ಜಿಲ್ಲಾ ಪಂಚಾಯತ ಧಾರವಾಡ, ಶಾಲಾ ಶಿಕ್ಷಣ ಇಲಾಖೆ ಧಾರವಾಡ, ತಾಲೂಕ ಪಂಚಾಯತ ಹುಬ್ಬಳ್ಳಿ, ಶಿಕ್ಷಕ ದಿನೋತ್ಸವ ಸಮಿತಿ ಹುಬ್ಬಳ್ಳಿ ಗ್ರಾಮೀಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹುಬ್ಬಳ್ಳಿ ಗ್ರಾಮೀಣ ಇವರ ಸಂಯುಕ್ತಾಶ್ರಯದಲ್ಲಿ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಹುಬ್ಬಳ್ಳಿ ನಗರದ ಎಸ್.ಎಸ್.ಕೆ ತುಳಜಾ ಭವಾನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಶಿಕ್ಷಕರ ದಿನೋತ್ಸವ – 2025 ರಲ್ಲಿ ಮಾನ್ಯ ಹುಬ್ಬಳ್ಳಿ ಪೂರ್ವ ಶಾಸಕರಾದ ಶ್ರೀ Mla Prasad Abbayya ಅವರೊಂದಿಗೆ ಭಾಗವಹಿಸಿ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಗೌರವ ಅರ್ಪಿಸಲಾಯಿತು.
ನಂತರ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಗಳನ್ನು ಹಾಗೂ ಅಂಗವಿಕರ ವಿದ್ಯಾರ್ಥಿಗಳಿಗೆ ಕಿಟಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ರಾಜಣ್ಣ ಕೊರವಿ, ಡಿಡಿಪಿಐ ಶ್ರೀ ಕೆಳದಿಮಠ, ಬಿಇಒ ಶ್ರೀ ಉಮೇಶ ಬಮ್ಮಕ್ಕನವರ, ಹುಬ್ಬಳ್ಳಿ ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಶ್ರೀ ಶಿವಾನಂದ ಭೂಮಣ್ಣವರ, ವಾಯ್.ಹೆಚ್.ಬಣವಿ, ವಿ.ಎಪ್.ಚುಳಕಿ,
ಸೇರಿದಂತೆ ಮುಂತಾದ ಶಾಲಾ ಶಿಕ್ಷಕ – ಶಿಕ್ಷಕಿಯರು ಉಪಸ್ಥಿತರಿದ್ದರು.