ಹಿನ್ನಲೆಯಲ್ಲಿ ಇಂದು ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಹಿನ್ನಲೆಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.ರಾಮದುರ್ಗದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶಾಸಕ ಅಶೋಕ ಪಟ್ಟಣ ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸಧ್ಯ ಕಣದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಹಾಗೂ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ಶ್ರೀಕಾಂತ ಢವಣ ಇದ್ದಾರೆ.
ಸಧ್ಯ ನಾಮಪತ್ರ ವಾಪಸ್ ಪಡೆದಿರುವ ಶಾಸಕ ಅಶೋಕ್ ಪಟ್ಟಣ ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಕುತೂಹಲ ಮೂಡಿದೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು. ವೈಯಕ್ತಿಕ ಕಾರಣದಿಂದ ನಾಮಪತ್ರ ವಾಪಸ್ ಪಡೆದಿರುವೆ. ನನ್ನ ಬೆಂಬಲ ಯಾರಿಗೆ ಎಂಬುದನ್ನು ಮುಂದೆ ಸ್ಪಷ್ಟಪಡಿಸುವೆ ಎಂದರು.
ನಾಮಪತ್ರ ವಾಪಸ್ ಪಡೆಯಲು ಯಾರ ಒತ್ತಡವೂ ಇಲ್ಲ. ಸ್ವಯಂ ನಿರ್ಧಾರದಿಂದ ವಾಪಸ್ ಪಡೆದಿರುವೆ. ನಾನು ಯಾರ ಬಣವೂ ಅಲ್ಲ. ಸಂಪುಟ ವಿಸ್ತರಣೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದರು.