Sunday, May 31, 2026
30.1 C
Belagavi

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

advertisement

spot_img

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ: ಬಸವರಾಜ ಬೊಮ್ಮಾಯಿ

ಹಾವೇರಿ: ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದಿರುವುದು ಡಿ.ಕೆ. ಶಿವಕುಮಾರ್‌ಗೆ ತೂಗು ಕತ್ತಿ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾಲ್ಕು ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿ ರಾಜಕೀಯ ಮಾಡಿದ್ದಾರೆ. 1983 ರಲ್ಲಿ ರಾಜಕೀಯಕ್ಕೆ ಬಂದಿದ್ದರು. ಅವರು ನಮ್ಮ ತಂದೆಯವರಿಗೆ ಆತ್ಮೀಯರಾಗಿದ್ದರು. ನಮ್ಮ ತಂದೆಯವರ ಕ್ಯಾಬಿನೆಟ್‌ನಲ್ಲಿ ಸ್ಟೇಟ್ ಮಿನಿಸ್ಟರ್ ಇದ್ದರು. ನಂತರ ಕ್ಯಾಬಿನೆಟ್ ಮಂತ್ರಿ ಮಾಡಿದರು. ಎಲ್ಲಕ್ಕಿಂತ ಹೆಚ್ಚು ಅವರು ಅಹಿಂದ ಮಾಡಿದಾಗ ನಾನೊಬ್ಬನೇ ಅಹಿಂದ ವರ್ಗ ಬಿಟ್ಟು ಮುಖ್ಯ ಭಾಷಣ ಮಾಡಿದ್ದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಸನ್ಮಾನ ಸಮಾರಂಭಕ್ಕೆ ಬಂದಾಗ ಅವರೇ ನೆನಪು ಮಾಡಿದ್ದರು. ಹಲವಾರು ಪ್ರಕರಣಗಳು ಇವೆ. 2007 ರಲ್ಲಿ ಜೆಡಿಎಸ್‌ನಿಂದ ಹೊರ ಬಂದು ಕಾಂಗ್ರೆಸ್ ನಿಂದ ಉಪ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗ ನಾನು ಅವರಿಗೆ ಸಹಾಯ ಮಾಡಿದ್ದೆ. ಯಾವಾಗ ಅವರಿಗೆ ಕಷ್ಟ ಕಾಲ ಬಂದಿದೆ ಆಗ ಸಹಾಯ ಮಾಡಿದ್ದೇ. ಯಾವಾಗ ಅವರು ಕಾಂಗ್ರೆಸ್‌ಗೆ ಹೋದರೋ ಆಗ ಅವರ ರಾಜಕೀಯ ಸಿದ್ದಾಂತ ಬೇರೆ ಬೇರೆಯಾಗಿದೆ. ರಾಜಕೀಯವಾಗಿ ಯಾವತ್ತೂ ಹೊಂದಾಣಿಕೆ ಆಗಿಲ್ಲ. ವಯಕ್ತಿಕವಾಗಿ ಸಂಬಂಧ ಚೆನ್ನಾಗಿ ಇದೆ ಎಂದು ಹೇಳಿದರು.

ಒಬಿಸಿಗೆ ಆಘಾತ
ಸಿದ್ದರಾಮಯ್ಯ ಸಮಾಜವಾದಿಯಾಗಿ ಸಾಮಾಜಿಕ ಕಳಕಳಿ ಇರುವ ನಾಯಕ, ಅವರನ್ನು ತೆಗೆಯುವ ಮೂಲಕ ಹಿಂದುಳಿದ ವರ್ಗದ ನಾಯಕನಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಮಂಡಲ್ ಕಮಿಷನ್ ನಿಂದ ಹಿಡಿದು ಯಾವಾಗಲೂ ಅನ್ಯಾಯ ಮಾಡುತ್ತ ಬಂದಿದ್ದಾರೆ. ರಾಜೀವ್ ಗಾಂಧಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಯಾಕೆ ಬೇಕು ಎಂದು ಕೇಳಿದ್ದರು. ರಾಹುಲ್ ಗಾಂಧಿ ಜಾತಿ ಗಣತಿ ಮಾಡಬೇಕು ಎನ್ನುತ್ತಾರೆ. ಒಬಿಸಿಗೆ ಪರ ಮಾತನಾಡುತ್ತಲೇ ಒಬಿಸಿ ಮುಖ್ಯಮಂತಿಯನ್ನು ತೆಗೆದು ಹಾಕಿದ್ದಾರೆ. ಒಬಿಸಿ ಬಗ್ಗೆ ಇವರಿಗೆ ಏನು ಬದ್ಧತೆ ಇದೆ. ಹೀಗಗಾಗಿ ಕರ್ನಾಟಕದಲ್ಲಿ ಒಬಿಸಿ ಜನರು ಭ್ರಮ ನಿರಶನಗೊಂಡಿದ್ದಾರೆ. ಸಿದ್ದರಾಮಯ್ಯ ಸುಮ್ಮನಿರಬಹುದು. ಅವರ ಭಾವನೆ ಅರ್ಥ ಮಾಡಿಕೊಂಡಿರುವ ಜನ ಸುಮ್ಮನಿರಲ್ಲ. ಅದರ ಪರಿಣಾಮ ಆಗುತ್ತದೆ ಎಂದು ಹೇಳಿದರು.

