ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಆಧುನಿಕ ಭಾರತದ ನಿರ್ಮಾತೃ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜಯಂತಿಯ ಅಂಗವಾಗಿ ಆಚರಿಸಲ್ಪಡುವ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದೆ.
ವೈಜ್ಞಾನಿಕ ಹಾಗೂ ವೈಚಾರಿಕತೆಯ ನೆಲೆಯಲ್ಲಿ ದೇಶ ಕಟ್ಟುವ ಕನಸು ಕಂಡಿದ್ದ ರಾಜೀವ್ ಗಾಂಧಿಯವರು, ಭಾರತವನ್ನು ಸರ್ವಧರ್ಮ ಸಹಬಾಳ್ವೆಯ ರಾಷ್ಟ್ರವಾಗಬೇಕು ಎಂದು ಕೂಡ ಬಯಸಿದ್ದರು. ರಾಜೀವ್ ಗಾಂಧಿಯವರು ದೇಶದ ಅಭಿವೃದ್ಧಿಯ ಹೊಸ ಹಾದಿಯನ್ನು ತೋರಿದ್ದಾರೆ, ಇಂದು ನಾವೆಲ್ಲರೂ ಆ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪಗೈದು, ಮಹಾನ್ ಚೇತನದ ಜಯಂತಿಯನ್ನು ಅರ್ಥಪೂರ್ಣವಾಗಿಸೋಣ.