ಮಾಜಿ ಸೈನಿಕರಿಗೆ ಗೌರವ ಡಾಕ್ಟರೆಟ್
ರಾಮದುರ್ಗ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ರಾಮದುರ್ಗದ ಅಧ್ಯಕ್ಷರು, ನಿಸರ್ಗ ಪ್ರೇಮಿ, ಪರಿಸರವಾದಿ ರಾಮದುರ್ಗ ತಾಲೂಖಿನ ಕಮಕೇರಿ ಗ್ರಾಮದ ಮಾಜಿ ಯೋಧ ಶ್ರೀ ಶೇಷಪ್ಪ ಪೋತರಡ್ಡಿ ಅವರು ಗೌರವ ಡಾಕ್ಟರೆಟ್ ಮತ್ತು ನಾಡ ಪ್ರಭು ಕೆಂಪೇಗೌಡರ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣಾ ಪರಿಷತ ಸಂಘಟನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಡಾ. ನಂದಿದುರ್ಗ ಬಾಲುಗೌಡ್ರು ರವರು ಜೂಲೈ ೧೮ ಶನಿವಾರದಂದು ಬೆಂಗಳೂರಿನಲ್ಲಿ ರಾಜ್ಯ ಯುವಚೇತನ ಯುವಜನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ೫೧೭ ನೇ ಜಯಂತೊತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರ ಮಾಜಿ ಸೈನಿಕರ ಸಂಘಟನಾ ತಂತ್ರ ಮತ್ತು ವಿಶೇಷ ಸಮಾಜಮುಖಿ ಸೇವೆ ಗುರುತಿಸಿ ಅವರಿಗೆ ಯುನೈಟೆಡ್ ಯೂನಿವರ್ಸಿಟಿ ಆಫ್ ಅಮೇರಿಕಾ ರವರು ಕೊಡಮಾಡುವ ಗೌರವ ಡಾಕ್ಟರೆಟ್ ಮತ್ತು ಪ್ರತಿಷ್ಟಿತ ಕೆಂಪೇಗೌಡ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು, ಸಚಿವರುಗಳು, ಸಂಸದರು, ಸಾಹಿತಿಗಳು ಕಲಾವಿದರು ಇನ್ನೂ ಅನೇಕ ಗಣ್ಯರು ಸೇರಿದಂತೆ ಅನೇಕರು ಭಾಗವಹಿಸಿ ಪುರಸ್ಕೃತ ರಿಗೆ ಶುಭ ಹಾರೈಲಿದ್ದಾರೆ
Trending Now


