ನಾನು ಒಳ್ಳೆಯ ಕೆಲಸ ಮಾಡಿದನ್ನು ನನ್ನ ಕ್ಷೇತ್ರದ ಜನ ಗುರುತಿಸಿದ್ದಾರೆ, ಅವರುಗಳ ಆರ್ಶಿವಾದ ಇರುವವರೆಗೆ ಯಾರಿಗೂ ಹೆದರುವ ಪ್ರೇಶ್ನೆಯೇ ಇಲ್ಲ, ಯಾರೇ, ಎಂತಹ ವಿರೋಧಿಗಳನ್ನು ಎದುರಿಸುವ ಶಕ್ತಿಯನ್ನು ಮತದಾರರು ನನಗೆ ನೀಡಿದ್ದಾರೆ.

ಅದ್ಯಾತ್ಮದ ತವರೂರು,ಶ್ರೀ ಮುರಘೇಂದ್ರ ಶಿವಯೋಗಿಗಳು ನಡೆದಾಡಿದ ಪುಣ್ಯ ಕ್ಷೇತ್ರ ಅಥಣಿ ಇಂತಹ ಸಾಂಸ್ಕೃತಿಕ ಸಂಸ್ಕಾರಯುತ ಕುಟುಂಬದಲ್ಲಿ ಜನಸಿದ ನನಗೆ ಹುಟ್ಟಿನಿಂದಲೇ ಸಂಸ್ಕಾರಯುತ ಬದುಕಿನ ಕುರಿತು ನಮ್ಮ ತಂದೆತಾಯಿಗಳು ನಮಗೆ ಕಲಿಸಿದ್ದಾರೆ. ನಾನು ರಾಜಕೀಯದಲ್ಲಿ ಇದುವರೆಗೆ ಧರ್ಮದಿಂದ ನಡೆದು ಕೊಂಡು ಬಂದಿದ್ದೇನೆ ಸಹಕಾರ ರಂಗದ ಹೋರಾಟದ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದವನು ನಾನು ಹೀಗಾಗಿ ನನ್ನ ಜನರಿಗೆ ಸ್ಪಂದಿಸುವ ಗುಣ ಕರಗತವಾಗಿದ್ದು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಜನ ಕಲಿಸಿದ್ದಾರೆ. ಅದೇ ತೆರನಾಗಿ ಜೀವನೂದ್ದಕ್ಕೂ ನಡೆದು ಕೊಳ್ಳುತ್ತಿರುವೆ, ಕಳೆದ ೩೦ ವರ್ಷಗಳಿಂದ ಮತದಾರರ ಸೇವೆಯನ್ನು ಮಾಡಿರುವ ತೃಪ್ತಿ ಸಮಾಧಾನ ತಂದಿದೆ.

ಡಾ.ಭೀಮರಾವ್ ಅಂಬೇಡ್ಕರ್ ಅವರ ದೂರಗಾಮಿ ಪರಿಕಲ್ಪನೆಯನ್ನು ಸಕಾರಗೊಳಿಸಲು ಜನತೆಗೆ ನನ್ನ ಅಳಿಲು ಸೇವೆಗೈಯಲು ಸದಾ ಸಿದ್ದನಿರುವೆ. ಎಂಬ ಭರವಸೆ ನನ್ನದು “ಆಧಿಕಾರ,ಅಂತಸ್ತು, ಮತ್ತು ಆಯುಷ್ಯ ಯಾರಿಗೂ ಶಾಶ್ವತವಲ್ಲ ಅಧಿಕಾರ ಇದ್ದಾಗ ನಾವು ಮಾಡಿದ ಜನೋಪಕಾರಿ ಕಾರ್ಯಗಳು ಶಾಶ್ವತವಾಗಿ ಉಳಿದುಕೊಳ್ಳುತ್ತವೆ,
ನಾನು ಬಯಸಿದರೂ ಸರಿ, ಬಯಸದಿದ್ದರೂ ಸರಿ ದುಡಿಮೆಗೆ ಪ್ರತಿಫಲವನ್ನು ನನ್ನ ಜನರು ಅವರುಗಳ ಆರ್ಶಿವಾದದ ಮೂಲಕ ಹಾರೈಯುಸುತ್ತಾರೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ.
ಎಲ್ಲರಿಗೂ ಬೆಳಕಿನಲ್ಲಿ ಹಬ್ಬ ದೀಪಾವಳಿಯ ಶುಭಾಶಯಗಳು
ಮಾಜಿ ಉಪಮುಖ್ಯಮಂತ್ರಿಗಳು, ಶಾಸಕರು ಲಕ್ಷ್ಮಣ ಸವದಿ. ಅಥಣಿ



