ದೇವಾಂಗ ಸಮಾಜದ ಮೂಲ ಪುರುಷ ಶ್ರೀದೇವಲ ಮಹರ್ಷಿ ಅವರ ಜಯಂತ್ಯೋತ್ಸವ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮವು ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿತು.
ಉತ್ಸವದ ಪ್ರಯುಕ್ತ ದೇವಾಂಗ ಸಮಾಜದ ಬಾಂಧವರು ಬಾಣಕಾರ ಪೇಟೆ ಈಶ್ವರ ದೇವಸ್ಥಾನದಿಂದ ಮತ್ತು ರಾಧಾಪೂರ ಪೇಟೆಯ ಶ್ರೀಬನಶಂಕರಿ ದೇವಸ್ಥಾನದಿಂದ ಶ್ರೀದೇವಲ ಮಹರ್ಷಿಯವರ ಆಳೆತ್ತರದ ಪ್ರತಿಮೆಯನ್ನು ವಾಹನದಲ್ಲಿ ಪ್ರತಿಷ್ಠಾಪಿಸಿ, ನೇಕಾರ ಪೇಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕರಡಿ ಮಜಲು ವಾಧ್ಯಗಳೊಂದಿಗೆ ಸುಮಂಗಲೆಯರ ಆರತಿಯು ಮೆರವಣಿಗೆ ಕಳೆ ಹೆಚ್ಚಿಸಿತು.
ತೊಟ್ಟಿಲೋತ್ಸವ: ಪಟ್ಟಣದ ನೇಕಾರ ಪೇಟೆಯ ರಾಧಾಪೂರ ಪೇಟೆಯ ಶ್ರೀದೇವಲ ಮಹರ್ಷಿ ದೇವಸ್ಥಾನದಲ್ಲಿ
ಬೆಳಿಗ್ಗೆ ವಿಶೇಷ ರುದ್ರಾಭಿಷೇಕ, ಅಲಂಕಾರ ಪೂಜೆ ನೆರವೇರಿಸಲಾಯಿತು. ಜಯಂತ್ಯೋತ್ಸವದ ಅಂಗವಾಗಿ ಶ್ರೀದೇವಲ ಮಹರ್ಷಿ ಉತ್ಸವ ಮೂರ್ತಿಯನ್ನು ತೊಟ್ಟಿಲಕ್ಕೆ ಹಾಕಿದ ಸುಮಂಗಲೆಯರು ಸಾಂಪ್ರದಾಯಿಕ ಪದಗಳನ್ನು ಹಾಡಿ ದೇವಾಂಗನೆಂದು ನಾಮಕರಣ ಮಾಡುವುದರ ಮೂಲಕ ತೊಟ್ಟಿಲೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ಕುಬೇರ ಗರಡಿಮನಿ, ಉಪಾಧ್ಯಕ್ಷ ರವಿ ಕರಡಿಗುಡ್ಡ, ನೇಕಾರ ಸಮುದಾಯದ ತಾಲೂಕು ಅಧ್ಯಕ್ಷ ನಾರಾಯಣ ಹೂಲಿ, ಹಿರಿಯರಾದ ಈರಪ್ಪಜ್ಜ ಕೊಣ್ಣೂರ, ಎಸ್.ಎಂ. ಮುರುಡಿ, ಏಕನಾಥ ಕೊಣ್ಣೂರ, ಪಿ.ಆರ್. ಸೂಳಿಭಾವಿ, ಐ.ಜಿ. ರಾಮದುರ್ಗ, ವಿಷ್ಣು ಸೂಳಿಭಾವಿ, ವಿನೋದ ಕರದಿನ, ಈರಣ್ಣ ನಂದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.



