ರಾಮದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ಭಾರತೀಯ ಮಜದೂರು ಸಂಘದ ಕಚೇರಿ ಹತ್ತಿರ ಇಂದು ಭಾರತೀಯ ಮಜದೂರ್ ಸಂಘದ 70ನೇ ವರ್ಷದ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ಮತ್ತು ವಿಶ್ವ ಕಾರ್ಮಿಕರ ಜಯಂತಿಯನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ನೂರಾರು ಕಾರ್ಮಿಕರು ಮೆರವಣಿಗೆ ಮಾಡಿದರು ತದನಂತರ ಸಂಘದ ಕಚೇರಿ ಪಕ್ಕದಲ್ಲಿ ಅಭೂತಪೂರ್ವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು .ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಳ್ಳೂರು ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು . ಉದ್ಘಾಟಕರಾಗಿ ರಾಮದುರ್ಗ ತಾಲೂಕ ಕಾರ್ಮಿಕ ನಿರೀಕ್ಷಕರಾದ ನಾಗರಾಜ್ ಮದುರ್ ಆಗಮಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಮಜದೂರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಪ್ರಶಾಂತ H ಕಲಾದಗಿ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಅಸಂಘಟಿತ ಕಾರ್ಮಿಕರ ಬೆಳಗಾವಿ ಜಿಲ್ಲೆ ಗೌರವಾಧ್ಯಕ್ಷ ಚಿದಾನಂದ ದೊಡ್ಡಮನಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಜಗದೀಶ ದೇವರೆಡ್ಡಿ ಪುರಸಭೆ ಸದಸ್ಯ ರಾಜೇಶ್ವರಿ ಮೆಟಗುಡ್ ಗಣ್ಯ ವ್ಯಾಪಾರಸ್ಥರಾದ ವಿಟ್ಟಲ್ ಕಂಬಾರ್ ಸಮಾಜ ಸೇವಕರಾದ ನಿಂಗಪ್ಪ ಕರಿಗಾರ ಹಿರಿಯ ಕಾರ್ಮಿಕ ಮುಖಂಡರಾದ ಭೀಮ್ಸಿ ಸಿಂಧೆ ಆಗಮಿಸಿದ್ದರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ವಾರ್ತೆಪ್ ನವರ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು ಕಾರ್ಮಿಕ ಮುಖಂಡ ಶಂಕರ್ ಬಣಪ್ಪನವರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Trending Now