ಈ ಬೆಳವಣಿಗೆಯಿಂದ ಬಿಜೆಪಿಗೆ ಪ್ಲಸ್ ಮೈನಸ್ ಅನ್ನುವುದಕ್ಕಿಂತ ಯಾರು ಅವರನ್ನು ನಂಬಿಕೊಂಡಿದ್ದರೋ ಅವರ ಮನಸ್ಸಿಗೆ ಗೌರವಕ್ಕೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ಮಾಡಿದೆ. ಅದರ ರಾಜಕೀಯ ಪರಿಣಾಮ ಖಂಡಿತವಾಗಿ ಆಗುತ್ತದೆ. ಈಗ ಯಾರೂ ಕೂಡ ದಡ್ಡರಿಲ್ಲ. ದಲಿತ ಸಿಎಂ ಆಗುತ್ತಾರೆ ಎನ್ನುವ ಆಶಾ ಭಾವನೆ ಇತ್ತು. ಅದು ಕೂಡ ನಿರಾಶೆಯಾಗಿದೆ. ಅಲ್ಪ ಸಂಖ್ಯಾತರೂ ಗ್ರ್ಯಾಂಟೆಡ್ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದಾರೆ. ನಾವು ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಸೋಸಿಯಲ್ ಇಂಜನೀಯರಿಂಗ್‌ಗೆ ಒತ್ತು ಕೊಟ್ಟರೆ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪಕ್ಷ ಗಮನ ಹರಿಸುತ್ತದೆ ಎಂದರು.

ಭ್ರಮ ನಿರಸನ
ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸುತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಸ್ಪಷ್ಟ ಬಹುಮತ ಇದೆ. ಆದರೆ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಎಷ್ಟು ಜನರಿಗೆ ಸಚಿ ವ ಸ್ಥಾನ ಸಿಗುತ್ತದೆ ಅವರನ್ನು ಹೇಗೆ ನಡೆಸುಕೊಳ್ಳುತ್ತಾರೆ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ. ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಿದೆ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ ಎನ್ನುವುದು ತೂಗುವ ಕತ್ತಿ. ತೂಗುವ ಕತ್ತಿ ಬೀಳುವುದೇ ಹೆಚ್ಚು. ಈ ಮೂರು ವರ್ಷದ ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ. ಎಸ್ಸಿ ಎಸ್ಟಿ, ಒಬಿಸಿ ಜನರು ಬೇಸರಗೊಂಡಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಈ ಸರ್ಕಾರದ ವಿರುದ್ಧ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯಲ್ಲಿ ಬಹುಮತಕ್ಕೆ ಬರುತ್ತದೆ. ಈಗಿನ ಬೆಳವಣಿಗೆ ಅದಕ್ಕೆ ಪೂರಕವಾಗಿದೆ. ಕುಣಿಯಲು ಬಾರದವಳು ನೆಲ ಡೊಂಕು ಅಂದಂತೆ ಕೇಂದ್ರದ ಮೇಲೆ ಆರೋಪ ಮಾಡುತ್ತಾರೆ. ನಾನು ಸಿಎಂ ಆಗಿದ್ದಾಗ ಪೂರಕ ಬಜೆಟ್ ಮಂಡನೆ ಮಾಡಿದ್ದೆ, 14 ನೇ ಹಣಕಾಸು ಯುಪಿಎ ಸರ್ಕಾರದ ಅವಧಿಯಲ್ಲಿ ಬಂದಿತ್ತು. ಅದಕ್ಕಿಂತ ಹೆಚ್ಚು 1 ಲಕ್ಷ ಕೋಟಿ 15 ನೇ ಹಣಕಾಸು ಆಯೋಗದಿಂದ ಕರ್ನಾಟಕ್ಕೆ ಬಂದಿದೆ. ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ಮಾಡಿದ್ದಾರೆ. ಶಿವಕುಮಾರ್ ಮುಂದೆ ಎಲ್ಲವನ್ನು ಸುಸ್ಥಿತಿಯಲ್ಲಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷದಲ್ಲಿ ಸುಮಾರು 4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲ ತೆಗೆದುಕೊಂಡು ಆಸ್ತಿ ಮಾಡಿಲ್ಲ. ಗ್ಯಾರೆಂಟಿಗಳಿಗೆ ನೀಡಿದ್ದಾರೆ. ಇದರಿಂದ ರಾಜ್ಯಕ್ಕೆ ಆಸ್ತಿ ನಿರ್ಮಾಣ ಆಗಿಲ್ಲ. ಅದರಿಂದ ರಾಕ್ಕೆ ಆದಾಯ ಬರುವುದಿಲ್ಲ ಎಂದರು.

