ಅಥಣಿಯಲ್ಲಿ ಯೂರಿಯಾ ಸಮಸ್ಯೆಯೋ?? ಅಥವಾ ಅಧಿಕಾರಿಗಳ ಕರಾಮತ್ತೋ..?
ಬೆಳಗಾವಿ : ಅಥಣಿ ತಾಲೂಕಿನ ಉತ್ತರ ಭಾಗದ ಅನಂತಪುರ ಹೋಬಳಿಯಲ್ಲಿ ಸುದೈವದಿಂದ ಮಳೆರಾಯ ಕಣ್ಣು ತಗೆದು ನಿರಂತರ ಮಳೆ ಬಿದ್ದ ಪರಿಣಾಮ ರೈತ ಬೆಳೆಗೆ ಬೇಕಾದ ರಸಗೊಬ್ಬರ ಕೊರತೆಯಿಂದ ಕಂಗಾಲಾಗಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ, ರೈತ ದೀಪಕ ಬುರ್ಲಿ ಆರೋಪಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಯೂರಿಯಾಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇದ್ದು ಅದಕ್ಕೆ ತಕ್ಕಂತೆ ರಸಗೊಬ್ಬರ ಸಿಗುತ್ತಿಲ್ಲ, ಅನಧಿಕೃತವಾಗಿ ವ್ಯಾಪರ ಮಾಡುವ ವ್ಯಾಪರಸ್ಥರಲ್ಲಿ ಹೆಚ್ಚಿನ ಬೆಲೆ ನೀಡಿ ಕೊಂಡು ಬೆಳೆ ಸಂರಕ್ಷಣೆ ಮಾಡ ಬೇಕಾದ ಅನಿವಾರ್ಯತೆ ರೈತನದ್ದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ನೋಟಕ್ಕೆ ಹೃದಯವಂತಿಕೆಯ ಸ್ಪರ್ಶ ಸಿಕ್ಕಾಗ ಅದ್ಭುತ ಫೋಟೋ ಜರ್ನಲಿಸ್ಟ್ ಹುಟ್ಟುತ್ತಾನೆ
ಅಥಣಿ ತಾಲೂಕಿನ ಉತ್ತರ ಭಾಗದಲ್ಲಿ ಸಹಕಾರ ಸೂಸೈಟಿಗಳು ಕಡಿಮೆ ಸಂಖ್ಯೆಯಲ್ಲಿ ಇದ್ದು ಅವರ ಮುಖಾಂತರ ವಿತರಣೆ ಮಾಡುತ್ತೆವೆ ಎಂದು ಅಧಿಕಾರಿಗಳ ಸಮರ್ಪಕ ಉತ್ತರ ನೀಡದೆ ಜಾರಿಕೊಳ್ಳುತ್ತಿದ್ದು ರೈತ ಕಂಗಾಲಾಗಿದ್ದರೆ. ಕಾಳಸಂತೆಯಲ್ಲಿ ಸಿಗುವ ಗೊಬ್ಬರ ಅಧಿಕೃತ ವಿತರಕರಿಗೆ ಯಾಕೆ ಕೊಡುತ್ತಿಲ್ಲ ಎಂದು ಬುರ್ಲಿ ಪ್ರಶ್ನಿಸಿದ್ದಾರೆ.
ಹೀಗೆ ಪರಿಸ್ಥಿತಿ ಮುಂದುವರೆದರೆ ರೈತರು, ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಲಿದೆ. ಅದಕ್ಕಿಂತ ಮೊದಲು ರೈತರ ಬೆಳೆಗೆ ಅನುಕೂಲ ಮಾಡಿಕೊಡುವುದು ಅಧಿಕಾರಗಳ ಕರ್ತವ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.