Monday, June 1, 2026
26.1 C
Belagavi

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

advertisement

spot_img

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಸೋಲು, ಗೆಲುವು ಮೀರಿ ಸೇವೆ ಮಾಡುವ ಮನೋಭಾವನೆ ಮುಖ್ಯ: ಬಸವರಾಜ ಬೊಮ್ಮಾಯಿ

ಹಾವೇರಿ:(ಶಿಗ್ಗಾವಿ) ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ಕೊಟ್ಟರೆ ಅವರು ದೇಶದ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ಬರೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ನಗರದ ಸವಣೂರ ರಸ್ತೆಯಲ್ಲಿರುವ ಶ್ರೀ ಬಸವರಾಜ ಬೊಮ್ಮಾಯಿರವರ ನಿವಾಸದಲ್ಲಿ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಟ್ರಸ್ಟ್, ಶ್ರೀ ಸೋಮಪ್ಪ ಆರ್ ಬೊಮ್ಮಾಯಿ ಟ್ರಸ್ಟ್ ಹಾಗೂ ಶ್ರೀ ಭರತ ಬೊಮ್ಮಾಯಿರವರ ನೇತೃತ್ವದಲ್ಲಿ ಶಿಗ್ಗಾಂವ – ಸವಣೂರ ತಾಲೂಕಿನ ಯುವ ಉದ್ಯೋಗಾಕಾಂಕ್ಷಿಗಳಿಗೆ ಏರ್ಪಡಿಸಿದ ಬೃಹತ್ ಉದ್ಯೋಗ ಸಮ್ಮೇಳನ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಲ್ಲಿಯ ಯುವಕರನ್ನು ನೋಡಿದಾಗ ಉದ್ಯೋಗದ ಬಗ್ಗೆ ಅವರಿಗೆ ಇರುವ ಆಸಕ್ತಿ ನೋಡಿದಾಗ ಬಹಳ ಸಂತೋಷವಾಗಿದೆ. ಒಂದು ಕ್ಷೇತ್ರ ಮುಂದೆ ಬರಬೇಕು ಎಂದರೆ ಆರೋಗ್ಯ, ಶಿಕ್ಷಣದ ಜೊತೆಗೆ ಉದ್ಯೋಗ ಬಹಳ ಮುಖ್ಯ. ಕುಟುಂಬದಲ್ಲಿ ಒಬ್ಬರು ಉದ್ಯೋಗದಲ್ಲಿದ್ದರೆ ಒಂದು ಕುಟುಂಬ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದು ಬಹಳ ಅವಶ್ಯ ಇದೆ. ನಾನು ಸಂಸತ್ತಿನಲ್ಲಿ ಕಾರ್ಮಿಕ, ಉದ್ಯೋಗ, ಜವಳಿ, ಕೌಶಲ್ಯ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷನಿದ್ದೇನೆ. ಇವೆಲ್ಲವೂ ಉದ್ಯೋಗಕ್ಕೆ ಸಂಬಂಧಿಸಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತಿಯಾಗಿದ್ದಾಗ ಕೌಶಲ್ಯ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದರು. ಅವರು ಪ್ರಧಾನಿಯಾಗಿ ಕೌಶಲ್ಯ ಅಭಿವೃದ್ಧಿಗೆ ಒಂದು ಪತ್ಯೇಕ ಇಲಾಖೆ ಮಾಡಿದ್ದಾರೆ. ಇದರಂದ ಕರ್ನಾಟಕಕ್ಕೆ ಪ್ರತಿ ವರ್ಷ ಸುಮಾರು 400 ಕೋಟಿಗಿಂತಲೂ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಅದಕ್ಕೆ ಸಾಂಸ್ಥಿಕ ರೂಪ ಕೊಡಬೇಕೆಂದು ನಾವು ಶಿಫಾರಸ್ಸು ಮಾಡಿದ್ದೇವೆ ಎಂದು ಹೇಳಿದರು.ಅಲ್ಪಾವಧಿ ಕೋರ್ಸ್
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಐಟಿಐ, ಡಿಪ್ಲೋಮಾ, ಮಹಿಳಾ ಐಟಿಐ ಇವೆ. ಇವುಗಳಲ್ಲಿ ಅಲ್ಪಾವಧಿ ಕೌಶಲ್ಯ ತರಬೇತಿ ಕೋರ್ಸ್ ಮಾಡಬೇಕೆಂಬ ಬಯಕೆ ಇದೆ. ಕೌಶಲ್ಯಪಡೆದವರಿಗೆ ನೇರವಾಗಿ ನೌಕರಿಗೆ ಸೇರಲು ಅವಕಾಶ ಕಲ್ಪಿಸುವಂತಾಗಬೇಕು. ಇದನ್ನು ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇದು ನಮ್ಮ ಪಧಾನಿಗಳು ನಮಗೆ ಕೊಟ್ಟಿರುವ ಆದೇಶ. ನಮ್ಮ ಸಮಿತಿ ಆದಷ್ಟು ಬೇಗ ಹಾವೇರಿಗೆ ಬರುತ್ತದೆ. ಇಲ್ಲಿ 8 ಟೆಕ್ಸ್‌ಟೈಲ್ ಪಾರ್ಕ್ ಮಾಡಲಾಗುತ್ತಿದೆ ಹಾವೇರಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಜಮೀನು ನೀಡಿದರೆ ಆದಷ್ಟು ಬೇಗ ಹಾವೇರಿ ಟೆಕ್ಸ್‌ಟೈಲ್ ಪಾರ್ಕ್ ಮಾಡಲು ಕ್ರಮ ವಹಿಸಲಾಗುವುದು. ನಾನು ಶೀಗ್ಗಾವಿಯಲ್ಲಿ 20 ಸಾವಿರ ಜನರಿಗೆ ಉದ್ಯೋಗ ಕೊಡಬೇಕೆಂದು 15 ಸಾವಿರ ಜನ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಬೇಕೆಂದು 50 ಎಕರೆ ಜಮೀನು ಕೊಟ್ಟು ಒಂದು ಆಂಕರ್ ಇಂಡಸ್ಟ್ರೀ ಇಲ್ಲಿ ಆರಂಭವಾಗಿದೆ. ಇಲ್ಲಿ ತಯಾರಾಗುವ ಬಟ್ಟೆಗಳು ಅಮೇರಿಕಕ್ಕೆ ಹೋಗುತ್ತವೆ. ಸಾಯಿ ಗಾರ್ಮೆಂಟ್ಸ್‌ನಲ್ಲಿ ತಯಾರಾಗುವ ಬಟ್ಟೆಗಳು ಜಪಾನ್‌ಗೆ ಕಳುಹಿಸುತ್ತಾರೆ. ಕಾಣಲಾರದ ಕನಸು ನನಸಾಗಿರುದು ಶಿಗ್ಗಾವಿ ತಾಲೂಕಿನಲ್ಲಿ ಆಗಿದೆ ಎಂದರು.

