ಕಾಂಗ್ರೆಸ್ ಸರ್ಕಾರ ಈಗ ಮೈಸೂರಿನ ಚಾಮುಂಡಿ ತಾಯಿ ಭಕ್ತರ ಮೇಲೂ ದೌರ್ಜನ್ಯ ಎಸಗುತ್ತಿದೆ.! ಮಂದಿರಕ್ಕೆ ತೆರಳುವ ಭಕ್ತಾದಿಗಳನ್ನು ದರ್ಪದಿಂದ ತಡೆಯುವ ಮೂಲಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಿತ್ತುಕೊಂಡಿದೆ.!
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲವೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಚಾಮುಂಡಿ ದೇವಸ್ಥಾನಕ್ಕೆ ತೆರಳುವ ಹಿಂದೂ ಭಕ್ತರ ಮೇಲೆ ಪೊಲೀಸರನ್ನು ಛೂಬಿಟ್ಟು ತಡೆಯಲು ಯತ್ನಿಸುತ್ತಿರುವುದು ಓಲೈಕೆ ಪಿತಾಮಹ ಸಿದ್ದರಾಮಯ್ಯನವರು ಬಹುಸಂಖ್ಯಾತ ಹಿಂದೂಗಳಿಗೆ ಬಗೆಯುತ್ತಿರುವ ದ್ರೋಹ ಮತ್ತು ಸಂವಿಧಾನಕ್ಕೆ ಎಸಗಿದ ಅಪಚಾರ.
ಹಗಲಿರುಳು ಅಲ್ಪರ ಓಲೈಕೆ ಮಾಡುವುದರಲ್ಲಿಯೇ ಕಾಲ ಕಳೆಯುವ ಸ್ವಾಮಿ ಸಿದ್ದರಾಮಯ್ಯನವರೇ, ಕೂಡಲೇ ಸುಗಮವಾಗಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ತೆರಳುವುದಕ್ಕೆ ಕ್ರಮ ವಹಿಸಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಿ.