ಬೆಂಗಳೂರು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಮತಾಧಿಕಾರ ಯಾತ್ರೆಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಶಾಸಕರ ತಂಡ ಬಿಹಾರಕ್ಕೆ ಹಾರಿದೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಟ್ಟದ ಸಭೆ, ಸಮಾರಂಭ ಹಾಗೂ ಪ್ರತಿಭಟನೆಯಲ್ಲಿ ರಾಜ್ಯದ ಕೈ ನಾಯಕರು ಭಾಗವಹಿಸುತ್ತಿರುವುದು ಹೆಚ್ಚಾಗುತ್ತಿದೆ.
ಅದರಂತೆ ಕಾಂಗ್ರೆಸ್ ಹೈಕಮಾಂಡ್ ಗೆ ನಿಷ್ಠ ನಾಯಕ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ವಿಮಾನ ಏರಿದ ಹತ್ತು ಶಾಸಕರ ಪಟ್ಟಿ ಇಲ್ಲಿದೆ ನೋಡಿ..
1. ಶ್ರೀನಿವಾಸ್ ಮಾನೆ
2. ಬಾಬಾ ಸಾಬ್ ಪಾಟೀಲ್
3. ರಾಜು ಸೇಠ್
4. ರಿಜ್ವಾನ್ ಅರ್ಷದ್
5. ಬಿ.ಎಂ. ನಾಗರಾಜ್
6. ವೇಣುಗೋಪಾಲ್ ನಾಯಕ್
7. ನಯನ ಮೋಟಮ್ಮ
8. ಅಶೋಕ್ ಪಟ್ಟಣ್
9. ಆನಂದ್
10. ಎನ್.ಟಿ. ಶ್ರೀನಿವಾಸ್
ಪ್ರಮುಖವಾಗಿ ರಾಜ್ಯದ ಕಾಂಗ್ರೆಸ್ ನಾಯಕರು ಬೆಂಗಳೂರಿನಿಂದ ಬಿಹಾರಕ್ಕೆ ವಿಮಾನ ಪ್ರಯಾಣ ನಡೆಸಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಒಂದು ಕಡೆ ರಾಜ್ಯದ ಪ್ರತಿನಿಧಿತ್ವವಾದರೆ ಇನ್ನೊಂದೆಡೆ ಪಕ್ಷ ನಿಷ್ಠೆಯ ಸಂಕೇತವೂ ಆಗಿರುವುದು ಗಮನಾರ್ಹವಾಗಿದೆ.