ಜನರಿಗೆ ಮೂಲಬೂತ ಸೌಕರ್ಯ ಕೊಡುವುದು ನಮ್ಮ ಕರ್ತವ್ಯ. ಅದರ ಜೊತೆಗೆ ಜನರ ಭವಿಷ್ಯ ರೂಪಿಸುವ ಕೆಲಸ ಮಾಡುವುದು ನಿಜವಾದ ಜನನಾಯಕನ ಕೆಲಸ ಅದಕ್ಕೆ ಮೂರು ಬಹಳ ಮುಖ್ಯ. ಅದಕ್ಕೆ ಶಿಕ್ಷಣ, ಉದ್ಯೋಗ, ಎಂಪಾವರಮೆಂಟ್ ಇದನ್ನು ಯುವಕರಿಗೆ ಕೊಟ್ಟರೆ ದೇಶದ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ಬರೆಯುತ್ತಾರೆ. ಇಲ್ಲಿ ಡಿಪ್ಲೋಮಾ ಕಾಲೇಜು, ಎರಡು ಐಟಿಐ ಕಾಲೇಜು ಮಾಡಿದ್ದೇವೆ. ರೊಬೊಟಿಕ್ಸ್ ಕಲಿಸುವ ಮಷಿನ್‌ಗಳನ್ನು ಇಲ್ಲಿಗೆ ತಂದಿದ್ದೇವೆ. ಜಿಟಿಟಿಸಿಯಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಆಗುತ್ತಿದೆ. ನಾನು ಸಿಎಂ ಆದ ತಕ್ಷಣ ಜಿಟಿಟಿಸಿಗೆ 67 ಕೋಟಿ ರೂ. ಕೊಟ್ಟಿದ್ದೇನೆ 1984 ರಲ್ಲಿ ನಾನು ಜಿಟಿಟಿಸಿಯಲ್ಲಿ ಕೆಲಸ ಮಾಡಿದ್ದೇನೆ. ಟಾಟಾ ದಲ್ಲಿ ಕೆಲಸ ಮಾಡಿದ್ದೇನೆ. ವೆಟರ್‌ನರಿ ಡಿಪ್ಲೋಮಾ ತಂದಿದ್ದೇವೆ. ನಾನು ಮಾಡಿರುವ ಎಲ್ಲ ಕೆಲಸಗಳು ಯಶಸ್ವಿಯಾಗಿವೆ ಎಂದೇನಿಲ್ಲ. ಸವಣೂರಿನಲ್ಲಿ ಎನ್‌ಟಿಟಿಎಫ್ ತಂದಿದ್ದೇ ನಾನು. ಅದಕ್ಕೆ ಏಳನೇಯತ್ತೆ ಪಾಸ್ ಆಗಿದ್ದರೆ ಸಾಕು. ಅಲ್ಲಿ ತರಬೇತಿ ಪಡೆದವರಿಗೆ ಎಲ್ಲರಿಗೂ ಕೆಲಸ ಸಿಕ್ಕಿದೆ. ಆದರೆ, ಯುವಕರು ಮುಂದೆ ಬರಲಿಲ್ಲ. ಶಿಗ್ಗಾವಿಯಲ್ಲಿಯೂ ಒಂದು ತೆರೆದೆವು. ಸುಮಾರು ಸರ್ಕಾರ ಹಾಗೂ ಖಾಸಗಿಯವರಿಂದ ಎರಡು ಮೂರು ಕೋಟಿ ಖರ್ಚು ಮಾಡಿದೆವು. ಅಲ್ಲಿಯೂ ಯುವಕರು ಬರಲಿಲ್ಲ. ನಾವು ಹಂತ ಹಂತವಾಗಿ ಪ್ರಯತ್ನ ಮಾಡಿದ್ದು ವಿಫಲವಾದರೂ ನಾವು ಬಿಡಲಿಲ್ಲ. ಐಟಿಐ, ಟೆಕ್ಸ್‌ಟೈಲ್ ಟ್ರೈನಿಂಗ್ ಸೆಂಟರ್ ತಂದಿದ್ದೇವೆ. ಇಲ್ಲಿ ಟೊಯೊಟಾ ಕಂಪನಿ ತಂದಿದ್ದೇವೆ. ಬಿಡದಿಯಲ್ಲಿ ಟೊಯೊಟಾ ಸಂಸ್ಥೆ ಬರಲು ನನ್ನ ಶ್ರಮ ಬಹಳ
ಇದೆ. ಐಫೋನ್ ತಯಾರಿಸುವ ಪಾಕ್ಸ್ ಕಾನ್ ಕಂಪನಿಗೆ ನೂರು ಎಕರೆ ಜಮೀನು ಕೊಟ್ಟು ನಾನೇ ಅನುಮತಿ ಕೊಟ್ಟೆ ಅವರು ಇಲ್ಲಿ ನೇಮಕಾತಿ ಮಾಡಿಕೊಳ್ಳಲು ಬಂದಿದ್ದಾರೆ. ನಾವು ಮಾಡಿರುವ ಒಳ್ಳೆಯ ಕೆಲಸ ಈಗ ಅನುಕೂಲವಾಗಿದೆ. ಟಾಟಾ ಕಂಪನಿಯವರು ಬಂದಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತ ಹೋಗಬೇಕು. ಅದರಿಂದ ನಮ್ಮ ಜನರು, ಕ್ಷೇತ್ರ, ತಾಲೂಕಿಗೆ ಅನುಕೂಲವಾಗುತ್ತದೆ ಎಂದರು.ಸೋಲು ಅಂತ್ಯವಲ್ಲ
