ಸತ್ಕಾರ್ಯ ಫೌಂಡೇಶನ್, ರಾಮದುರ್ಗ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾದ
ಗಾಳಿಪಟ ಉತ್ಸವ-2026 ಸಂಭ್ರಮದಿಂದ ನಡೆಯಿತು.
ಉತ್ಸವದಲ್ಲಿ ಸಾಲುಮರದ ತಿಮ್ಮಕ್ಕ, ಅಗ್ನಿಶಾಮಕ ದಳದವರು ಅಗ್ನಿ ನಂದಿಸುವ ದೃಶ್ಯ ಹಾಗೂ ವಿಘ್ನ ವಿನಾಯಕ ಗಣೇಶನ ಆಕೃತಿಯ ಗಾಳಿಪಟಗಳು ವಿಶೇಷ ಆಕರ್ಷಣೆಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು. ವೈವಿಧ್ಯಮಯ ಹಾಗೂ ಸೃಜನಾತ್ಮಕ ಗಾಳಿಪಟಗಳು ಉತ್ಸವದ ಕಳೆ ಹೆಚ್ಚಿಸಿವೆ.
ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ನಡೆದ,
ಈ ಗಾಳಿಪಟ ಉತ್ಸವದಲ್ಲಿ ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಸಂಗಮೇಶ ಉದಪುಡಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರು ಪದಾಧಿಕಾರಿಗಳು ಮಾಜಿ ಸೈನಿಕರುಗಳು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡರುಗಳಾದ ಪ್ರಕಾಶ ಸುಳಿಭಾವಿ ಮಲ್ಲಿಕಾರ್ಜುನ ಬಾವಿಕಟ್ಟಿ ಶ್ರೀಮತಿ ಸುನಿತಾ ತಿಮ್ಮನಗೌಡ್ರ್ ನಿವೃತ್ತ ಶಿಕ್ಷಕ ಸುರೇಶ ಕಲ್ಲೂರ ಅರಣ್ಯ ಇಲಾಖೆ ಸಿಬ್ಬಂದಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.