ಸ್ನೇಹಕ್ಕೆ ರಾಜಕಾರಣಕ್ಕೆ ಸಂಬಂಧ ಇಲ್ಲ. ಕಾಂಗ್ರೆಸ್ ಸೋತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ತಳವರ್ಗದ ಓಟ್ ಬ್ಯಾಂಕ್ ಕ್ರಿಯೆಟ್ ಮಾಡಿದ್ದರು. ಅವರನನು ನಡೆಸಿಕೊಂಡ ರೀತಿ ಸರಿಯಲ್ಲ. ಈ ಸಂದರ್ಭದಲ್ಲಿ ರಾಹುಲ್ ಒಬಿಸಿ ಬಗ್ಗೆ ಮಾತನಾಡಿ ಒಬಿಸಿ ನಾಯಕನನ್ನು ಇಳಿಸುವುದು ಎಷ್ಟು ಸರಿ, ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಯಾವಾಗಲೂ ಎಟಿಎಂ. ಯಾರು ಮಾಸ್ ನಾಯಕರಾಗುತ್ತಾರೆ ಅವರನ್ನು ಅದೇ ರೀತಿ ಬಳಸಿಕೊಂಡಿದ್ದಾರೆ. ದೇವರಾಜ್ ಅರಸು ಆರು ವರ್ಷ ಮುಖ್ಯಮಂತ್ರಿ ಯಾಗಿದ್ದರು. 78ರಲ್ಲಿ ಗೆದ್ದು ಅಧಿಕಾರಕ್ಕೆ ಬಂದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ವೀರೇಂದ್ರ ಪಾಟೀಲರು, ಬಂಗಾರಪ್ಪ ಅವರನ್ನು ತೆಗೆದರು. ಸಿದ್ದರಾಮಯ್ಯ ಅದೇ ಸಾಲಿಗೆ ಬರುತ್ತಾರೆ.

ಈ ರಾಜ್ಯದಲ್ಲಿ ಏಳು ವರ್ಷ ಅಧಿಕಾರ ಮುಗಿಸಿದ ಸಿಎಂಗಳಿಗೆ ಆಘಾತ ಬರುತ್ತದೆ. ನಿಜಲಿಂಗಪ್ಪನವರು ಎರಡನೇ ಅವಧಿಗೆ ಸಿಎಂ ಆಗಿದ್ದಾಗ ಏಳು ವರ್ಷಕ್ಕೆ ಅಧಿಕಾರ ಕಳೆದುಕೊಂಡರು. ಅದೇ ರೀತಿ ದೇವರಾಜ ಅರಸು. ರಾಮಕೃಷ್ಣ ಹೆಗಡೆ ಈಗ ಸಿದ್ದರಾಮಯ್ಯ ಇದು ಒಂದು ರೀತಿ ಸೆವೆನ್ ಈಯರ್ ಸಿಂಡ್ರೋಮ್ ಎಂದು ವ್ಯಾಖ್ಯಾನಿಸಿದರು.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img