ರಾಜಕಾರಣ ಮಾಡುವುದು ಬೇರೆ. ನಮ್ಮ ಮಕ್ಕಳು, ಹೆಣ್ಣು ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಡಬೇಕು ಅಂದರೆ ಅದು ಬಹಳ ದೊಡ್ಡ ಪುಣ್ಯ ಯಶಸ್ಸು ನಿರಂತರ ನಡೆಯುತ್ತದೆ. ಸೋಲು ಅಂತ್ಯವಲ್ಲ. ಯಶಸ್ಸು ಶಾಸ್ತ್ರತ ಅಲ್ಲ. ಸೋಲು ಮತ್ತು ಗೆಲುವಿನ ನಡುವೆ ಸ್ಥಿತ ಪಜ್ಞೆ ಇಟ್ಟುಕೊಂಡು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎನ್ನುವ ಇಚ್ಚಾಶಕ್ತಿ ಇದ್ದರೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ. ಮತ ಹಾಕದಿದ್ದರೂ ಅವರ ಸೇವೆ ಮಾಡಿ ವಿಶ್ವಾಸ ಗಳಿಸಿದರೆ ಜನನಾಯಕರಾಗುತ್ತೀರಿ. ಸೋಲು ಗೆಲುವು ಮಿರಿ ಸೇವೆ ಮಾಡುವ ಮನೋಭಾವನೆ ಇವತ್ತಿನ ಸಮ್ಮೇಳನವಾಗಿದೆ. ಇದು ನಿರಂತರವಾಗಿ ನಡೆಯಬೇಕು. ಸುಮಾರು 2 ಸಾವಿರ ಜನರಿಗೆ ಉದ್ಯೋಗ ಕೊಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅಷ್ಟು ಜನರಿಗೆ ನೀಡಲು ಆಗಿಲ್ಲ. ಕನಿಷ್ಠ ನಾಲ್ಕು ತಿಂಗಳಿಗೊಮ್ಮೆ ಉದ್ಯೋಗ ಮೇಳ ಮಾಡಬೇಕು ಎಂದು ಹೇಳಿದರು.

ಜನ ಸಂಪರ್ಕ
ಸಣ್ಣ ರೈತರಿಗೆ ಡೋಣ್ ಗಳನ್ನು ಕಡಿಮೆ ದರದಲ್ಲಿ ನಿಡಿ ಅದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತದೆ. ಯುವಕರಿಗೆ ಚುನಾವಣೆಯಲ್ಲಿ ಸೋತಾಗ ಜನ ಸಂಪರ್ಕದಿಂದ ದೂರ ಉಳಿಯುತ್ತಾರೆ. ಆದರೆ, ಭರತ್ ಜನ ಸಂಪರ್ಕ ಇಟ್ಟುಕೊಂಡು ಹೆಲ್ತ್ ಕ್ಯಾಂಪ್, ಉದ್ಯೋಗ ಮೇಳ ಸೇರಿದಂತೆ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ. ಶಿಗ್ಗಾವಿಗೆ ಟೆಕ್ಸ್‌ಟೈಲ್ ಪಾರ್ಕ್ ತರುವಲ್ಲಿ ಭರತ್‌ ಪಾತ್ರ ದೊಡ್ಡದಿದೆ. ಹೆಣ್ಣು ಮಕ್ಕಳು ಬಹಳ ಸಂತೋಷವಾಗಿದ್ದಾರೆ. ಮಕ್ಕಳ ಸ್ಕೂಲ್ ಫೀ. ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಿದೆ. ಬಹಳ ಕುಟುಂಬಗಳು ನೆಮ್ಮದಿ ಕಂಡುಕೊಂಡಿವೆ. ಒಳ್ಳೆಯ ಕೆಲಸ ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು. ನಮ್ಮ ಸೇವೆಯಲ್ಲಿ ಪುಣ್ಯಗಳಿಸುವ ಕೆಲಸ ಮಾಡಬೇಕು. ಕೈಯಲ್ಲಿ ಒಳ್ಳೆಯ ಕೆಲಸ, ಹೃದಯದಲ್ಲಿ ಒಳ್ಳೆಯ ಭಾವನೆ, ಎದೆಯಲ್ಲಿ ಸುವಿಚಾರ ಇಟ್ಟುಕೊಂಡು ಬದುಕಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಅದಕ್ಕಿಂತ ಮಾನವೀಯ ಕೆಲಸ ಇನ್ನೊಂದಿಲ್ಲ ಎಂದು ಸಿದ್ದೇಶ್ವರ ಸ್ವಾಮಿಜಿ ಹೇಳಿದ್ದಾರೆ. ನಮ್ಮ ಕ್ಷೇತದ ಯುವಕರು ವಿಜ್ಞಾನಿ, ವೈದ್ಯರು, ಐಎಎಸ್ ಆಫಿಸರ್ ಆಗಬೇಕು. ಆ ಮಟ್ಟಕ್ಕೆ ನಮ್ಮ ಶಿಕ್ಷಣ ತರಬೇಕೆನ್ನುವುದು ನಮ್ಮ ಕನಸಾಗಿದೆ. ಆ ನಿಟ್ಟಿನಲ್ಲಿ ನಾವು ಪಯತ್ನ ಮಾಡುತ್ತೇವೆ.
ಜೂನ್ 6 ಕ್ಕೆ ನಮ್ಮ ತಂದೆಯ ಹುಟ್ಟು ಹಬ್ಬ ಇದೆ. ಅಂದು ಶಿಗ್ಗಾವಿ, ಸವಣೂರು, ಬಂಕಾಪುರದ ಕಾಲೇಜುಗಳಲ್ಲಿ ಯಾರು ಹೆಚ್ಚು ಅಂಕ ಪಡೆದಿದ್ದಾರೆ. ಅವರಿಗೆ ಸ್ಕಾಲರ್‌ಶಿಪ್ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಯುವ ಮುಖಂಡರಾದ ಭರತ ಬೊಮ್ಮಾಯಿ, ಶಿಗ್ಗಾಂವ ಮಂಡಳದ ಅಧ್ಯಕ್ಷರಾದ ಈಶ್ವರ ಹರವಿ, ಸವಣೂರ ಮಂಡಳದ ಅಧ್ಯಕ್ಷರಾದ ಶಿವಪುತ್ರಪ್ಪ ಕಲಕೋಟಿ, ಬಿ.ಜೆ.ಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷರಾದ ಗಂಗಾಧರ ಬಾಣದ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷರಾದ ಶಿವಾನಂದ ಮ್ಯಾಗೇರಿ, ಕಂಪನಿಯ ಆಯೋಜಕರಾದ ಶ್ರೀನಿವಾಸ ಟಿ.ಎನ್, ಕೌಶಿಕ ರಾಜು, ಕೆ.ಎಂ.ಎಫ್ ನಿರ್ದೇಶಕರಾದ ತಿಪ್ಪಣ್ಣ ಸಾತಣ್ಣವರ, ಜಿ.ಟಿ.ಟಿ.ಸಿ ಪ್ರಾಚಾರ್ಯರಾದ ಸಂತೋಷಕುಮಾರ, ಮುಖಂಡರುಗಳಾದ ಎಂ.ಎನ್ ಹೊನಕೇರಿ, ನವೀನ ಸವಣೂರ, ಧರೆಪ್ಪಗೌಡ ಪಾಟೀಲ್, ಶಂಕರಗೌಡ ಪೋಲಿಸಗೌಡ್ರ, ಶ್ರಿಒಮತಿ ಶೋಭಾ ನಿಸ್ಸಿಮಗೌಡ್ರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img