ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಕೊಲೆ ಮಾಡಿದ ಕರಾಳದಿನ:ಬಸವರಾಜ ಬೊಮ್ಮಾಯಿ
ವಿಚ್ಚಿದ್ರ ಶಕ್ತಿಗಳ ವಿರುದ್ದ ಪ್ರಜಾಪ್ರಭುತ್ವ ಉಳಿಸಲು ದೇಶಭಕ್ತರು ಸಂಕಲ್ಪ ಮಾಡಬೇಕು:ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಭುತ್ವದ ಕಗ್ಗೊಲೆ ಮಾಡಿದ ಕರಾಳ ಸಂದರ್ಭದಲ್ಲಿ ನಾವೆಲ್ಲರೂ ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಉಳಿಸಲು ಕಂಕಣಬದ್ಧರಾಗುವಂತ ಸಂಕಲ್ಪ ಮಾಡುವ ದಿನ. ಈಗಲೂ ಕೂಡ ವಿಚಿದ್ರ ಶಕ್ತಿಗಳ ವಿರುದ್ಧ ನಾವೆಲ್ಲ ದೇಶಪ್ರೇಮಿಗಳು ಒಕ್ಕಟ್ಟಾಗುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಹೇಳಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು,”ತುರ್ತು ಪರಿಸ್ಥಿತಿಯನ್ನು ರಾಷ್ಟ್ರದ ಮೇಲೆ ಹೇರಿ 51 ವರ್ಷ ಕಳೆದಿದೆ. ತುರ್ತು ಪರಿಸ್ಥಿತಿ ಸ್ವತಂತ್ರ ನಂತರದ ಒಂದು ಕರಾಳ ಶಾಸನ. ಜನರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿ, ವಿರೋಧ ಪಕ್ಷದ ಎಲ್ಲಾ ನಾಯಕರನ್ನು ಜೈಲಿಗೆ ಕಳುಹಿಸಿ ಇಡೀ ಪ್ರಜಾಪ್ರಭುತ್ವವನ್ನು ಕೊಗ್ಗಲೆ ಮಾಡಿರುವಂತ ಒಂದು ದಿನ ಇದು ಎಂದು ನೆನಪಿಸಿದ್ದಾರೆ.
ಇಂದಿರಾಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನೀತಿಯಿಂದ ತಮ್ಮ ಪದವಿಯನ್ನು ಉಳಿಸಿಕೊಳ್ಳಲು ಇಡೀ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿರುವುದನ್ನು ನಾವ್ಯಾರು ಕೂಡ ಮರೆಯಲು ಸಾಧ್ಯ ಇಲ್ಲ. ತುರ್ತು ಪರಿಸ್ಥಿತಿಯ ನಂತರ ಜನ ಜಾಗೃತರಾಗಿ ಇವತ್ತು ಯಾವುದೇ ಕಾರಣಕ್ಕೂನು ನಮ್ಮ ಪ್ರಜಾಪ್ರಭುತ್ವವಾಗಲಿ, ನಮ್ಮ ಸಂವಿಧಾನವಾಗಲಿ ಎಲ್ಲೂ ಕೂಡ ಅದನ್ನು ಭಂಗ ಮಾಡುವಂತ ಯಾವುದೇ ವಿಚಾರಕ್ಕೆ ಬೆಂಬಲವನ್ನು ರಾಜ್ಯದ ಜನತೆ ಕೊಡುತ್ತಿಲ್ಲ, ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷ ಇವತ್ತು ವಿರೋಧ ಪಕ್ಷದಲ್ಲಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ತಕ್ಷಣವೇ ಸಂವಿಧಾನ ನನ್ನ ಧರ್ಮದ ಗ್ರಂಥ ಮತ್ತು ನಾನು ಪ್ರಧಾನ ಸೇವಕನಾಗಿ ಕೆಲಸ ಮಾಡುವುದೇ ನನ್ನ ಕರ್ತವ್ಯ ಅಂತ ಹೇಳಿ ಅದನ್ನ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಅವರು ನಿಜವಾದ ಸಂವಿಧಾನದ ರಕ್ಷಕ, ಭಾರತದ ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿಯವರು ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾವೆಲ್ಲರೂ ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಉಳಿಸಲು ಕಂಕಣಬದ್ಧರಾಗುವಂತ ಸಂಕಲ್ಪ ಮಾಡುವ ದಿನ. ಈಗಲೂ ಕೂಡ ವಿಚಿದ್ದ ಶಕ್ತಿಗಳ ವಿರುದ್ಧ ನಾವೆಲ್ಲ ದೇಶಪ್ರೇಮಿಗಳು ಒಕ್ಕಟ್ಟಾಗುವ ಅವಶ್ಯಕತೆ ಮತ್ತು ಅನಿವಾರ್ಯ ಇದೆ. ಅದನ್ನೆಲ್ಲರೂ ಕೂಡ ಮಾಡಬೇಕು ಎಂದು ವಿನಂತಿ ಮಾಡಿದ್ದಾರೆ.



