ನ್ಯಾಯಯುತವಾದ ದರ ಸಿಗಬೇಕೆಂದು ಕಬ್ಬು ಬೆಳೆಗಾರರು ಗುರ್ಲಾಪೂರ ಕ್ರಾಸ್ ಬಳಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿ, ಬೆಂಬಲ ಸೂಚಿಸಿ, ಸಕ್ಕರೆ ಕಾರ್ಖಾನೆಗಳು 1 ಟನ್ ಕಬ್ಬಿಗೆ ₹3,500 ನೀಡಬೇಕೆಂದು ಒತ್ತಾಯಿಸಲಾಯಿತು.
ರೈತರು ವರ್ಷಪೂರ್ತಿ ಬೆವರು ಸುರಿಸಿ ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗಬೇಕು. ರೈತರ ಜೀವನ ಸಮೃದ್ಧವಾಗಿದ್ದರೆ ದೇಶ ಸಮೃದ್ಧವಾಗಿರುತ್ತದೆ. ರೈತ ಈ ದೇಶದ ಬೆನ್ನೆಲುಬು ಎಂಬುದನ್ನು ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು
ಅರ್ಥ ಮಾಡಿಕೊಂಡು ಅವರ ಬೇಡಿಕೆಗಳನ್ನು ಈಡೇರಿಸುವ ಮನಸ್ಸು ಮಾಡಬೇಕೆಂದು ವಿನಂತಿಸಿಕೊಂಡೇನು.




