ಬೈಲಹೊಂಗಲ ತಾಲೂಕಿನ ಮೆಕಲಮರಡಿ ಗ್ರಾಮದ ಶ್ರೀ ದಸ್ತಗೀರ ಜಮಾದಾರ ಅವರ ಕೈಮಗ್ಗ ಕೇಂದ್ರಕ್ಕೆ ಭೇಟಿ ನೀಡಿ,ಕೈಮಗ್ಗ ತಯಾರಿಸಿದ ಕರಕುಶಲ ಮತ್ತು ಗ್ರಹಪಯೋಗಿ ವಸ್ತುಗಳನ್ನು ವೀಕ್ಷಿಸಿ,ಅವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.ಆಧುನಿಕ ಶೈಲಿಯ ಭರಾಟೆಯ ನಡುವೆಯೂ ಕೈಮಗ್ಗ ಮೂಲಕ ನೂಲು ನೇಯ್ದು ದಿನಾಲು ಉಪಯೋಗಿಸುವ ವಸ್ತುಗಳನ್ನು ಸಿದ್ಧಪಡಿಸಿ, ಮಾರುಕಟ್ಟೆಯಲ್ಲಿ ಜನರ ಅಭಿರುಚಿಗೆ ತಕ್ಕಂತೆ ಮಾರಾಟ ಮಾಡುತ್ತಿರುವ ದಸ್ತಗೀರ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.
ಈ ಸಂದರ್ಭದಲ್ಲಿ ಕೈ ಮಗ್ಗ & ಜವಳಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಜಯಚಂದ್ರ ಪಾಟೀಲ,ಇಲಾಖೆಯ ಅಧಿಕಾರಿಗಳಾದ ಶ್ರೀ ಸಿದ್ದು ಕುಂಬಾರ,ಶ್ರೀ ಮಹಾಂತೇಶ ಮುಂತಾದವರು ಉಪಸ್ಥಿತರಿದ್ದರು.
Trending Now
