Friday, December 12, 2025
19.4 C
Belagavi

ಅತಿಥಿ ಉಪನ್ಯಾಸಕರ ನೈಜತೆ ವರದಿಗೆ ಕಾಲೇಜು ಶಿಕ್ಷಣ ಇಲಾಖೆಯೇ ಹಣವನ್ನು ಭರಿಸಬೇಕು-ಡಾ.ರಾಜು ಕಂಬಾರ

advertisement

spot_img

ರಾಮದುರ್ಗ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2025 -26 ನೇ ಸಾಲಿನಲ್ಲಿ ಆಯ್ಕೆಗೊಂಡ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿಗೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತಾಲಯವೇ ಹಣವನ್ನು ಭರಿಸಬೇಕೆಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರಾಜು ಕಂಬಾರ ತಿಳಿಸಿದ್ದಾರೆ.

ರಾಮದುರ್ಗ ಪಟ್ಟಣದ ಶ್ರೀಮತಿ ಈರಮ್ಮ ಶಿ. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿಗೆ ಆಯುಕ್ತಾಲಯವೇ ಹಣವನ್ನು ಭರಿಸಬೇಕೆಂದು ಮಾನ್ಯ ಪ್ರಾಚಾರ್ಯ ಡಾ. ಎಂ ಡಿ ಕಮತಗಿ ಅವರ ಮೂಲಕ ಬೆಂಗಳೂರಿನ ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದ ಕಂಬಾರರು, 2025- 26ನೇ ಶೈಕ್ಷಣಿಕ ವರ್ಷಕ್ಕೆ ಆಯ್ಕೆಯಾದ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ತರಿಸಿಕೊಳ್ಳಲು ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಚಾರ್ಯರಿಗೆ ಆಯುಕ್ತರು ತಿಳಿಸಿದ್ದು, ಆಯುಕ್ತರ ಆದೇಶದಂತೆ ಎಲ್ಲಾ ಕಾಲೇಜುಗಳ ಪ್ರಾಚಾರ್ಯರು ಅತಿಥಿ ಉಪನ್ಯಾಸಕರ ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ನಮ್ಮಿಂದಲೇ ಹಣವನ್ನು ಭರಿಸಬೇಕೆಂದು ಹೇಳುತ್ತಿದ್ದಾರೆ.

ಕಳೆದ 2-3 ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಉದ್ಯೋಗವಿಲ್ಲದೆ ಜೀವನವನ್ನು ನಿರ್ವಹಿಸುವುದೇ ಕಷ್ಟವಾಗಿದೆ.

ತಂದೆ -ತಾಯಿಗಳ ಪಾಲನೆಯೊಂದಿಗೆ, ಮಕ್ಕಳಿಗೆ ಶಿಕ್ಷಣ ಕಲಿಸುವುದು ತುಂಬಾ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಮಾಣ ಪತ್ರಗಳ ನೈಜತೆ ವರದಿಗೆ ವಿಶ್ವವಿದ್ಯಾಲಯಗಳಿಗೆ ಹಣವನ್ನು ಭರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಪ್ರಮಾಣ ಪತ್ರಗಳ ನೈಜತೆ ವರದಿಗೆ ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆಯೇ ಶುಲ್ಕವನ್ನು ಭರಿಸಬೇಕೆಂದು ಒತ್ತಾಯಿಸಿದ ಅವರು, ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳ ನೈಜತೆ ವರದಿ ವಿಳಂಬವಾಗಿದೆ ಎಂಬ ಕಾರಣವೊಡ್ಡಿ ನಮ್ಮ ಅಕ್ಟೋಬರ್ ತಿಂಗಳ ಗೌರವದನವನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ಮೊದಲೇ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಒಂದು ವೇಳೆ ನಮ್ಮ ಗೌರವಧನ ತಡೆ ಹಿಡಿದರೆ, ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ತಮ್ಮ ಅವಗಾಹಣೆಗೆ ತರುತ್ತಾ, ನೈಜತೆ ವರದಿಗೆ ತಾವೇ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರ ಹಣವನ್ನು ಭರಿಸಬೇಕೆಂದು ಹೇಳಿದರು.

Hot this week

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸರ್ಕಾರದ ವಿರುದ್ಧ ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕು.ನಾಡಿನ ರೈತರ ಸಮಸ್ಯೆಗಳು,...

ಸಿ ಟಿ ರವಿ|ಮೆಕ್ಕೆಜೋಳ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ

ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ಹೋರಾಟ ಮಾಡಿದ್ದೇವೆ ಈ ಅಧಿವೇಶನದಲ್ಲಿ...

ಸಚಿವ ಸಂತೋಷ್ ಲಾಡ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಗೌರವಿಸುತ್ತೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ...

ಆರೋಗ್ಯ ಸಚಿವ ದಿನೇಶ್ ಗುಂಡುರಾವ್

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ಹೇಳಿಕೆ ಸಮಸ್ಯೆಗಳು ಯಾವಾಗಲು...

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್   https://youtu.be/Yy8EZZFHGjs

Topics

ಸದನದಲ್ಲಿ ಸರ್ಕಾರಕ್ಕೆ ಎದುರಾಗುವ ಪ್ರಮುಖ ವಿಚಾರಗಳು

ಇಂದಿನಿಂದ ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ ಒಟ್ಟು 10 ದಿನಗಳ ಕಾಲ ನಡೆಯಲಿರುವ...

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ|ಸಿಎಂ ಸಿದ್ದರಾಮಯ್ಯ

ಕೆಂಗಲ್ ಹನುಮಂತಯ್ಯ ಪುಣ್ಯ ತಿಥಿ ಸರ್ಕಾರ ಪ್ರತಿ ಆಚರಣೆ ಮಾಡುತ್ತದೆ ಹನುಮಂತಯ್ಯ ಒಬ್ಬ ದಕ್ಷ...

ಪಂಚಭೂತಗಳಲ್ಲಿ ಲೀನವಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ.

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು. ಒಂದೇ ಕಡೆ ನಾಲ್ಕು ಜನರ...
spot_img

Related Articles

Popular Categories

spot_img