ಗ್ಯಾಸ್ ವಿತರಿಸುವಂತೆ ರಸ್ತೆ ತಡೆದು ಸಾರ್ವಜನಿಕರಿಂದ ಪ್ರತಿಭಟನೆ
ಯಾದಗಿರಿ ಜಿಲ್ಲೆಯ ಸುರಪುರ ನಗರದ ಇಂಡಿಯನ್ ಗ್ಯಾಸ್ ಕಂಪನಿಯಲ್ಲಿ ಕೆಲ ದಿನಗಳ ಹಿಂದೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ಗ್ಯಾಸ್ ಕಂಪನಿ ಬೀಗ ಹಾಕಲಾಗಿದ್ದು ಸುರಪುರ ನಗರದ ಸಾರ್ವಜನಿಕರು ಸೋಮವಾರ ಬೆಳಗ್ಗೆ 11 ಗಂಟೆಗೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ
ಸಂಬಂಧಪಟ್ಟ ಅಧಿಕಾರಿಗಳು ಇದರ ಕಡೆ ಗಮನ ಹರಿಸಿ ಕೊಡಲೇ ಇಂಡಿಯನ್ ಗ್ಯಾಸ್ ಕಂಪನಿ ತೆಗೆದು ಸಾರ್ವಜನಿಕರಿಗೆ ಗ್ಯಾಸ್ ವಿತರಿಸುವಂತೆ ಒತ್ತಾಯಿಸಿದರು
ಐದು ದಿನಗಳಿಂದ ಗ್ಯಾಸ್ ಕಂಪನಿ ಬಂದ್ ಆಗಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣಿಗೆ ಕಂಡರೂ ಕುರುಡನಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಬೇಸತ್ತು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು



