ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದಲ್ಲಿ ಹೆರಿಗೆ ಆಗಿ ೧೧ ರಿಂದ ೧೨ ದಿವಸದ ಹಸುಗುಸನ್ನು ಜೋತೆಯಾಗಿ ಇಟ್ಟುಕೊಂಡು ಬಾಣಂತಿಯೊಬ್ಬಳು ಗೋಡೆ ಖುಷಿದ ಬಿದ್ದ ಮನೆಯಲ್ಲಿ ವಾಸವಿದ್ದಿರುವ ಘಟನೆ ಕಲಹಾಳ ಗ್ರಾಮದಲ್ಲಿ ಕಂಟು ಬಂದಿದೆ.ಇದೇ ಕಲಹಾಳ ಗ್ರಾಮದಲ್ಲಿ ದೊಡ್ಡಪ್ಪ ಮುಷಪ್ಪ ಮಾದರ ಎಂಬುವರ ಮನೆಯನ್ನು ಬಾಡಗಿಗಡ ತೆಗೆದುಕೊಂಡು ವಾಸಿಸುತ್ತಿದ್ದಾರೆ.ಸತತವಾಗಿ ಸುರಿದ ಮಳೆಯಿಂದ ಮನೆಯ ಗೋಡೆಗಳು ಖುಷಿದು ಬಿದ್ದಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದರು, ಸಹ ಯಾವಬ್ಬ ಅಧಿಕಾರಿಗಳು ಸಂಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಲಹಾಳ, ಚಿಕ್ಕೋಪ್ಪ ಎಸ್ ಕೆ ಗ್ರಾಮಗಳತ್ತ ತಲೆ ಎತ್ತಿ ನೋಡು ತ್ತಿಲ್ಲ ಎಂದು ಗ್ರಾಮಸ್ಥರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.ನಾವು ೧೧ ದಿನದ ಬಾಣಂತಿಯನ್ನು ಕಟ್ಟಿಕೊಂಡು ಬಿದ್ದ ಮನೆಯಲ್ಲಿಯೇ ವಾಸಿಸುವ ಪರಿಸ್ಥಿತಿ ಬಂದೊದಗಿದೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಗುರುವಾರ, ಶುಕ್ರವಾರ ಮತ್ತು ಶನಿವಾರ ನಿರಂತರ ಸುರಿದ ಮಳೆಗೆ ಕಲಹಾಳ ಗ್ರಾಮದ ದೊಡ್ಡಪ್ಪ ಮುಷಪ್ಪ ಮಾದರ, ಯಂಕಪ್ಪ ಬಾಲಪ್ಪ ಡೊಂಬರಳ್ಳಿ ಹಾಗೂ ಚಿಕ್ಕೋಪ್ಪ ಎಸ್ ಕೆ ಗ್ರಾಮದ ಕಲ್ಲಪ್ಪ ಕಳಸದ, ಸೋಮಪ್ಪ ಕಳಸದ, ಶಿವಪ್ಪ ಕಳಸದ, ಕಲ್ಲಪ್ಪ ಶಿವರಾಯಪ್ಪ ಕಳಸದ ಎಂಬುವವರಿಗೆ ಸೇರಿದ್ದ ಮನೆಗಳು ಭಾಗಶಃ ಬಿದ್ದಿವೆ.ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಇಂಜನಿಯರ ಸೇರಿಕೊಂಡು ನಾಳೆಯೇ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಸಂಗಳ ಗ್ರಾಮ ಪಂಚಾಯತಿಯ ಪಿಡಿಒ ಐ.ಎಸ್.ಅಗಸರ ಹೇಳುತ್ತಿದ್ದಾರೆ.
ಇನ್ನೂ ಮುಂದಾದರು ಸಂಭಂದಿಸಿದ ಅಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಗಳತ್ತ ಗಮನ ಹರಿಸುವರೆ ಎಂದು ಕಾದು ನೋಡಬೇಕಿದೆ.