ನವರಾತ್ರಿ ಅಂಗವಾಗಿ ಎಕ್ಷಂಬಾ ಪಟ್ಟಣದಲ್ಲಿ ನಡೆದ ದುರ್ಗಾ ದೌಡ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಯಡೂರು ವೇದ ಪಾಠಶಾಲೆಯ ಶ್ರೀಶೈಲ ಗುರೂಜಿಯವರು ಮಾತನಾಡಿ, ನಾವು ಭಾರತೀಯರು ನಮ್ಮ ರಕ್ತದ ಕಣ-ಕಣದಲ್ಲಿ ಹಿಂದುತ್ವ ತುಂಬಿರಬೇಕು ನಮ್ಮ ಮಕ್ಕಳ ಶಿಕ್ಷಣದ ಜೊತೆಗೆ ಹಿಂದುತ್ವದ ಸಂಸ್ಕಾರ ತುಂಬಬೇಕು ,ವರ್ತಮಾನದಲ್ಲಿ ಲವ್ ಜಿಹಾದ್ ಗೆ ಒಳಗಾಗುತ್ತಿರುವ ಬಾಲಕಿಯರು ತುಂಬಾ ಜಾಗೃತೆಯಿಂದ ಇರಬೇಕು. ಭಾರತವನ್ನು ಒಡೆದು ಆಳುವ ಅನೇಕ ದುಷ್ಟರ ಒಳ ಪ್ರಯತ್ನ ನಡೆಯುತ್ತಿದೆ, ನಾವು ಜಾತಿ ಜಾತಿ ಎಂದು ಬಡೆದಾಡಿ ನಮ್ಮ ಧರ್ಮವನ್ನು ಮರೆತು ಜಾತಿಯ ಹೊಡೆದಾಟದಲ್ಲಿ ನಾವು ನಮ್ಮನ್ನು ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತಿದ್ದೇವೆ.
ಒಂದು ಕ್ಷಣ ನಾವೆಲ್ಲರೂ ನಮ್ಮ ನಮ್ಮ ಜಾತಿಗಳನ್ನ ಪಕ್ಕಕ್ಕಿಟ್ಟು ನಾವೆಲ್ಲರೂ ಹಿಂದೂ ಧರ್ಮದವರು ಎಂಬ ಭಾವನೆಯೊಂದಿಗೆ ಮುನ್ನಡೆಯಬೇಕಾಗಿದೆ. ನಮ್ಮ ಮಕ್ಕಳಲ್ಲಿ ಜಾತಿಯ ಬೀಜವನ್ನು ಬಿತ್ತದೆ ಕೇವಲ ಹಿಂದೂ ಧರ್ಮದ ಭಾವನೆಯ ಬೀಜವನ್ನು ಬಿತ್ತಿದರೆ ಮಾತ್ರ ನಮ್ಮ ಹಿಂದೂ ಸಮಾಜ ಉಳಿಯಲಿಕ್ಕೆ ಸಾಧ್ಯ. ನಾವೆಲ್ಲರೂ ನಮ್ಮ ಯುವ ಪೀಳಿಗೆಗೆ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸೋಣ. ಯಾರಾದರೂ ನೀವು ಯಾರು ಎಂದರೆ ನಾವು ಹೆಮ್ಮೆಯಿಂದ ನಾನು ಒಬ್ಬ ಹಿಂದೂ ಎಂದು ಹೇಳಿಕೊಳ್ಳೋಣ.
Trending Now
