ಶ್ರೀ ಶಂಕರ್ ಬೊಳನ್ನವರ ಅವರಿಗೆ” ವಿಜಯ ರತ್ನ” ಇಂಟರ್ನ್ಯಾಷನಲ್ ಪ್ರಶಸ್ತಿ ಗೌರವ.
ಕರ್ನಾಟಕ ರಾಜ್ಯ ನೇಗಿಲ ಯೋಗಿ ರೈತ ಸೇವಾ ಸಂಘದ ಬೆಂಗಳೂರು. ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಂಕರ ಬೊಳನ್ನವರ ಅವರು ರಾಜ್ಯ ರೈತರಿಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಇತ್ತೀಚಿಗೆ ದಿನಾಂಕ 20-8-2025ರಂದು ವಿಜಯವಾಣಿ ಕನ್ನಡಿಗರ ಧ್ವನಿ ವಿಜಯ ರತ್ನ ಅಂತರಾಷ್ಟ್ರೀಯ 2025 ಪ್ರಶಸ್ತಿಯನ್ನು ಮಲೇಶಿಯಾದಲ್ಲಿ ವಿಜಯವಾಣಿ ಪತ್ರಿಕೆಯ ವಿ ಆರ್ ಎಲ್ ಸಂಸ್ಥೆಯ ಎಂ ಡಿ ಆನಂದ್ ಸಂಕೇಶ್ವರ್ , ಮಲೇಶಿಯಾ ದಲ್ಲಿನ ಭಾರತದ ರಾಯಭಾರಿ ಡಾಕ್ಟರ್ ಬಿ ಎನ್ ರೆಡ್ಡಿ ಅವರು ವಿಜಯ ರತ್ನ ಇಂಟರ್ನ್ಯಾಷನಲ್ ಅವಾರ್ಡ್ ಪ್ರಶಸ್ತಿಯನ್ನು ಬೊಳಣವರ ಅವರಿಗೆ ನಿಡಿ ಗೌರವಿಸಿದ್ದಾರೆ.
ಶ್ರೀ ಬೋಳನ್ನವರ್ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಬಂದದ್ದಕ್ಕೆ ಅವರಿಗೆ ದಿನಾಂಕ 25.8.2025 ರಂದು ಬೆಳಗಾವಿಯ ಖಾಸಬಾಗದ ಸಾಯಿ ರಾಮ ದೇವಸ್ಥಾನದಲ್ಲಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ಪರವಾಗಿ ಅಧ್ಯಕ್ಷರಾದ ಶ್ರೀ ಮಹೇಶ ವೆಣೇಕರ್ ಹಾಗೂ ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಕೃಷ್ಣರಾಜೇಂದ್ರ ತಾಳೂಕರ ರವರು ಶ್ರೀ ಬೋಳನ್ನವರ್ ಅವರನ್ನು ಸನ್ಮಾನಿಸಿ ಗೌರವಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ , ಪ್ರಕಾಶ್ ರೇವನಕರ ,ನಿಲಕಂಠ ಶೇಟ್ಟಿ, ವಿನಾಯಕ ರಾಯ್ಕರ್,ಶ್ರೀಶೈಲ ಮದಲಿ,ಸುತಾರ,ನೇಗಿಲ ಯೋಗಿ ರೈತ ಸೇವಾ ಸಂಘದ ಸದಸ್ಯರಾದ ಶ್ರೀ ರಮೇಶ ಯರಗಟ್ಟಿ ಯವರು. ಶ್ರೀ ಪಾಟಿಲ್, ಸೋಮಲಿಂಗಪ್ಪ ಮೆಳ್ಳಿಕೇರಿ, ಶಶಿಕಾಂತ ತಳವಾರ, ಮನೋಹರ ಸುಳೆಭಾವಿಕರ,ಹಾಗೂ ಸದಸ್ಯರು ಬೊಳನ್ನರ ಅವರಿಗೆ ಸನ್ಮಾನಿಸಿ ಗೌರವಿಸಿದರು.
ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಪಾಟೀಲ್ ಅವರು ಶ್ರೀ ಬೊಳನ್ನವರ ಅವರನ್ನು ಗೌರವಿಸಿ ಅವರ ಸೇವೆಯ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು