್ಯೂಮರನ್ನು ಅನುಭವಿಸುವ, ಹಂಚುವ ಗುಣ ಇದ್ದರೆ ಎನರ್ಜಿಯಾಗಿ ಜೀವನ ನಡೆಸುತ್ತಾರೆ. ತಮ್ಮ ವೃತ್ತಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅದಕ್ಕಿಂತ ದೊಡ್ಡ ಸಾಧನೆ ಇಷ್ಟೆಲ್ಲ ಜನರನ್ನು ಗಳಿಸಿದ್ದಾರೆ. ಷಡಕ್ಷರಿ ಅವರ ಹೆಸರಿನಲ್ಲಿಯೇ ಅಕ್ಷರ ಇದೆ. ಅವರ ಕ್ಷಣ ಹೊತ್ತು ಅಣಿ ಮುತ್ತು ಅದನ್ನು ಓದಿದವರಿಗೆ ಗೊತ್ತು ಒಂದು ವಿಚಾರವನ್ನು ಹೇಳುವ ಶೈಲಿಯಲ್ಲಿ ಜನರನ್ನು ಆಕರ್ಷಿಸಬೇಕು. ವಚನ ಸಾಹಿತ್ಯ ಯಾಕೆ ಅಷ್ಟು ಜನಪ್ರಿಯವಾಯಿತು ಅಂದರೆ ಶರಣರು ಬದುಕಿಗೆ ಹತ್ತಿರವಾಗಿರುವ ವಿಚಾರ ಅತ್ಯಂತ ಪ್ರೀತಿ ಯಿಂದ ಮಾರ್ಮಿಕವಾಗಿ ಕಠೋರವಾಗಿ ಹೇಳಿದ್ದಾರೆ. ವಚನಕಾರರು ಬದುಕಿನ ಚಿಂತನೆ ಮಾಡಿದ್ದಾರೆ ಎಂದರು.
ಆಧುನಿಕ ಜಗತ್ತಿಗೆ ವಚನದ ರೀತಿಯಲ್ಲಿ ಪರಿಣಾಮಕಾರಿಯಾಗಿ ಉದಾಹರಣೆಗಳ ಸಮೇತ ಅದ್ಬುತವಾಗಿ ಹೇಳಿರುವ ಕನ್ನಡ ಸಾಹಿತ್ಯ ಷಡಕ್ಷರಿ ಅವರದು.
ಇವರು ಬರೆದಿರುವುದು ಜಿವನಕ್ಕೆ ಬಹಳ ಹತ್ತಿರವಾಗಿದೆ. ಇವರ ಬರಹ ಓದಿ ಬಹಳ ಜನರು ಜೀವನ ಬದಲಾಯಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಅಕ್ಷರ ಇರುವುದಕ್ಕೆ ಸಾರ್ಥಕತೆಯನ್ನು ಷಡಕ್ಷರಿಯವರು ಮಾಡಿದ್ದಾರೆ ಎಂದು ಹೇಳಿದರು.

ಪತ್ರಕರ್ತ ವಿಶ್ವೇಶ್ವರ ಭಟ್ ಅವರು ವಿದೇಶಕ್ಕೆ ಹೋದಾಗ ಅಲ್ಲಿಯ ಜೀವನ ಶೈಲಿಯ ಬಗ್ಗೆ ಪುಸ್ತಕ ಬರೆಯುತ್ತಾರೆ. ಇಡಿ ಜಗತ್ತನ್ನು ಅತ್ಯಂತ ಸರಳವಾಗಿ ಕನ್ನಡಿಗರಿಗೆ ಪರಿಚಯಿಸಿದವರು ವಿಶ್ವೇಶ್ವರ ಭಟ್ ಅವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ, ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ, ಪುಸ್ತಕದ ಕೃತಿಕಾರ ಷಡಕ್ಷರಿ, ಪತ್ರಕರ್ತ ವಿಶ್ವೇಶ್ವರ ಭಟ್ ಹಾಜರಿದ್ದರು.

Hot this week

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

Topics

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು

ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಒಟ್ಟು 10 ದಿನಗಳ ಕಾಲ ನಡೆಯಲಿರುವ...

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ|ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ ಹನುಮಂತಯ್ಯ ಒಬ್ಬ ದಕ್ಷ...

ಪಂಚಭೂತಗಳಲ್ಲಿ ಲೀನವಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ.

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು. ಒಂದೇ ಕಡೆ ನಾಲ್ಕು ಜನರ...
spot_img

Related Articles

Popular Categories

spot_img