ಲಿಂಗಾಯತ ಪಂಚಮಸಾಲಿ ಸಮಾಜ , ತಾಲೂಕಾ ಘಟಕ ರಾಮದುರ್ಗ ಪ್ರತಿಭಾ ಪುರಸ್ಕಾರ-2025-26
ತಾಲೂಕ ಅಧ್ಯಕ್ಷ ಸಿಬಿ ಪಾಟೀಲ್ ಪಟ್ಟಣದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ. ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಮದುರ್ಗ ಪಟ್ಟಣದ
ಹೊರವಲಯದಲ್ಲಿರುವ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಜೂನ್-28 ರಂದ ರವಿವಾರ ಮುಂಜಾನೆ 11 ಘಂಟೆಗೆ ಏರ್ಪಡಿಸಲಾಗಿದೆ.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಮುಂದಿನ ವ್ಯಾಸಂಗಕ್ಕಾಗಿ ಪ್ರೋತ್ಸಾಹಿಸಲು 2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸತ್ಕರಿಸಲಾಗುತ್ತಿದೆ. ಎಂದು ಹೇಳಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಅವರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ ನಿಂಗಪ್ಪ ಪಿರೋಜಿ, ಪಂಚಮಸಾಲಿ ಸಮಾಜದ ತಾಲೂಕಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಬೈಲಹೊಂಗಲದ ನ್ಯಾಯವಾದಿ ಎಫ್. ಎಸ್. ಸಿದ್ದನಗೌಡ್ರ ಅತಿಥಿ ಉಪನ್ಯಾಸ ನೀಡಲಿದ್ದಾರೆ. ಲಿಂಗಾಯ ಪಂಚಮಸಾಲಿ ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ಸಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ವೀರರಾಣ ಚೆನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಪಿ.ಎಫ್. ಪಾಟೀಲ ಸೇರಿದಂತೆ ತಾಲೂಕಿನ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದು ತಿಳಿಸಿದರು
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕ ಪಡೆದ ರಾಮದುರ್ಗ ತಾಲೂಕಿನ ಪಂಚಮಸಾಲಿ ವಿದ್ಯಾರ್ಥಿಗಳು ಜೂನ್ 26 ಶುಕ್ರವಾರದೊಳಗಾಗಿ ತಮ್ಮ ಆಧಾರ್ ಕಾರ್ಡ್ ಹಾಗೂ ಅಂಕಪಟ್ಟಿ ದಾಖಲಾತಿಗಳನ್ನ ಸಿ ಬಿ ಪಾಟೀಲ್ 7760938111. ಗೌಡಪ್ ಗೌಡ ಪಾಟೀಲ್. 9980149264. ಮಂಜು ನವಲಗುಂದ 9742726708. ಎಂಎಸ್ ಕಿತ್ತಲಿ. 9980345748 ಇವರುಗಳನ್ನ ಸಂಪರ್ಕಿಸಿ ತಲುಪಿಸಬೇಕು ಜೂನ್ 26 ರ ನಂತರದ ಪ್ರತಿಭಾ ಪುರಸ್ಕಾರಕ್ಕೆ ದಾಖಲಾತಿಗಳನ್ನು ನೀಡಿದಲ್ಲಿ ಪರಿಗಣಿಸಲಾಗುವುದಿಲ್ಲ ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕಾಗಿ ವಿನಂತಿ. ಈ ಒಂದು ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಸಿಬಿ ಪಾಟೀಲ್ ವೈ ಎಚ್ ಪಾಟೀಲ್ ಪಿಎಫ್ ಪಾಟೀಲ್ ಮಂಜುನಾಥ ನವಲಗುಂದ್ ಉಮೇಶ್ ಕೊಳವಿ ನಾಗನಗೌಡ ಪಾಟೀಲ್. ಗೌಡಪ್ಪ ಗೌಡ ಪಾಟೀಲ್ ಉಪಸ್ಥಿತರಿದ್ದರು.



