ಬೆಳಗಾವಿ: ‘ಬೆಂಗಳೂರಿನ ಗಾಯತ್ರಿ ವಿಹಾರದ ಅರಮನೆ ಮೈದಾನದಲ್ಲಿ
ಸೆ.24ರಂದು ಬೆಳಿಗ್ಗೆ 10ಕ್ಕೆ
ಕರ್ನಾಟಕ ರೆಡ್ಡಿ ಜನಸಂಘದ ಶತಮಾನೋತ್ಸವ ಸಮಾರಂಭ
ನಡೆಯಲಿದೆ’ ಎಂದು ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ತಿಳಿಸಿದರು.ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಇರುವ ಕರ್ನಾಟಕ ರೆಡ್ಡಿ ಜನ ಸಂಘ 100ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೆಡ್ಡಿ ಸಮಾಜದ ಶ್ರೀಗಳು, ಮುಖಂಡರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.ಕರ್ನಾಟಕದಲ್ಲಿ ರೆಡ್ಡಿ ಸಮುದಾಯದ ಜನಸಂಖ್ಯೆ 35 ಲಕ್ಷಕ್ಕೂ ಹೆಚ್ಚಿದೆ. ಆದರೆ, ಕಾಂತರಾಜು ವರದಿಯು 7 ಲಕ್ಷ ಜನಸಂಖ್ಯೆ ಎಂದು ತಿಳಿಸಿದೆ. ಇದರಿಂದಾಗಿ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ಹಾಗಾಗಿ ಸೆ. 22ರಿಂದ ನಡೆಯಲಿರುವ ಸಮೀಕ್ಷೆಯಲ್ಲಿ ರೆಡ್ಡಿ ಸಮುದಾಯದವರು ಉಪ ಪಂಗಡ ಬರೆಸದೆ, ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿ ಕಾಲಂನಲ್ಲಿ ರೆಡ್ಡಿ ಎಂದಷ್ಟೇ ಬರೆಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಐದಾರು ಪಂಗಡಗಳಲ್ಲಿ ರೆಡ್ಡಿ ಸಮುದಾಯ ಹಂಚಿಹೋಗಿದೆ. ಇದರಿಂದ ಕಡಿಮೆ ಜನಸಂಖ್ಯೆ ಎಂದು ತೋರಿಸಲಾಗುತ್ತಿದೆ. ಇದನ್ನು ತಪ್ಪಿಸಲು ಹಿಂದೂ ರೆಡ್ಡಿ ಎಂದೇ ಬರೆಯಿಸಲು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ವಿವರಿಸಿದರು.
ಶತಮಾನೋತ್ಸವ ಕಾರ್ಯಕ್ರಮದ ತಿಳಿಸಲು ರಾಜ್ಯದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದರು.ಶ್ರೀ ವೇಮನಾನಂದ ಸ್ವಾಮೀಜಿ ರೆಡ್ಡಿ ಗುರುಪೀಠ ಎರೆ ಹೊಸಳ್ಳಿ
ಶ್ರೀ ಲಕ್ಷ್ಮಣ್ ರೆಡ್ಡಿ ಉಪಾಧ್ಯಕ್ಷರು ಕರ್ನಾಟಕ ರೆಡ್ಡಿ ಜನಸಂಘ ಬೆಂಗಳೂರು
ಶ್ರೀ ಕೃಷ್ಣ ರೆಡ್ಡಿ ನಿರ್ದೇಶಕರು ಜನ ಸಂಘ ಬೆಂಗಳೂರು
ಶ್ರೀ ಬಾಬುರೆಡ್ಡಿ ಭೈರತಿ
ಪ್ರಭಾಕರ್ ರೆಡ್ಡಿ
ಶಾಂತ ರೆಡ್ಡಿ
ರಾಜು ರೆಡ್ಡಿ
ಐನಾಥ ರೆಡ್ಡಿ ಬಳ್ಳಾರಿ
ಅಚ್ಯುತಾನ ರೆಡ್ಡಿ
ಕಾಂತು ಜಾಲಿ ಬೇರಿ
ಉಪಾಧ್ಯಕ್ಷರು ಬೆಳಗಾವಿ ರೆಡ್ಡಿ ಸಂಘ ಬೆಳಗಾವಿ ಮಂಜುನಾಥ್ ಪಾಟೀಲ್ ನಾರಾಯಣ ಕೆಂಚರೆಡ್ಡಿ ಮತ್ತು
ಎಲ್ಲ ತಾಲೂಕು ಅಧ್ಯಕ್ಷರು ಬೆಳಗಾವಿ ಜಿಲ್ಲೆಯ ರೆಡ್ಡಿ ಸಂಘ
ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಬೆಳಗಾವಿ ರೆಡ್ಡಿ ಸಂಘ ಬೆಳಗಾವಿ ಮತ್ತು ಬಾಲಾಜಿ ದೇವಸ್ಥಾನ ಕಮಿಟಿ ಸದಸ್ಯರು ಹಾಗೂ ಬೆಳಗಾವಿ ರೆಡ್ಡಿ ಸಮಾಜದ ಪ್ರಮುಖರು ಭಾಗಿಯಾಗಿದ್ದರು
Trending Now
